ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆಗೆ ಬಂತು ದಸರಾ ಕಳೆ

|
Google Oneindia Kannada News

ಮೈಸೂರು, ಅಕ್ಟೋಬರ್ 3: ಮೈಸೂರು ದಸರಾ ಮಹೋತ್ಸವದ ಸೂತ್ರಧಾರಿಗಳಾದ ಅಭಿಮನ್ಯು ನೇತೃತ್ವದ ಗಜಪಡೆ ಅರಮನೆಗೆ ಪ್ರವೇಶ ಪಡೆಯುವುದರೊಂದಿಗೆ ಈ ಬಾರಿಯ ದಸರಾಕ್ಕೆ ಕಳೆ ಬಂದಿದೆ.

ಸಾಂಪ್ರದಾಯಿಕ ಮತ್ತು ಸರಳವಾಗಿ ಮೈಸೂರು ಅರಮನೆ ಆವರಣದಲ್ಲಿ ದಸರಾ ಮಹೋತ್ಸವ ನಡೆಯುತ್ತಿರುವುದರಿಂದ ಅರಮನೆ ದಸರಾ ಹಬ್ಬಕ್ಕೆ ಸರ್ವ ರೀತಿಯಲ್ಲಿ ತಯಾರಾಗುತ್ತಿದೆ. ಈಗಾಗಲೇ ಅರಮನೆಯ ರತ್ನಖಚಿತ ಸಿಂಹಾಸನವನ್ನು ಜೋಡಿಸಲಾಗಿದ್ದು, ಅರಮನೆಗೆ ಸುಣ್ಣಬಣ್ಣ ಬಳಿಯಲಾಗಿದೆ. ದೀಪಗಳ ಜೋಡಣೆ ಮತ್ತು ಫಿರಂಗಿಗಳನ್ನು ಶುಚಿಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಮೈಸೂರು ದಸರಾ: ಅರಮನೆಗೆ ಆಗಮಿಸಿದ ಗಜಪಡೆಗೆ ಸಂಭ್ರಮದ ಸ್ವಾಗತ!ಮೈಸೂರು ದಸರಾ: ಅರಮನೆಗೆ ಆಗಮಿಸಿದ ಗಜಪಡೆಗೆ ಸಂಭ್ರಮದ ಸ್ವಾಗತ!

 ಗಜಪಡೆಗಳಿಂದ ತಾಲೀಮಿಗೆ ಸಿದ್ಧತೆ

ಗಜಪಡೆಗಳಿಂದ ತಾಲೀಮಿಗೆ ಸಿದ್ಧತೆ

ಸಾಮಾನ್ಯವಾಗಿ ಗಜಪಡೆ ಅರಮನೆ ಆವರಣವನ್ನು ಪ್ರವೇಶಿಸಿತು ಎಂದ ಕೂಡಲೇ ಅದೇನೋ ಒಂದು ಸಂಭ್ರಮ ಮನೆ ಮಾಡಿ ಬಿಡುತ್ತದೆ. ಅರಮನೆ ಆವರಣದಲ್ಲಿ ಸಾಕಾನೆಗಳಿಗೆ ಟೆಂಟ್ ಹಾಕಿ ಅವುಗಳನ್ನು ಜತನದಿಂದ ನೋಡಿಕೊಳ್ಳಲಾಗುತ್ತದೆ. ಪ್ರತಿ ನಿತ್ಯ ಅವುಗಳಿಗೆ ಸ್ನಾನ ಮಾಡಿಸಿ ಪೌಷ್ಠಿಕ ಆಹಾರವನ್ನು ನೀಡುತ್ತಾ ಬೆಳಿಗ್ಗೆ ಮತ್ತು ಸಂಜೆ ಜಂಬೂ ಸವಾರಿಗೆ ತಾಲೀಮುಗಳ ಮೂಲಕ ಸಜ್ಜುಗೊಳಿಸಲಾಗುತ್ತದೆ.
ಇದುವರೆಗೆ ನಡೆದ ದಸರಾಕ್ಕೆ ಹೋಲಿಸಿದರೆ ಈ ಬಾರಿ ಒಂದಷ್ಟು ವಿಭಿನ್ನವಾಗಿದೆ. ಗಜಪಡೆ ಅರಮನೆಯನ್ನು ಪ್ರವೇಶಿಸಿದ್ದು, ಇವುಗಳಿಗೆ ಆವರಣದಲ್ಲಿಯೇ ತಾಲೀಮು ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ಜತನದಿಂದ ನೋಡಿಕೊಳ್ಳಲಾಗುತ್ತದೆ.

 ಸೀಮಿತ ಆಸನಗಳ ಅಳವಡಿಕೆ

ಸೀಮಿತ ಆಸನಗಳ ಅಳವಡಿಕೆ

ಈ ವರ್ಷ ದಸರಾ ತಡವಾಗಿ ಬಂದಿದ್ದು ಜತೆಗೆ ಕೊರೊನಾದ ಆತಂಕವಿರುವುದರಿಂದ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ ಇತರೆ ಯಾವುದೇ ಕಾರ್ಯಕ್ರಮಗಳಿಲ್ಲ. ಅಷ್ಟೇ ಅಲ್ಲದೆ ಜಂಬೂಸವಾರಿಯ ದಿನ ಕೆಲವೇ ಸೀಮಿತ ಆಸನಗಳನ್ನು ಮಾಡಲಾಗಿದೆ. ಹೀಗಾಗಿ ಇದೀಗ ಅರಮನೆಯಲ್ಲಿ ಒಂದಷ್ಟು ದಸರಾ ಕಳೆಗಟ್ಟಿದೆಯಾದರೂ ಉಳಿದಂತೆ ನಗರದಲ್ಲಿ ದಸರಾ ಕಳೆ ಕಂಡು ಬರುತ್ತಿಲ್ಲ.
ಅಭಿಮನ್ಯು ಅಂಬಾರಿ ಹೊರುತ್ತಿರುವುದರಿಂದ ಆತನನ್ನು ಅಂಬಾರಿ ಹೊರಲು ಸಜ್ಜುಗೊಳಿಸುವ ತಾಲೀಮು ಶೀಘ್ರವೇ ಆರಂಭವಾಗಲಿದೆ. ಆನೆಗಳ ಭಾರವನ್ನು ಅಳೆದ ನಂತರ ಅವುಗಳ ಶಕ್ತಿ ಮತ್ತು ಗಾತ್ರಕ್ಕೆ ಅನುಸಾರವಾಗಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಆಹಾರ ಕೊಡಲಾಗುತ್ತದೆ. ಬೆಳಿಗ್ಗೆ ತಾಲೀಮು ನಡೆಸುವ ಮುನ್ನ ಕುಸುರೆ ಎಂದು ಕರೆಯುವ ಹೆಸರು ಕಾಳು, ಹುರುಳಿ ಕಾಳು, ಗೋಧಿ, ಕುಸುಲಕ್ಕಿ ಇವೆಲ್ಲವನ್ನ ಬೇಯಿಸಿ ಉಂಡೆ ಮಾಡಿ ಕೊಡಲಾಗುತ್ತದೆ.

 ಭಾರ ಹೊರುವುದರೊಂದಿಗೆ ತಾಲೀಮು

ಭಾರ ಹೊರುವುದರೊಂದಿಗೆ ತಾಲೀಮು

ತಾಲೀಮಿನ ಬಳಿಕ ತರಕಾರಿಗಳನ್ನು ಬೆಣ್ಣೆಯಲ್ಲಿ ಬೇಯಿಸಿ ಕೊಡಲಾಗುತ್ತೆ. ಇವೆಲ್ಲ ತಿಂದ ನಂತರ ಮಧ್ಯಾಹ್ನದಿಂದ ಸಂಜೆಯವರೆಗೆ ಹಸಿರು ಸೊಪ್ಪನ್ನು ನೀಡಲಾಗುತ್ತದೆ. ಸಂಜೆ ಭತ್ತದ ಹುಲ್ಲಿನಲ್ಲಿ ಕುಸುರೆಯ ಸುತ್ತಿ ಭತ್ತವನ್ನು ಬೇಯಿಸಿ ಹಾಕಿ, ಬೆಲ್ಲ ಹಿಂಡಿ, ತೆಂಗಿನ ಕಾಯಿ, ಈರುಳ್ಳಿ, ಬೇಯಿಸಿ ಒಟ್ಟಿಗೆ ಕೊಡಲಾಗುತ್ತದೆ. ಇನ್ನು ಪ್ರತಿ ದಿನ ಆನೆಯೊಂದಕ್ಕೆ ಮುನ್ನೂರರಿಂದ ಐನೂರು ಕೆಜಿಯಷ್ಟು ಹಸಿರು ಸೊಪ್ಪನ್ನು ನೀಡಲಾಗುತ್ತದೆ.
ಅಭಿಮನ್ಯು ಗಜಪಡೆಯ ನಾಯಕನಾಗಿದ್ದು, ಚಿನ್ನದ ಅಂಬಾರಿಯನ್ನು ಆತನೇ ಹೊತ್ತು ಮೆರವಣಿಗೆ ನಡೆಸುವುದರಿಂದ ಮೊದಲಿಗೆ ಭಾರದ ತಾಲೀಮಿನೊಂದಿಗೆ ಆರಂಭವಾಗಿ ಚಿನ್ನದ ಅಂಬಾರಿಯಷ್ಟೇ ತೂಕದ ಮರದ ಅಂಬಾರಿಯನ್ನು ಕಟ್ಟಿ ಅಭ್ಯಾಸ ಮಾಡಲಾಗುತ್ತದೆ.

ಅಭಿಮನ್ಯುಗೆ ಮಹತ್ವದ ಜವಾಬ್ದಾರಿ

ಅಭಿಮನ್ಯುಗೆ ಮಹತ್ವದ ಜವಾಬ್ದಾರಿ

ಅ.25ರಂದು ದಸರಾ ಜಂಬೂ ಸವಾರಿ ನಡೆಯುತ್ತಿರುವುದರಿಂದ ಕೆಲವೇ ದಿನಗಳು ಬಾಕಿ ಇದೆ. ಗಜಪಡೆಗೆ ದಿನದಿಂದ ದಿನಕ್ಕೆ ತಾಲೀಮು ಕಠಿಣವಾಗುತ್ತಾ ಸಾಗಲಿದೆ. ಇದುವರೆಗೆ ಸಂಗೀತದ ಗಾಡಿ ಎಳೆಯುತ್ತಿದ್ದ ಅಭಿಮನ್ಯು ಈ ಬಾರಿ ಬಹಳ ಮಹತ್ವದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದು ಯಶಸ್ವಿಯಾಗಿ ಪೂರೈಸುವ ಆಶಾಭಾವನೆ ಅರಣ್ಯಾಧಿಕಾರಿಗಳಲ್ಲಿದೆ. ಈತನಿಗೆ ವಿಕ್ರಮ, ಕಾವೇರಿ, ಗೋಪಿ ಮತ್ತು ವಿಜಯ ಸಾಥ್ ನೀಡಲಿದ್ದಾರೆ.

English summary
Abhimanyu headed jamboo savari elephants entered mysuru palace. Palace is getting ready for dasara festival,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X