ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಧಿ ಸುಬ್ಬಯ್ಯ ಫೋಟೋ ಶೂಟ್ ವಿವಾದ: ಅರಮನೆ ಆಡಳಿತ ಮಂಡಳಿಯ ಸಮಜಾಯಿಷಿ

By Yashaswini
|
Google Oneindia Kannada News

ಮೈಸೂರು, ಆಗಸ್ಟ್.6: ವಿಶ್ವ ವಿಖ್ಯಾತ ಮೈಸೂರು ಅರಮನೆಯಲ್ಲಿ ಮತ್ತೆ ಫೋಟೋ ಶೂಟ್ ವಿವಾದ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಮನೆ ಆಡಳಿತ ಮಂಡಳಿ ಸಮಜಾಯಿಷಿ ಕೊಡಲು ಮುಂದಾಗುತ್ತಿದೆ. "ನಟಿ ನಿಧಿ ಸುಬ್ಬಯ್ಯ ಫೋಟೋ ತೆಗೆಸಿಕೊಂಡ ಸ್ಥಳದಲ್ಲಿ ಫೋಟೋ ತೆಗೆಯಲು ಯಾವುದೇ ನಿರ್ಬಂಧವಿಲ್ಲ.

ಇದೊಂದು ಸಾರ್ವಜನಿಕ ಪ್ರದೇಶವಾಗಿದ್ದು, ಫೋಟೋ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ" ಎಂದು ಅರಮನೆ ಮಂಡಳಿ ಅಧಿಕಾರಿಗಳು ಅಡ್ಡಗೋಡೆ ಮೇಲೆ ದೀಪವಿಡಲು ಮುಂದಾಗುತ್ತಿದ್ದಾರೆ.

ಮೈಸೂರು ಅರಮನೆ ಫೋಟೋಶೂಟ್ ವಿವಾದ : ಏನು, ಎತ್ತ? ಮೈಸೂರು ಅರಮನೆ ಫೋಟೋಶೂಟ್ ವಿವಾದ : ಏನು, ಎತ್ತ?

ಹಿರಿಯ ಐಎಎಸ್ ಅಧಿಕಾರಿಯ ಪುತ್ರರೊಬ್ಬರು, ಒಂದೆರಡು ವರ್ಷಗಳ ಹಿಂದೆ ಅರಮನೆ ದರ್ಬಾರ್ ಹಾಲ್, ಕಲ್ಯಾಣ ಮಂಟಪ ಮುಂತಾದ ಕಡೆ ವಿಶೇಷ ಕ್ಯಾಮೆರಾ ಬಳಸಿ ವಿವಾಹಪೂರ್ವ ಫೋಟೋ ಶೂಟ್ ನಡೆಸಿ ವಿವಾದದ ಕೇಂದ್ರ ಬಿಂದುವಾಗಿದ್ದರು.

Palace administration has given a explanation about Nidhi subbaiah Photo shoot

ಈ ಬಗ್ಗೆ ಸರ್ಕಾರ ತನಿಖೆಯನ್ನೂ ನಡೆಸಿತ್ತು. ಈಗ ಸೆಲೆಬಿಟ್ರಿ ನಿಧಿ ಸುಬ್ಬಯ್ಯ' ಅವರು ಫೋಟೋ ಶೂಟ್ ನಡೆಸಿದ್ದಾರೆ ಎಂಬ ಆರೋಪ ಸಾಕಷ್ಟು ವಿವಾದಕ್ಕೀಡಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಧಿ ಸುಬ್ಬಯ್ಯ ಅವರ ಕುಟುಂಬದ ಗೆಳೆಯ ಭರತ್ "ಇದು ಇತ್ತೀಚಿನ ಫೋಟೋ ಅಲ್ಲ. ಅದರಲ್ಲೂ ವಿಶೇಷವಾಗಿ ನಡೆದ ಫೋಟೋ ಶೂಟ್ ಕೂಡ ಅಲ್ಲ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಅರಮನೆ ನೋಡಲು ಬಂದಿದ್ದ ಸಂದರ್ಭದಲ್ಲಿ ಎಲ್ಲರಂತೆ ಸಹಜವಾಗಿ ಮೊಬೈಲ್ ನಲ್ಲಿ ತೆಗೆಸಿಕೊಂಡ ಒಂದು ಫೋಟೋ" ಎಂದು ಸ್ಪಷ್ಟಪಡಿಸಿದ್ದಾರೆ.

ಅರಮನೆಯಲ್ಲಿ ಫೋಟೋಶೂಟ್ ವಿವಾದ: ನಿಧಿ ಸುಬ್ಬಯ್ಯ ಆಪ್ತರು ಹೇಳಿದ್ದೇನು.?

"ಅಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರು. ಎಲ್ಲರೂ ಮೊಬೈಲ್ ನಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದರು. ಇದು ದರ್ಬಾರ್ ಹಾಲ್ ಅಲ್ಲ. ಅದರ ಮೇಲಿನ ಗ್ಯಾಲರಿಯಾಗಿದ್ದು, ಇಲ್ಲಿ ಫೋಟೋ ತೆಗೆಯಬಾರದು ಎಂದು ಯಾರೂ ಹೇಳಲಿಲ್ಲ. ಹಿಂದೆ ನಡೆದ ಫೋಟೋ ಶೂಟ್ ಗೂ ಇದಕ್ಕೂ ಹೋಲಿಕೆಯೇ ಇಲ್ಲ" ಎಂದು ಭರತ್ ಹೇಳಿದ್ದಾರೆ.

ಇನ್ನು ಈ ಕುರಿತಾಗಿ ಮಾತನಾಡಿದ ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಸುಬ್ರಮಣ್ಯ, ಅರಮನೆಯಲ್ಲಿ ಯಾವುದೇ ಫೋಟೋ ಶೂಟ್ ನಡೆದಿರುವ ಪ್ರಕರಣ ನಮ್ಮ ಗಮನಕ್ಕೆ ಬಂದಿಲ್ಲ. ನಾವು ಯಾರಿಗೂ ಅನುಮತಿ ನೀಡಿಲ್ಲ.

ಇಷ್ಟಕ್ಕೂ ಅರಮನೆಗೆ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದು, ಎಲ್ಲರ ಬಳಿಯೂ ಮೊಬೈಲ್ ಇರುತ್ತದೆ. ಅವರು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡರೆ ಅದು ನಮ್ಮ ಗಮನಕ್ಕೂ ಬರುವುದಿಲ್ಲ.
ದರ್ಬಾರ್ ಹಾಲ್ ನಲ್ಲಿ ನಿಧಿ ಸುಬ್ಬಯ್ಯ ತೆಗೆಸಿಕೊಂಡಿರುವ ಫೋಟೋಗೂ, ನನಗೂ ಸಂಬಂಧವಿಲ್ಲ.

ಫೋಟೋಶೂಟ್ ಗೆ ನಾನು ಅನುಮತಿ ನೀಡಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಗೆ ದರ್ಬಾರ್ ಹಾಲ್ ನಲ್ಲಿ ಫೋಟೋ ತೆಗೆಸಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಹಿಂದೆ 20 ರೂ. ಶುಲ್ಕ ಪಡೆದು ದರ್ಬಾರ್ ಹಾಲ್ ನಲ್ಲಿ ಫೋಟೋ ತೆಗೆಸಿಕೊಳ್ಳಲು ಅವಕಾಶ ನೀಡಲಾಗುತ್ತಿತ್ತು.

ಆದರೆ ಕಳೆದ ಕೆಲ ತಿಂಗಳ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿದ್ದ ರತ್ನಪ್ರಭ ಅವರು ಅರಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದರ್ಬಾರ್ ಹಾಲ್ ನಲ್ಲಿ ಫೋಟೋ ತೆಗೆಸಿಕೊಳ್ಳಲು ಶುಲ್ಕ ಸಂಗ್ರಹಿಸುವುದನ್ನುನಿಲ್ಲಿಸುವಂತೆಯೂ, ತಾಜ್ ಮಹಲ್ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವಂತೆ ಮೈಸೂರು ಅರಮನೆ, ದರ್ಬಾರ್ ಹಾಲ್ ಫೋಟೋ ಶೂಟ್‍ ಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದರು.

ಅರಮನೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ನೀಡಿದ ಆದೇಶನುಸಾರ ಇದೀಗ ದರ್ಬಾರ್ ಹಾಲ್ ಹಾಗೂ ಕಲ್ಯಾಣ ಮಂಟಪದಲ್ಲಿ ಮೊಬೈಲ್ ನಲ್ಲಿ ಫೋಟೋ ತೆಗೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ನಿಧಿ ಸುಬ್ಬಯ್ಯ ಅವರು ಇನ್‌ಸ್ಟ್ರಾಗ್ರಾಮ್ ನಲ್ಲಿ ಹಾಕಿರುವುದು ಫೋಟೋ ಮಾತ್ರ. ಫೋಟೋ ಶೂಟ್ ಫೋಟೋವಲ್ಲ ಎಂದು ಸ್ಪಷ್ಟಪಡಿಸಿದ ಅವರು, ಫೋಟೋ ತೆಗೆಸಿಕೊಳ್ಳಲು ಯಾವಾಗ ಅರಮನೆಗೆ ಬಂದಿದ್ದರು? ಅವರಿಗೆ ಯಾರು ಅವಕಾಶ ನೀಡಿದರು? ಎಂಬುದು ನನಗೆ ತಿಳಿದಿಲ್ಲ. ಈ ಕುರಿತಾಗಿ ವಿಚಾರಣೆ ನಡೆಯುತ್ತಿದ್ದು ಏನನ್ನು ಹೇಳಲಾಗುವುದಿಲ್ಲ ಎಂದರು.

English summary
Regarding Nidhi subbaiah Photo shoot controversy Palace administration has given a explanation. There is no restriction on clicking the photo in that place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X