ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದ ಏಕೈಕ ಸಂಸ್ಕೃತ ಪತ್ರಿಕೆಗೆ ಹುಡುಕಿಕೊಂಡು ಬಂತು ಪದ್ಮಶ್ರೀ ಗೌರವ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 26: ಭಾರತದ ಏಕೈಕ ಸಂಸ್ಕೃತ ದಿನ ಪತ್ರಿಕೆ ಪ್ರಸರಣವಾಗುವುದು ನಮ್ಮ ಕರ್ನಾಟಕದ ಮೈಸೂರಿನಲ್ಲಿ. "ಸುಧರ್ಮ' ಎಂಬ ಸಂಸ್ಕೃತ ಪತ್ರಿಕೆಗೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.

"ಸುಧರ್ಮ' ಪತ್ರಿಕೆಯ ಸಂಪಾದಕ ದಂಪತಿ ಕೆ.ವಿ.ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಕೆ.ಎಸ್.ಜಯಲಕ್ಷ್ಮಿ ಅವರು, ಪದ್ಮಶ್ರೀ ಪ್ರಶಸ್ತಿ ಬಂದಿರುವುದಕ್ಕೆ ಅತೀವ ಸಂತಸಗೊಂಡಿದ್ದಾರೆ.

ಮರಗಳನ್ನು ಮಕ್ಕಳಂತೆ ಸಾಕಿದ 'ಕಾಡಿನ ಜೀವ' ತುಳಸಿ ಗೌಡ ಗೆ 'ಪದ್ಮಶ್ರೀ'ಮರಗಳನ್ನು ಮಕ್ಕಳಂತೆ ಸಾಕಿದ 'ಕಾಡಿನ ಜೀವ' ತುಳಸಿ ಗೌಡ ಗೆ 'ಪದ್ಮಶ್ರೀ'

""ಪದ್ಮಶ್ರೀ ಪ್ರಶಸ್ತಿಗೆ ಯಾವುದೇ ಅರ್ಜಿ ಹಾಕದೆ ಅದೇ ಹುಡುಕಿಕೊಂಡು ಬಂದಿರುವುದು ತುಂಬಾ ಖುಷಿಯಾಗುತ್ತಿದೆ, ನಮ್ಮ ಹೆಸರನ್ನು ಪರೋಕ್ಷವಾಗಿ ಸೂಚಿಸಿರುವವರಿಗೆ ಕೋಟಿ ಕೋಟಿ ವಂದನೆ ಎಂದು ಹೇಳಿದರು.''

Padmashri Award To Indias Only Sanskrit Newspaper Sudharma

""ದೆಹಲಿಯಿಂದ ಕರೆ ಬಂದಾಗ ಆರಂಭದಲ್ಲಿ ನಂಬಲೂ ಸಾಧ್ಯವಾಗಲಿಲ್ಲ. ಆ ಬಳಿಕ ವಿಚಾರಿಸಿದಾಗ ಪ್ರಶಸ್ತಿ ಲಭಿಸಿರುವುದು ಖಚಿತವಾಯಿತು.

ಬೀದಿಯಲ್ಲಿ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದವಗೆ ಪದ್ಮಶ್ರೀ ಗೌರವಬೀದಿಯಲ್ಲಿ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದವಗೆ ಪದ್ಮಶ್ರೀ ಗೌರವ

ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸುಮಾರು ಮೂರೂವರೆ ಸಾವಿರ ಪತ್ರಿಕೆಗಳು ಪ್ರಸಾರ ಆಗುತ್ತಿವೆ. ಅದರಲ್ಲಿ ಎಲೆಮರೆ ಕಾಯಿಯಂತಿದ್ದ ನಮ್ಮ ಪತ್ರಿಕೆ ಗುರುತಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು'' ಎಂದರು.

2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ

ಸಂಸ್ಕೃತ ಭಾಷೆಯನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ 50 ವರ್ಷಗಳಿಂದ ಪತ್ರಿಕೆ ಪ್ರಸಾರವಾಗುತ್ತಿದೆ. ಸಂಪತ್‌ ಕುಮಾರ್‌ ತಂದೆ, ಸಂಸ್ಕೃತ ಪಂಡಿತರಾದ ವರದರಾಜ್‌ ಅಯ್ಯಂಗಾರ್‌ ಅವರು "ಸುಧರ್ಮ' ಎಂಬ ಸಂಸ್ಕೃತ ಪತ್ರಿಕೆಯನ್ನು 1970 ರಲ್ಲಿ ಪ್ರಾರಂಭಿಸಿದ್ದರು. ಇಂದಿಗೂ ಭಾರತದ ಏಕೈಕ ಸಂಸ್ಕೃತ ಪತ್ರಿಕೆ ಎಂಬ ಹಿರಿಮೆಗೆ ಪಾತ್ರವಾಗಿದೆ.

English summary
Sudhaharma, a Sanskrit news paper started in Mysuru, Karnataka. has been awarded the Padma Shri by the Central Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X