ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಡಿಮದ್ದು ತಾಲೀಮಿಗೆ ಬೆದರದ ಅರ್ಜುನ, ಬಲರಾಮ, ಅಭಿಮನ್ಯು...

|
Google Oneindia Kannada News

ಮೈಸೂರು, ಅಕ್ಟೋಬರ್.01: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಭಾಗವಹಿಸುವ ದಸರಾ ಗಜಪಡೆ ಹಾಗೂ ಅಶ್ವಪಡೆ ಕುಶಾಲು ತೋಪುಗಳ ಸದ್ದಿಗೆ ಬೆದರದಿರಲೆಂದು ಕುಶಾಲುತೋಪುಗಳನ್ನು ಸಿಡಿಸುವ ಮೂಲಕ ಎರಡನೇ ಸುತ್ತಿನ ತಾಲೀಮು ನಡೆಸಲಾಯಿತು.

ಎರಡನೇ ಬಾರಿಯೂ ಅಶ್ವಪಡೆಯ ಕೆಲವು ಕುದುರೆಗಳು ಬೆದರಿದವು. ಮತ್ತೆ ಧನಂಜಯ, ಚೈತ್ರ, ದ್ರೋಣ ಬೆದರಿದವು. ಆದರೆ ಅವು ವಿಚಲಿತವಾಗಿ ಓಡುವ ಪ್ರಯತ್ನ ಮಾಡಲಿಲ್ಲ. ಮುಖ ಕೊಟ್ಟು ನಿಲ್ಲಲು ಸಾಧ್ಯವಾಗದೆ ಮುಖವನ್ನು ತಿರುಗಿಸಿದವು.

ಮೊದಲ ಬಾರಿಗೆ ಸಿಡಿಮದ್ದು ಶಬ್ದಕ್ಕೆ ಕಿವಿ ಕೊಡಲಿದ್ದಾನೆ ಧನಂಜಯಮೊದಲ ಬಾರಿಗೆ ಸಿಡಿಮದ್ದು ಶಬ್ದಕ್ಕೆ ಕಿವಿ ಕೊಡಲಿದ್ದಾನೆ ಧನಂಜಯ

ನಗರದ ಅರಮನೆ ಮುಂಭಾಗ ಇರುವ ಕೋಟೆ ಮಾರಮ್ಮನ ದೇವಸ್ಥಾನದ ಮೈದಾನದಲ್ಲಿ ಅರ್ಜುನ ನೇತೃತ್ವದ 12 ಆನೆಗಳು ಹಾಗೂ 24 ಕುದುರೆಗಳನ್ನು ನಿಲ್ಲಿಸಿ ಅವುಗಳಿಂದ ಸ್ವಲ್ಪ ದೂರದಲ್ಲಿ ಫಿರಂಗಿಗಳನ್ನು ಸಜ್ಜುಗೊಳಿಸಿ ಮದ್ದು ತುಂಬಿ ಸಿಡಿಸಲಾಯಿತು. ಈ ಮೂಲಕ ಅಗಾಧ ಶಬ್ದವನ್ನು ಆನೆಗಳು ಮತ್ತು ಕುದುರೆಗಳಿಗೆ ಪರಿಚಯಿಸಲಾಯಿತು.

Overwhelming noise was introduced to elephants, horses

ತಾಲೀಮಿನ ವೇಳೆ ಇದೇ ಮೊದಲ ಬಾರಿಗೆ ಭಾಗವಹಿಸುತ್ತಿರುವ ಧನಂಜಯ, ಚೈತ್ರ ಮತ್ತು ದ್ರೋಣ ಆನೆಗಳು ಬೆದರಿದ್ದವು. ಈ ಹಿನ್ನೆಲೆಯಲ್ಲಿ ಇಂದೂ ಕೂಡ ಈ ಆನೆಗಳನ್ನು ಪ್ರತ್ಯೇಕವಾಗಿ ನಿಲ್ಲಿಸಿ, ಒಟ್ಟು 21 ಬಾರಿ ಕುಶಾಲುತೋಪುಗಳನ್ನು ಸಿಡಿಸುವಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಯಶಸ್ವಿಯಾದರು.

ದಸರಾ ಗಜರಾಜರಿಗೆ ಬೆಣ್ಣೆಯಲ್ಲಿ ಬೇಯಿಸಿದ ಘಮಘಮಿಸುವ ತರಹೇವಾರಿ ಖಾದ್ಯದಸರಾ ಗಜರಾಜರಿಗೆ ಬೆಣ್ಣೆಯಲ್ಲಿ ಬೇಯಿಸಿದ ಘಮಘಮಿಸುವ ತರಹೇವಾರಿ ಖಾದ್ಯ

Overwhelming noise was introduced to elephants, horses

ದಸರಾಕ್ಕೆ ಭರದ ಸಿದ್ಧತೆ: ಬರಲಿವೆ 10 ರಾಜ್ಯಗಳ ಸಾಂಸ್ಕೃತಿಕ ತಂಡದಸರಾಕ್ಕೆ ಭರದ ಸಿದ್ಧತೆ: ಬರಲಿವೆ 10 ರಾಜ್ಯಗಳ ಸಾಂಸ್ಕೃತಿಕ ತಂಡ

ಆದರೆ ಅಗಾಧ ಶಬ್ದಕ್ಕೆ ಅರ್ಜುನ, ಬಲರಾಮ, ಅಭಿಮನ್ಯು, ವಿಜಯ, ವರಲಕ್ಷ್ಮಿ, ಗೋಪಿ ಸೇರಿದಂತೆ ದಸರಾದಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಆನೆಗಳು ಕೊಂಚವೂ ವಿಚಲಿತವಾಗಲಿಲ್ಲ. ಮೂರನೇ ಸುತ್ತು ತಾಲೀಮು ಸದ್ಯದಲ್ಲೇ ನಡೆಯಲಿದೆ.

English summary
Dasra 2018:Overwhelming noise was introduced to elephants and horses in grounds of Fort Maramma Temple in front of the city's palace. Arjuna, Balarama, Abhimanyu and other elephants did not fear the overwhelming noise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X