ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಎರಡನೇ ಹಂತದ ಆಪರೇಷನ್‌ ಕಮಲ: ಎಸ್‌ಟಿ ಸೋಮಶೇಖರ್ ಸುಳಿವು

|
Google Oneindia Kannada News

ಮೈಸೂರು, ಮೇ 14: ಮೈಸೂರಿನಲ್ಲಿ ಎರಡನೇ ಹಂತದಲ್ಲಿ ಆಪರೇಷನ್‌ ಕಮಲ ನಡೆಯಲಿದ್ದು, ಬಹುತೇಕ ಮೈಸೂರಿನ ಪ್ರಮುಖ ನಾಯಕರು ಬಿಜೆಪಿ ಸೇರ್ಪಡೆಯಾಗುವುದು ಪಕ್ಕಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‍‌ ಅವರು ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಸೇರ್ಪಡೆಯಾಗುವವರೊಂದಿಗೆ ಅಂತಿಮ ಹಂತದ ಮಾತುಕತೆಗಳು ನಡೆಯುತ್ತಿವೆ. ಯಾವ ಷರತ್ತುಗಳಿಲ್ಲದೆ ಅವರು ಬಿಜೆಪಿಯನ್ನು ಸೇರಲಿದ್ದಾರೆ. ಸೇರ್ಪಡೆ ಕಾರ್ಯಕ್ಕೆ ಬಿಜೆಪಿ ಅಧ್ಯಕ್ಷರ ಹಸಿರು ನಿಶಾನೆ ಮಾತ್ರ ಬಾಕಿ ಇದೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎರಡು ಪಕ್ಷಗಳಿಂದ ನಾಯಕರು ಬಿಜೆಪಿಗೆ ಬರುವವರಿದ್ದಾರೆ. ಅವರು ಯಾರೆಂದು ನಾನು ಹೇಳುವುದಿಲ್ಲ. ಕೊನೆಯ ಮಾತುಗಳು ಮುಗಿಯಲಿ ತಾನಗಿಯೇ ನಿಮಗೆ ತಿಳಿಯುತ್ತದೆ ಎಂದು ಅವರು ಹೇಳಿದರು.

Operation kamala in Old Mysore area: Minister ST Somashekar

ಕಾಂಗ್ರೆಸ್‌ನಲ್ಲಿ ಈಗ ಎಲ್ಲರೂ ನಾಯಕರಾಗಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷ ಸಬಲತೆಯನ್ನು ಹೊಂದಿಲ್ಲ. ಇದು ಆರಂಭವಷ್ಟೆ ಮುಂದೆ ಇದು ಇನ್ನಷ್ಟು ಉಲ್ಬಣಿಸಲಿದೆ. ಇದರಿಂದ ಕಾಂಗ್ರೆಸ್‌ ಪಕ್ಷವೇ ಕೊನೆಯಾಗುವ ಹಂತಕ್ಕೆ ಹೋದರೂ ಹೋಗಬಹುದು. ಕಾಂಗ್ರೆಸ್‌ ಈಗ ನಾಲ್ಕು ಗುಂಪಾಗಿದೆ. ಆಂತರಿಕವಾಗಿ ಯಾರೋಬ್ಬರೂ ಚೆನ್ನಾಗಿಲ್ಲ. ಅಲ್ಲಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡು ನಗುತ್ತಾರೆ ಅಷ್ಟೇ ಆದರೆ ಅದು ನಿಜವಲ್ಲ. ರಮ್ಯಾ ಅವರ ವಿಚಾರದಲ್ಲಿಅದು ದೊಡ್ಡದಾಗಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದುರ್ಬಲರಲ್ಲ. ಅವರ ಕೆಲಸದಲ್ಲಿ ಯಾವುದೇ ಹುಳುಕು ಇಲ್ಲ. ಅವರು ಉತ್ತಮ ಆಡಳಿತ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಓಲೈಕೆಗಾಗಿ ಅವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ ಅಷ್ಟೇ. ಅವರು ಒಂದು ದಿನವೂ ವಿರೋಧ ಪಕ್ಷದ ನಾಯಕರಾಗಿ ನಡೆದುಕೊಂಡಿಲ್ಲ. ಬದಲಾಗಿ ತಮ್ಮ ಅಸ್ತಿತ್ವಕ್ಕಾಗಿ ದಿನವೂ ಅವರು ಹೋರಾಡುತ್ತಲೇ ಇದ್ದಾರೆ ಎಂದು ವ್ಯಂಗ್ಯವಾಡಿದರು.

Operation kamala in Old Mysore area: Minister ST Somashekar

ಜಿಟಿಡಿ ಜೊತೆ ಮಾತುಕತೆ
ಮೈಸೂರಿನಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‍‌ ಅವರು ಭೇಟಿ ಮಾಡಿದರು. ಬಳಿಕ ಮಾತನಾಡಿ, ಇದು ಸೌಹಾರ್ದ ಭೇಟಿ ಅಷ್ಟೇ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಸಂಬಂಧಿಸಿದಂತೆ ಮಾತನಾಡಿದ್ದೇವೆ. ಇದರಲ್ಲಿ ರಹಸ್ಯ ಏನೂ ಇಲ್ಲ ಎಂದು ತಿಳಿಸಿದರು. ಆದರೂ ಇಬ್ಬರು ನಾಯಕರ ಭೇಟಿಯೂ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

English summary
The second phase of Operation kamala in Mysore: district incharge minister ST somashekar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X