ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಆಪರೇಷನ್ ಚೀತಾ: 3.79 ಲಕ್ಷ ರೂ.ದಂಡ ವಸೂಲಿ!

|
Google Oneindia Kannada News

ಮೈಸೂರು, ಡಿಸೆಂಬರ್ 6: ನಗರ ಸಂಚಾರಿ ಪೊಲೀಸರು ಮತ್ತೊಮ್ಮೆ ಆಪರೇಷನ್ ಚೀತಾ ಕಾರ್ಯಾಚರಣೆ ನಡೆಸಿದ್ದು, ಕೇವಲ ಮೂರು ಗಂಟೆ ಅವಧಿಯಲ್ಲಿ ವಿವಿಧ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ಒಟ್ಟು 3,207 ಪ್ರಕರಣಗಳನ್ನು ದಾಖಲಿಸಿಕೊಂಡು 3,79,500 ರೂ.ಗಳ ದಂಡ ಸಂಗ್ರಹಿಸಿದ್ದಾರೆ.

ನಗರದ ಸಂಚಾರ ಪೊಲೀಸರೊಂದಿಗೆ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳ ಪೊಲೀಸರು ಸೇರಿಕೊಂಡು ಡಿಸೆಂಬರ್ 5ರಂದು ಸಂಜೆ 4 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮೈಸೂರು ನಗರದ ಎಲ್ಲ ಪೊಲೀಸ್ ಠಾಣೆಗಳ ಅಧಿಕಾರಿಗಳು ನಗರದ ವಿವಿಧ ಕಡೆ ಅಪರೇಷನ್ ಚೀತಾ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಸಂಚಾರ ನಿಯಮ ಉಲ್ಲಂಘಿಸಿದವರಿಂದ ಈ ದಂಡ ವಸೂಲಿ ಮಾಡಿದ್ದಾರೆ.

ಮೈಸೂರಿನಲ್ಲಿ ಆಪರೇಷನ್ ಚೀತಾ: ದಿನವೊಂದಕ್ಕೆ 4.68 ಲಕ್ಷ ರೂ.ದಂಡ ವಸೂಲು!ಮೈಸೂರಿನಲ್ಲಿ ಆಪರೇಷನ್ ಚೀತಾ: ದಿನವೊಂದಕ್ಕೆ 4.68 ಲಕ್ಷ ರೂ.ದಂಡ ವಸೂಲು!

ಈ ವೇಳೆ ವಿವಿಧ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ಒಟ್ಟು 3,207 ಪ್ರಕರಣಗಳನ್ನು ದಾಖಲಿಸಿ 3,79,500 ರು. ದಂಡ ವಸೂಲಿ ಮಾಡಿದ್ದಾರೆ. ಆ ನಂತರ ರಾತ್ರಿ 8.30 ಗಂಟೆಯಿಂದ ಮಧ್ಯರಾತ್ರಿ 12.30 ಗಂಟೆಯವರೆಗೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ್ದಾರೆ.

ಈ ಕಾರ್ಯಚರಣೆಯಲ್ಲಿ ಒಟ್ಟು 1140 ವಾಹನಗಳನ್ನು ಪರಿಶೀಲನೆ ನಡೆಸಿ ಅವುಗಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 63 ವಾಹನ ಚಾಲಕರ ವಿರುದ್ದ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ವಾಹನ ಚಾಲನಾ ಪರವಾನಗಿ ಅಮಾನತ್ತು

ವಾಹನ ಚಾಲನಾ ಪರವಾನಗಿ ಅಮಾನತ್ತು

ಮದ್ಯಪಾನ ಮಾಡಿ ವಾಹನ ಚಾಲನೆ ವೇಳೆ ಸಿಕ್ಕಿಬಿದ್ದ ಚಾಲಕರ ವಾಹನ ಚಾಲನಾ ಪರವಾನಗಿಯನ್ನು ಅಮಾನತ್ತುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಕಾರ್ಯಚರಣೆ

24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಕಾರ್ಯಚರಣೆ

ಈ ರೀತಿಯ ಅನಿರೀಕ್ಷಿತ ಮತ್ತು ತೀವ್ರತರವಾದ ಕಾರ್ಯಾಚರಣೆಯನ್ನು ಯಾವುದೇ ದಿನ ಮತ್ತು ದಿನದ 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಹಮ್ಮಿಕೊಳ್ಳಲಾಗುವುದು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ. ಎ ಸುಬ್ರಮಣ್ಯೇಶ್ವರ ರಾವ್ ತಿಳಿಸಿದರು,

ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚನೆ

ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚನೆ

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ತಪಾಸಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು. ಆದ್ದರಿಂದ ವಾಹನ ಸವಾರರು ತಮ್ಮ ವಾಹನ ಚಾಲನೆ ಮಾಡುವ ವೇಳೆ ಸಂಬಂಧಪಟ್ಟ ಎಲ್ಲ ಅಗತ್ಯ ದಾಖಲಾತಿಗಳನ್ನಿಟ್ಟುಕೊಂಡು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಪೊಲೀಸರ ಈ ಕಾರ್ಯಾಚರಣೆಗೆ ಸಹಕರಿಸಬೇಕೆಂದು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ. ಎ ಸುಬ್ರಮಣ್ಯೇಶ್ವರ ರಾವ್ ಮನವಿ ಮಾಡಿದರು.

ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳು

ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳು

ಕಾರ್ಯಾಚರಣೆಯಲ್ಲಿ ಮೈಸೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ವಿಕ್ರಂ ವಿ ಅಮಟೆರವರ ಮಾರ್ಗದರ್ಶನದಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

English summary
In order to enforce strict traffic rules in the city, police on December 5th launched operation cheetah. Rs.3.79 lakh fine collected in a single day from who breaked traffic rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X