ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಟೋಬರ್.14ರಂದು ಓಪನ್ ಸ್ಟ್ರೀಟ್ ಫೆಸ್ಟಿವಲ್: ವಿಶೇಷತೆಗಳು ಏನು?

|
Google Oneindia Kannada News

ಮೈಸೂರು, ಸೆಪ್ಟೆಂಬರ್.21 : ಕಳೆದ ವರುಷ ಮೈಸೂರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡ್ಯೊಯ್ದ ಓಪನ್ ಸ್ಟ್ರೀಟ್ ಫೆಸ್ಟಿವಲ್ ಈ ಬಾರಿ ದಸರೆಯಲ್ಲಿ ಮೇಳೈಸಲಿದೆ. ಹಲವು ಕಾರ್ಯಕ್ರಮಗಳ ಮೂಲಕ ಮೈಸೂರಿಗರು ಹಾಗೂ ಪ್ರವಾಸಿಗರ ಮನಗೆದ್ದಿದ್ದ ಓಪನ್ ಸ್ಟ್ರೀಟ್ ಫೆಸ್ಟಿವಲ್ ಇದೇ ಅಕ್ಟೋಬರ್ 14ರಂದು ನಡೆಸಲು ಜಿಲ್ಲಾಡಳಿತ ತಯಾರಿ ಮುಂದುವರೆಸಿದೆ.

ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಇದಕ್ಕಾಗಿ ಸಕಲ ಸಿದ್ಧತೆ ನಡೆಸಿದ್ದು , ಈ ಬಾರಿ ಜಿಲ್ಲಾ ಪಂಚಾಯತ್ ಮುಂಭಾಗದ ಕೃಷ್ಣ ಬುಲೇವಾರ್ಡ್ ರಸ್ತೆಯಲ್ಲಿ ನಡೆಸಲಾಗುತ್ತಿದೆ. ಈ ಹಿಂದೆ ನಗರದ ಜನದಟ್ಟಣೆಯುಳ್ಳ ದೇವರಾಜು ರಸ್ತೆಯಲ್ಲಿ ಈ ಫೆಸ್ಟಿವಲ್ ನಡೆಸಲಾಗಿತ್ತು.

ದಸರಾ ಆಹಾರ ಮೇಳದಲ್ಲಿ ವಿದೇಶಿ ತಿನಿಸುಗಳನ್ನೂ ಸವಿಯಲು ಸಿದ್ಧರಾಗಿದಸರಾ ಆಹಾರ ಮೇಳದಲ್ಲಿ ವಿದೇಶಿ ತಿನಿಸುಗಳನ್ನೂ ಸವಿಯಲು ಸಿದ್ಧರಾಗಿ

ಉತ್ಸವದಲ್ಲಿ ವಾಹನ ನಿಲುಗಡೆ, ವಿಶಾಲ ಜಾಗದ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗೆ ಕೂಡ ತಲೆನೋವಾಗಿದ್ದು, ಇದು ಉತ್ಸವದಲ್ಲಿ ಭಾಗವಹಿಸುವವರಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಈ ಕಾರಣಕ್ಕೆ ಈ ಬಾರಿ ಸ್ಥಳ ಬದಲಾವಣೆ ಮಾಡಲಾಗಿದೆ .

Open Street Festival on October 14 in Mysuru

ದೇವರಾಜ ರಸ್ತೆಗಿಂತ ಜಿಲ್ಲಾ ಪಂಚಾಯತ್ ಬಳಿಯ ಕೃಷ್ಣ ಬುಲೇವಾರ್ಡ್ ರಸ್ತೆ ವಿಶಾಲವಾಗಿದೆ. ಇಲ್ಲಿ ರಸ್ತೆ ವಿಭಜಕವಿರುವುದರಿಂದ ಎರಡು ಭಾಗವಾಗಿ ಪ್ರತ್ಯೇಕಿಸಿ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಇಲ್ಲಿ ಕಾರ್ಯಕ್ರಮಗಳನ್ನು ನಡೆಸುವುದರಿಂದ ಹಲವು ಮೈದಾನಗಳು ಹತ್ತಿರವಾಗಿದ್ದು, ವಾಹನ ನಿಲುಗಡೆಗೂ ಅಡ್ಡಿಯಾಗುವುದಿಲ್ಲ.

ಅಲ್ಲದೆ ಇದನ್ನು ಪಾರಂಪರಿಕ ಕಟ್ಟಡಗಳ ರಸ್ತೆ ಎಂದು ಕೂಡ ಇದನ್ನು ಕರೆಯಲಾಗುತ್ತದೆ. ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಪ್ರಾಚ್ಯ ಮತ್ತು ಸಂಶೋಧನಾಲಯ, ಕ್ರಾಫರ್ಡ್ ಭವನ , ಜಿಲ್ಲಾಧಿಕಾರಿ ಕಚೇರಿ ಇದೆಲ್ಲವೂ ಇಲ್ಲೇ ಇರುವುದರಿಂದ ತೆರದ ರಸ್ತೆ ಉತ್ಸವಕ್ಕೆ ಇದು ಹೆಚ್ಚು ಅನುಕೂಲವಾಗಲಿದೆ.

 ಮೈಸೂರು ದಸರಾ: ರೋಡಿಗಿಳಿಯಲಿದೆ 12 HOHO ಬಸ್ ಗಳು ಮೈಸೂರು ದಸರಾ: ರೋಡಿಗಿಳಿಯಲಿದೆ 12 HOHO ಬಸ್ ಗಳು

ಕಳೆದ ಬಾರಿಯ ಫೆಸ್ಟಿವಲ್ ಗಿಂತಲೂ ವಿಶೇಷವಾಗಿ ಆಯೋಜಿಸಲು ಹೊಸ - ಹೊಸ ಯೋಜನೆಗಳನ್ನು ಸಹ ಜಿಲ್ಲಾಡಳಿತ ರೂಪಿಸುತ್ತಿದೆ. ಈ ಬಾರಿ ಸೈಕಲ್ ಮತ್ತು ಬೈಕ್ ಸ್ಟಂಟ್ ಸಾಹಸ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಲಿವೆ.

ಅಲ್ಲದೇ ಚಿತ್ರಕಲೆಗೆ ಹೆಚ್ಚು ಒತ್ತು ನೀಡಲು ತೀರ್ಮಾನಿಸಲಾಗಿದ್ದು, ಸ್ಟ್ರೀಟ್ ಆರ್ಟ್ ಜನರ ಮನಸೂರೆಗೊಳ್ಳಲಿದೆ. ಮಕ್ಕಳ ಆಟಿಕೆ ವಿಭಾಗವನ್ನು ವಿಶೇಷವಾಗಿ ರೂಪಿಸಲು ಪ್ರವಾಸೋದ್ಯಮ ಇಲಾಖೆಯಿಂದ ತಯಾರಿ ನಡೆಯುತ್ತಿದೆ.

ದಸರೆ ಮತ್ತು ಮಾಗಿ ಉತ್ಸವದ ಜೊತೆಗೆ ಓಪನ್ ಸ್ಟ್ರೀಟ್ ಉತ್ಸವ ನಡೆದ ಕಾರಣ ಕಳೆದ ವರುಷ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಿತ್ತು. ಇದನ್ನೇ ಮತ್ತೊಮ್ಮೆ ಪುನರಾವರ್ತನೆ ಗೊಳಿಸಲಾಗಿದೆ.

English summary
Tourism department and District administration is continuing to prepare the Open Street Festival on October 14th in Mysuru. Here are the specialties of this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X