ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶುಭ ಸುದ್ದಿ: ಮೈಸೂರಿನಲ್ಲಿ ಇರೋದು ಇಬ್ಬರು ಸೋಂಕಿತರು ಮಾತ್ರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 13: ಕೊರೊನಾ ವೈರಸ್ ಮುಕ್ತ ಜಿಲ್ಲೆಯಾಗುವತ್ತ ಮೈಸೂರು ಮುಂದುವರೆದಿದೆ. ಮೈಸೂರಿನಲ್ಲಿ ಇಂದು ಮತ್ತಿಬ್ಬರು ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಇದೀಗ ಕೇವಲ 2 ಸಕ್ರಿಯ ಪ್ರಕರಣ ಮಾತ್ರ ಮೈಸೂರು ಜಿಲ್ಲೆಯಲ್ಲಿವೆ. ಒಟ್ಟು 90 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ 88 ಜನ ಕೊರೊನಾ ವೈರಸ್ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

 ಇನ್ನೆರಡು ದಿನಗಳಲ್ಲಿ ಆರೆಂಜ್ ಝೋನ್ ಆಗುತ್ತದಾ ಮೈಸೂರು? ಇನ್ನುಳಿದಿರುವ ಕೇಸ್ ಎಷ್ಟು? ಇನ್ನೆರಡು ದಿನಗಳಲ್ಲಿ ಆರೆಂಜ್ ಝೋನ್ ಆಗುತ್ತದಾ ಮೈಸೂರು? ಇನ್ನುಳಿದಿರುವ ಕೇಸ್ ಎಷ್ಟು?

ಇಂದು ಪಿ-385 ಟಿಜೆ, ಪಿ-204 ಡಿಸ್ಚಾರ್ಜ್ ಆಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಇನ್ನಿಬ್ಬರು ಡಿಸ್ಚಾರ್ಜ್ ಆದರೆ ಮೈಸೂರು ಸಂಪೂರ್ಣ ಕೊರೊನಾ ಮುಕ್ತ ಜಿಲ್ಲೆಯಾಗಲಿದೆ. ಮೈಸೂರು ನಾಳೆಯಿಂದ ಕಿತ್ತಳೆ ವಲಯಕ್ಕೆ ಶಿಫ್ಟ್ ಆಗಲಿದೆ. ಕಳೆದ 14 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಹೊಸ‌ ಕೇಸ್ ಪತ್ತೆಯಾಗಿಲ್ಲ.

Good News: Only Two Corona Infected Cases In Mysuru

ಒಟ್ಟು 5,538 ಸ್ಯಾಂಪಲ್ಸ್ ಗಳನ್ನು ಟೆಸ್ಟ್ ಮಾಡಲಾಗಿದ್ದು, 5448 ಸ್ಯಾಂಪಲ್ಸ್ ನೆಗೆಟಿವ್ ಬಂದಿದೆ. 521 ಜನ 14 ದಿನ ಐಸೋಲೇಟೆಡ್ ನಲ್ಲಿದ್ದು, 4742 ಮಂದಿ 14 ದಿನಗಳ ಐಸೋಲೇಶನ್ ಪೂರ್ತಿಗೊಳಿಸಿದ್ದಾರೆ. ಇಂದಿನವರೆಗೆ 5285 ಜನರನ್ನು ಪರಿಶೀಲನೆ ಮಾಡಲಾಗಿದೆ.

ಕಳೆದ 14 ದಿನದಿಂದ ಯಾವುದೇ ಪಾಸಿಟಿವ್ ಪ್ರಕರಣ ಬಾರದ ಕಾರಣ ಬುಧವಾರದಿಂದ ಮೈಸೂರಿನಲ್ಲಿ ಮಹಾನಗರ ಪಾಲಿಕೆಯು ವ್ಯಾಪಾರಕ್ಕೆ ಅನುಮತಿ ನೀಡಿದೆ.

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಮೈಸೂರಿನ ಎಲ್ಲ ಅಂಗಡಿ, ವಾಣಿಜ್ಯ ವಹಿವಾಟನ್ನೂ ಮುಚ್ಚುವಂತೆ ಈ ಹಿಂದೆ ಆದೇಶಿಸಿಸಲಾಗಿತ್ತು. ಆದರೆ ನಿತ್ಯ ಬಳಕೆಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಇದೀಗ ನಗರದ ಎಲ್ಲ 91 ರಸ್ತೆಗಳಲ್ಲಿ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದು, ಬೆಳಿಗ್ಗೆ ೭ ರಿಂದ ಸಂಜೆ ೭ ರ ವರೆಗೆ ಎಲ್ಲ ಅಂಗಡಿಗಳ ವ್ಯಾಪಾರಕ್ಕೆ ಅನುಮತಿ ಕಲ್ಪಿಸಲಾಗಿದೆ. ಈ ಕುರಿತು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಆದೇಶ ಹೊರಡಿಸಿದ್ದಾರೆ.

ಆದರೆ ಸೆಲೂನ್, ಸ್ಪಾ, ಸಿನಿಮಾ ಮಂದಿರ, ಧಾರ್ಮಿಕ‌ ಕೇಂದ್ರಕ್ಕೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಅನುಮತಿ ನೀಡಿಲ್ಲ. ಆಟೋ, ಟ್ಯಾಕ್ಸಿ ಗಳ‌ ಸಂಚಾರಕ್ಕೂ ಅವಕಾಶ ಇಲ್ಲ. ಹೋಟೆಲ್‌ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನೂತನ ಸಡಿಲಿಕೆಯ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಜೀವಕಳೆ ಬಂದಿದೆ.

English summary
Two Coronavirus infected Persons released from Covid-19 Hospital in Mysuru today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X