ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮನಬಂದಂತೆ ದಾಳಿ ನಡೆಸಿದ ಬಿಡಾಡಿ ಕುದುರೆಗಳು:ವೃದ್ಧೆ ಸಾವು

|
Google Oneindia Kannada News

ಮೈಸೂರು, ಡಿಸೆಂಬರ್ 18 : ಮನಬಂದಂತೆ ಕುದುರೆಗಳು ಓಡಿದ ಪರಿಣಾಮ ತರಕಾರಿ ಮಾರುವ ವೃದ್ಧೆ ಸಾವನ್ನಪ್ಪಿರುವ ಘಟನೆ ಮೈಸೂರಿನ ಗಾಯತ್ರಿಪುರಂ ಮೊದಲನೇ ಹಂತದ ಆಚಾರಿ ಕಾಲೋನಿ ಬಳಿ ನಡೆದಿದೆ. ಪಾರ್ವತಮ್ಮ (55)ಮೃತಪಟ್ಟ ವೃದ್ಧೆ.

ಮೃತ ಪಾರ್ವತಮ್ಮ ಉದಯಗಿರಿಯ ಮುನೇಶ್ವರ ನಗರದ ನಿವಾಸಿಯಾಗಿದ್ದು, ಪ್ರತಿನಿತ್ಯ ರಸ್ತೆ ಬದಿ ಸೊಪ್ಪಿನ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಈ ನಡುವೆ ಇಂದು ಪಾರ್ವತಮ್ಮ ವ್ಯಾಪಾರ ಮಾಡುತ್ತಿದ್ದಾಗ ಬಿಡಾಡಿ ಕುದುರೆಗಳು ಏಕಾಏಕಿ ದಾಳಿ ನಡೆಸಿವೆ. ಕುದುರೆಗಳ ದಾಳಿಯಿಂದ ಪಾರ್ವತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೆಬ್ಬಲಗುಪ್ಪೆಯಲ್ಲಿ ಬಸ್ ಹಿಂದಿಕ್ಕಲು ಹೋಗಿ ಆಟೋ ಪಲ್ಟಿ: 3 ಸಾವು, 7 ಜನರಿಗೆ ಗಾಯಹೆಬ್ಬಲಗುಪ್ಪೆಯಲ್ಲಿ ಬಸ್ ಹಿಂದಿಕ್ಕಲು ಹೋಗಿ ಆಟೋ ಪಲ್ಟಿ: 3 ಸಾವು, 7 ಜನರಿಗೆ ಗಾಯ

ವಿಷಯ ತಿಳಿದು ನಜರ್ ಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Old lady died by horse attack in Mysuru

ಪೆಟ್ರೋಲ್ ಬಂಕ್ ಮಾಲೀಕನ ಮೇಲೆ ಹಲ್ಲೆ

ಮತ್ತೊಂದು ಪ್ರಕರಣದಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಸಿಗರೇಟು ಸೇವನೆ ಮಾಡುವಂತಿಲ್ಲ ಎಂದು ಹೇಳಿದ ಕಾರಣಕ್ಕೆ ಕೋಪಗೊಂಡ ಯುವಕರ ಗುಂಪು ಅನ್ನಪೂರ್ಣ ಸರ್ವೀಸ್ ಸ್ಟೇಷನ್ ಹಾಗೂ ಎಚ್.ಪಿ.ಪೆಟ್ರೋಲ್ ಬಂಕ್ ನಡೆಸುತ್ತಿರುವ ವಿನೋದ್ ಕುಮಾರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಹಿನಕಲ್ ಗ್ರಾಮದ ಹುಣಸೂರು ಮೈಸೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.

ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದಾರುಣ ಸಾವುಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದಾರುಣ ಸಾವು

ಬೈಕ್ ಗೆ ಪೆಟ್ರೋಲ್ ಹಾಕಿಸಲು ಬಂದ ಆದರ್ಶ, ಹೇಮಂತ ಹಾಗೂ ಪಾಲಹಳ್ಳಿ ಹರೀಶ್ ಸಿಗರೇಟ್ ಸೇದಲು ಯತ್ನಿಸಿದರು. ಇದನ್ನು ಗಮನಿಸಿದ ವಿನೋದ್, ಹೊರಗಡೆ ಸಿಗರೇಟು ಸೇದಿ ಎಂದು ಹೇಳಿ ಕಳುಹಿಸಿದ್ದಾರೆ. ಕೆಲ ಸಮಯದ ನಂತರ ಆದರ್ಶ, ಹೇಮಂತ ಹಾಗೂ ಪಾಲಹಳ್ಳಿ ಹರೀಶ ಅವರ ಜತೆಗೆ ಮಧು, ಹೂಟಗಳ್ಳಿ ಅಭಿಷೇಕ್, ಯೋಗೇಶ, ಅಭಿಲಾಷ್, ಅರುಣ ಎಂಬವರು ಗುಂಪು ಕಟ್ಟಿಕೊಂಡು ಏಕಾಏಕಿ ಪೆಟ್ರೋಲ್ ಬಂಕ್ ಒಳಗೆ ಬಂದು ವಿನೋದ್ ಮೇಲೆ ಹಲ್ಲೆ ನಡೆಸಿ, ಪೊಲೀಸರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ.

ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

English summary
Vegetable trader Parvathamma died by horse attack in Mysuru. Deceased Parvathamma is a resident of Muneshwar city of Udayagiri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X