• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಪಂಚೆಯಲ್ಲಿ ಮಿಂಚಲಿದ್ದಾರೆ ಬರಾಕ್ ಒಬಾಮ!

|

ಮೈಸೂರು, ಜ, 19: ಗಣರಾಜ್ಯೋತ್ಸವಕ್ಕೆ ಆಗಮಿಸುತ್ತಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ರೇಷ್ಮೆಯಿಂದ ತಯಾರಿಸಿದ ಮೈಸೂರು ಶಲ್ಯ ಮತ್ತು ಧೋತಿಯನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಬಸವರಾಜ್, ಒಬಾಮಗೆ ಗಿಫ್ಟ್ ನೀಡುವ ಸಲುವಾಗಿ ರಾಷ್ಟ್ರಪತಿ ಭವನದಿಂದ ಕೆಎಸ್‍ಐಸಿಗೆ 100 ವಿಶೇಷ ಶಲ್ಯ ಹಾಗೂ ಧೋತಿಗಳನ್ನು ತಯಾರಿಸಲು ಬೇಡಿಕೆ ಬಂದಿದೆ ಎಂದು ತಿಳಿಸಿದ್ದಾರೆ.[ದೆಹಲಿಯಲ್ಲಿ ಒಬಾಮಾ ಭದ್ರತೆಗೆ 1 ಲಕ್ಷ ಪೊಲೀಸರು]

ಸಾಮಾನ್ಯವಾಗಿ ರೇಷ್ಮೆ ಶಲ್ಯಗಳ ಜರಿಗಳು ಒಂದು ಇಂಚು ಇದ್ದು, ಒಬಾಮ ಅವರಿಗಾಗಿಯೇ ಜರಿಗಳನ್ನು ಎರಡು ಇಂಚು ದಪ್ಪವಾಗಿ ತಯಾರಿಸಿ ಕೊಡುವಂತೆ ರಾಷ್ಟಪತಿ ಭವನ ವಿಶೇಷ ಬೇಡಿಕೆ ಇಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ಚೆನ್ನಪಟ್ಟಣ ಗೊಂಬೆ ನೀಡುತ್ತೇವೆ ಎಂದ ರೋಷನ್ ಬೇಗ್

ಒಬಾಮಾ ಅವರಿಗೆ ಚನ್ನಪಟ್ಟಣದ ಗೊಂಬೆಗಳನ್ನು ಉಡುಗೊರೆಯಾಗಿ ನೀಡಲು ಕೋರಿ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಲಾಗುವುದು ಎಂದು ವಾರ್ತಾ ಸಚಿವ ರೋಷನ್‌ ಬೇಗ್‌ ತಿಳಿಸಿದ್ದಾರೆ.[ಗಣರಾಜ್ಯೋತ್ಸವಕ್ಕೆ ಉಗ್ರ ದಾಳಿ ಸಾಧ್ಯತೆ?]

ಚನ್ನಪಟ್ಟಣದ ಗೊಂಬೆಗಳ ಸ್ತಬ್ಧಚಿತ್ರ ಈ ವರ್ಷದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾಗಿದೆ. ವಾರ್ತಾ ಇಲಾಖೆ ಚನ್ನಪಟ್ಟಣದ ಗೊಂಬೆಗಳ ಚಿತ್ರಗಳಿರುವ ವಿಶೇಷ ಕ್ಯಾಲೆಂಡರ್‌ ತಯಾರಿಸಿದೆ. ಈ ಕ್ಯಾಲೆಂಡರ್‌ ಮತ್ತು ಚನ್ನಪಟ್ಟಣದ ಗೊಂಬೆಗಳನ್ನು ಬರಾಕ್‌ ಒಬಾಮಾ ಅವರಿಗೆ ಉಡುಗೊರೆಯಾಗಿ ನೀಡಬೇಕು ಎಂಬುದು ನಮ್ಮ ಬಯಕೆ ಎಂದು ಹೇಳಿದರು.

English summary
When US President Barack Obama visits India as a special guest for this year's Republic Day celebration, Karnataka will have a silken reason to feel proud about. Rashtrapati Bhavan has ordered 100 Mysore silk shawls to honour visiting foreign dignitaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more