ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಮುಗಿದರೂ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ

|
Google Oneindia Kannada News

ಮೈಸೂರು, ಅಕ್ಟೋಬರ್. 21: ವೈವಿಧ್ಯಮಯ, ಸಾಂಸ್ಕೃತಿಕ ಸಂಭ್ರಮದ ಮೂಲಕ ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿ ಸಂಪನ್ನಗೊಂಡಿದೆ. ಆದರೂ ಸಹ ಶನಿವಾರ - ಭಾನುವಾರವೂ ಪ್ರವಾಸಿ ತಾಣಗಳತ್ತ ಜನರು ಆಗಮಿಸುವ ಮೂಲಕ ಸಂಭ್ರಮದ ಕ್ಷಣಗಳ ಸವಿ ಸವಿಯುತ್ತಿದ್ದಾರೆ.

ಮೈಸೂರಿನಲ್ಲಿ 10 ದಿನಗಳ ಕಾಲ ವೈಭವದ ದಸರೆಯಿಂದ ಮಿಂದೆದ್ದ ಮೈಸೂರು ನಗರದಲ್ಲಿ ಭಾನುವಾರವೂ ಸಹ ಈ ಸಂಭ್ರಮ ಮುಂದುವರಿದಿದ್ದು, ಪ್ರವಾಸಿ ತಾಣಗಳಲ್ಲಿ ನಿರೀಕ್ಷೆಗೂ ಮೀರಿದ ಜನಸ್ಪಂದನೆ ದೊರೆಯುತ್ತಿದೆ.

ಜಂಬೂಸವಾರಿ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿ ಅರ್ಜುನ ಅಂಡ್ ಟೀಂಜಂಬೂಸವಾರಿ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿ ಅರ್ಜುನ ಅಂಡ್ ಟೀಂ

ಅ.10ರಂದು ಆರಂಭಗೊಂಡ ನಾಡಹಬ್ಬದ 9 ದಿನಗಳ ಕಾಲವೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಬೆಳಕಿನ ಚಿತ್ತಾರಗಳೊಂದಿಗೆ ನಗರವು ಜನ ಸಾಗರದಿಂದ ತುಂಬಿತುಳುಕುತಿತ್ತು. ಇನ್ನು ಯುವ ಸಂಭ್ರಮ, ಯುವ ದಸರಾ ಯುವ ಮನಸ್ಸುಗಳ ಕಲರವಕ್ಕೆ ವೇದಿಕೆಯಾಗಿದ್ದವು. ಮೃಗಾಲಯ ಹಾಗೂ ವಸ್ತುಪ್ರದರ್ಶನವೂ ಜನಾಕರ್ಷಣೆಯಾಗಿದ್ದವು.

ಮೊದಲ ಬಾರಿಗೆ ದಸರೆಯಲ್ಲಿ ವಿಂಟೇಜ್ ಕಾರ್ ಪ್ರದರ್ಶನ, ಇದರೊಟ್ಟಿಗೆ ಓಪನ್ ಬಸ್ ಪ್ರದಕ್ಷಿಣೆಗೆ ನಿರೀಕ್ಷೆಗೂ ಮೀರಿದ ಜನ ಸ್ಪಂದನೆ ದೊರೆಯಿತು. ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಮತ್ಸ್ಯಾ ಮೇಳಕ್ಕೆ ಅಭೂತ ಪೂರ್ವ ಬೆಂಬಲ ಸಿಕ್ಕಿತು. ಓಪನ್ ಸ್ಟ್ರೀಟ್ ಫೆಸ್ಟಿವಲ್ ಈ ಬಾರಿ ನಗರವಾಸಿಗಳನ್ನು ಮತ್ತಷ್ಟು ಸೆಳೆಯುವಲ್ಲಿ ಯಶಸ್ವಿಯಾಯಿತು. ಮುಂದೆ ಓದಿ...

 ಚರ್ಚೆಗೆ ಗ್ರಾಸವಾದ ವಿಷಯ

ಚರ್ಚೆಗೆ ಗ್ರಾಸವಾದ ವಿಷಯ

ಈ ಬಾರಿ ದಸರಾ ಸಂಭ್ರಮದ ನಡುವೆ ಅಹಿತಕರ ಘಟನೆಗಳು ನಡೆದು ಸಾಕಷ್ಟು ಚರ್ಚೆಗೆ ಗ್ರಾಸವಾದವು. ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಮಹಿಳೆಯರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯ ಸಾಕಷ್ಟು ವಿವಾದ ಹುಟ್ಟು ಹಾಕಿತು.

ಇನ್ನು ಜಂಬೂ ಸವಾರಿಯ ಕೊನೆಯ ದಿನದಂದು ಅಂಬಾರಿ ಹೊತ್ತ ಅರ್ಜುನನನ್ನು ಸ್ತಬ್ಧಚಿತ್ರಗಳ ಮಧ್ಯೆ ಬಿಟ್ಟು ಉಂಟಾದ ಗೊಂದಲದ ವಾತವರಣ ನಿರ್ಮಾಣವಾಗಿತ್ತು.

 ಸೆಲ್ಫಿಗೊಂದು ಅವಕಾಶ ಕೊಟ್ಟಿದ್ದರೆ...

ಸೆಲ್ಫಿಗೊಂದು ಅವಕಾಶ ಕೊಟ್ಟಿದ್ದರೆ...

ಈ ಬಾರಿ ಬಹುತೇಕರನ್ನು ಕೈ ಬಿಸಿ ಕರೆದು ನಿಲ್ಲಿಸಿಕೊಂಡಿದ್ದು ಮೈಸೂರು ನಗರದದಲ್ಲಿ ಹಾಕಿದ್ದ ದೀಪಾಲಂಕಾರ. ಆದರೆ ಬೆಳಕಿನ ಚಿತ್ತಾರದಲ್ಲಿ ತಮ್ಮದೊಂದು ಫೋಟೋವನ್ನು ತೆಗೆದುಕೊಳ್ಳಲು ಸಾಕಷ್ಟು ಮಂದಿ ಪರದಾಡಿದರು. ಕೆಲವರು ಸಂಚಾರ ಪೊಲೀಸರಿಂದಲೂ ಬೈಗುಳಕ್ಕೆ ಒಳಗಾದರು.

ದೀಪಾಲಂಕಾರದ ಜಾಗಗಳಲ್ಲಿ ಸೆಲ್ಫಿಗೊಂದು ಅವಕಾಶ ಕೊಟ್ಟಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಬಹುತೇಕರು ಅಂದುಕೊಂಡಿದ್ದು ನಿಜ.

ದಸರೆಯೇನೋ ಮುಗಿಯಿತು, ಕಸಮಯವಾಯ್ತು ಅಂಬಾವಿಲಾಸ ಅರಮನೆದಸರೆಯೇನೋ ಮುಗಿಯಿತು, ಕಸಮಯವಾಯ್ತು ಅಂಬಾವಿಲಾಸ ಅರಮನೆ

ಪ್ರವಾಸಿಗರ ಸಂಖ್ಯೆ ಹೆಚ್ಚಳ

ಪ್ರವಾಸಿಗರ ಸಂಖ್ಯೆ ಹೆಚ್ಚಳ

ಇನ್ನು ಅರಮನೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 9421 ಮಂದಿ ಪ್ರವಾಸಿಗರು ಭೇಟಿ ಕೊಟ್ಟಿರುವುದು ವಿಶೇಷ.

2017ರಲ್ಲಿ ನಡೆದ ದಸರಾದಲ್ಲಿ 79,843 ಮಂದಿ ಹೊರ ರಾಜ್ಯದವರು, 719 ಮಂದಿ ವಿದೇಶಿಗರು, 15,607 ಮಂದಿ ವಿದ್ಯಾರ್ಥಿಗಳು ಹಾಗೂ 6, 310 ಮಂದಿ ಮಕ್ಕಳು ಸೇರಿ ಒಟ್ಟು 1,02,479 ಮಂದಿ ಪ್ರವಾಸಿಗರು ಅರಮನೆ ವೀಕ್ಷಿಸಿದ್ದರು.

ಮೈಸೂರು ದಸರಾ: ಅದ್ಧೂರಿ ಜಂಬೂಸವಾರಿ ಕಣ್‌ ತುಂಬಿಕೊಂಡ ಜನ ಸಾಗರಮೈಸೂರು ದಸರಾ: ಅದ್ಧೂರಿ ಜಂಬೂಸವಾರಿ ಕಣ್‌ ತುಂಬಿಕೊಂಡ ಜನ ಸಾಗರ

 1.53 ಲಕ್ಷ ಮಂದಿ ಭೇಟಿ

1.53 ಲಕ್ಷ ಮಂದಿ ಭೇಟಿ

ಈ ಬಾರಿ ದಸರೆಯ 10 ದಿನಗಳ ಕಾಲ 83,200 ಮಂದಿ ಹೊರ ರಾಜ್ಯ ದವರು, 884 ಮಂದಿ ವಿದೇಶಿಗರು, 20,136 ಮಂದಿ ವಿದ್ಯಾರ್ಥಿಗಳು ಹಾಗೂ 7,680 ಮಂದಿ ಮಕ್ಕಳು ಸೇರಿ ಒಟ್ಟು 1,11,900 ಮಂದಿ ಪ್ರವಾಸಿಗರು ಅರಮನೆ ವೀಕ್ಷಿಸಿದ್ದಾರೆ.

ಮೈಸೂರು ಶ್ರೀ ಜಯಚಾಮರಾಜೇಂದ್ರ ಮೃಗಾಲಯಕ್ಕೆ 2017ರಲ್ಲಿ 1.23 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಈ ಬಾರಿ 1.53 ಲಕ್ಷ ಪ್ರವಾಸಿಗರು ಭೇಟಿ ನೀಡಿ ಗಮನ ಸೆಳೆದಿದ್ದಾರೆ

ಮೈಸೂರು ದಸರಾ: ಅದ್ಧೂರಿ ಜಂಬೂಸವಾರಿ ಕಣ್‌ ತುಂಬಿಕೊಂಡ ಜನ ಸಾಗರಮೈಸೂರು ದಸರಾ: ಅದ್ಧೂರಿ ಜಂಬೂಸವಾರಿ ಕಣ್‌ ತುಂಬಿಕೊಂಡ ಜನ ಸಾಗರ

English summary
Number of tourists in Mysore has not been low after Dasra. There are many people coming to see the zoo and the palace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X