ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆಗೆ ಎನ್ಎಸ್ ಜಿ ತಂಡ ಭೇಟಿ

|
Google Oneindia Kannada News

ಮೈಸೂರು, ಜು. 23 : ವಿಶ್ವವಿಖ್ಯಾತ ನಾಡಹಬ್ಬ ದಸರಾ ತಯಾರಿ ಮೈಸೂರಿನಲ್ಲಿ ಆರಂಭವಾಗಿದೆ. ಮಂಗಳವಾರ ಅರಮನೆಗೆ ರಾಷ್ಟ್ರೀಯ ಭದ್ರತಾ ಪಡೆಯ ಅಧಿಕಾರಿ­ಗಳು ಭೇಟಿ ನೀಡಿ, ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಪ್ರವಾಸಿಗರ ಭದ್ರತೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಅಮಿತ್ ತರೂರ್‌ ನೇತೃತ್ವದಲ್ಲಿನ 11 ಮಂದಿ ಅಧಿ­ಕಾರಿಗಳ ತಂಡ ಮಂಗಳವಾರ ಅರಮನೆಗೆ ಭೇಟಿ ನೀಡಿತ್ತು. ಮಧ್ಯಾಹ್ನದ ತನಕ ಅರಮನೆ ಆವರಣ ಸೇರಿದಂತೆ ಸುತ್ತಮುತ್ತಲೂ ಕೈಗೊಂಡಿ­ರುವ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿತು. ನಂತರ ಅರಮನೆಗೆ ಒಂದು ಸುತ್ತು ಹಾಕಿದ ತಂಡ ಪ್ರಮುಖ ಸ್ಥಳಗಳ ಭದ್ರತಾ ವ್ಯವಸ್ಥೆ ಬಗ್ಗೆ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿತು.

Mysore Palace

ಅಂಬಾ ವಿಲಾಸ ದ್ವಾರ, ಕರಿಕಲ್ಲು ತೊಟ್ಟಿ, ಬ್ರಹ್ಮಪುರಿ ದ್ವಾರ, ಬಲರಾಮ ದ್ವಾರ ಹಾಗೂ ಜಯಮಾರ್ತಾಂಡ ದ್ವಾರದಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಅರಮನೆ ಭದ್ರತಾ ಉಸ್ತುವಾರಿ ವಹಿಸಿಕೊಂಡಿರುವ ಪೊಲೀಸರು ಎನ್ಎಸ್ ಜಿ ಸಿಬ್ಬಂದಿಗೆ ಮಾಹಿತಿ ನೀಡಿದರು. ದಸರಾದ ಪ್ರಮುಖ ಆಕರ್ಷಣೆಯಾದ ಆನೆಗಳು ತಂಗುವ ಬಿಡಾರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿತು. [ಮೈಸೂರು ಮೃಗಾಲಯಕ್ಕೆ ಬಂದ ವಿರಾಟ್, ಬಬ್ಲಿ]

ಅರಮನೆಗೆ ಆಗಮಿಸುವ ಪ್ರವಾಸಿಗರ ಮೇಲೆ ನಿಗಾ ವಹಿಸಲು ಅಳವಡಿಸಿರುವ ಸಿಸಿಟಿವಿಗಳ ಪರಿಶೀಲನೆ ನಡೆಸಿದ ತಂಡ, ಪ್ರವೇಶ ದ್ವಾರದಲ್ಲಿ ಪ್ರತಿಯೊಬ್ಬ ಪ್ರವಾಸಿಗರನ್ನು ಪರೀಕ್ಷಿಸಲು ಇಟ್ಟಿರುವ ಲೋಹ ಶೋಧಕ ಯಂತ್ರ ಸೇರಿದಂತೆ ಅರಮನೆ ಹೊರ ಮತ್ತು ಒಳ ಆವರಣಗಳ ಭದ್ರತೆ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆಯಿತು. [ದಸರಾ ಉದ್ಘಾಟಿಸಲಿದ್ದಾರೆ ಗಿರೀಶ್ ಕಾರ್ನಾಡ್]

ಸಲಹೆ ಇದ್ದರೆ ನೀಡುತ್ತಾರೆ : ಎನ್ಎಸ್ ಜಿ ತಂಡದ ಭೇಟಿ ಬಗ್ಗೆ ಮಾಹಿತಿ ನೀಡಿರುವ ಅರಮನೆ ಭದ್ರತಾ ಪಡೆ ಸಹಾಯಕ ಪೊಲೀಸ್‌ ಆಯುಕ್ತ ಚನ್ನಯ್ಯ ಅವರು, ಅರಮನೆಗೆ ನಿತ್ಯ ಸಹಸ್ರಾರು ಪ್ರವಾಸಿ­ಗರು ಭೇಟಿ ನೀಡುತ್ತಾರೆ. ಈ ಹಿನ್ನೆಲೆ­ಯಲ್ಲಿ ತಂಡ ಪ್ರತಿ ಎರಡು ವರ್ಷಕ್ಕೊಮ್ಮೆ ಅರಮನೆಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುತ್ತದೆ.

ಮಂಗಳ­ವಾರ ಸಹ ತಂಡ ಅರಮನೆ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದೆ. ಹೆಚ್ಚು­ವರಿ ಭದ್ರತೆಯ ಅಗತ್ಯವಿದ್ದಲ್ಲಿ. ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ರಾಜ್ಯ ಸರ್ಕಾ­ರಕ್ಕೆ ವರದಿಯೊಂದನ್ನು ಸಲ್ಲಿಸಲಿದೆ ಎಂದು ಚನ್ನಯ್ಯ ಅವರು ತಿಳಿಸಿದ್ದಾರೆ.

English summary
11 member team of National Security Guards (NSG) from Hyderabad inspected the Amba Vilas Palace Mysore on Tuesday as part of routine security check.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X