ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಅನಿವಾಸಿ ಭಾರತೀಯರ 'ನಾವಿಕೋತ್ಸವ'

|
Google Oneindia Kannada News

ಮೈಸೂರು, ಏಪ್ರಿಲ್ 24: ಅನಿವಾಸಿ ಭಾರತೀಯ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಆಗಸ್ಟ್ 4,5 ರಂದು 'ನಾವಿಕೋತ್ಸವ 2018'ನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದೆ.

ನಮ್ಮ ಕನ್ನಡ ನಾಡನ್ನು ಬಿಟ್ಟು ಬೇರೆ ಬೇರೆ ದೇಶಗಳಲ್ಲಿ, ಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ, ಬೇರೆ ಭಾಷೆಯನ್ನು ಕಲಿತು, ಬೇರೆ ಜನರೊಂದಿಗೆ ಬಾಳುತ್ತಿದ್ದಾರೆ ಆದರೆ ಕನ್ನಡವನ್ನು ಮರೆಯಲು ಸಾಧ್ಯವಿಲ್ಲ, ಯಾವುದಾದರು ಒಂದು ನೆಪ ಹುಡುಕಿಕೊಂಡು ಸೇರುತ್ತಲೆ ಇರುತ್ತಾರೆ ಹಾಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರೆಲ್ಲ ಸೇರಿ ನಾವಿಕ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಯಶಸ್ವಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

ಈ ವರ್ಷ ನಾವಿಕ ಸಂಸ್ಥೆ ನಮ್ಮ ವಿಶ್ವಕನ್ನಡೋತ್ಸವ - 2018 ಅಂದರೆ ನಾವಿಕೋತ್ಸವ 2018 ಎಂಬ ಎರಡು ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದೆ.

nri-kannadigas-navikotsava-at-mysuru-in-august

ಅನಿವಾಸಿ ಭಾರತೀಯ ಸಮಿತಿ ಮತ್ತು ಕನ್ನಡ ಪ್ರಾಧಿಕಾರದ ಸಹಯೋಗದಿಂದ ಆಯೋಜಿಸಲ್ಪಡುವ ಈ ಹಬ್ಬದಲ್ಲಿ ಜಗತ್ತಿನಾದ್ಯಂತ ನೆಲೆಸಿರುವ ಎಲ್ಲ ಕನ್ನಡಿಗರು ಭಾಗವಹಿಸಬೇಕು ಎಂಬುದು ನಾವಿಕದ ಆಶಯವಾಗಿದೆ.

ಈ ಬಾರಿಯ ನಾವಿಕೋತ್ಸವದಲ್ಲಿ ಅಮೆರಿಕನ್ನಡೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲೆ, ಸಾಹಿತ್ಯ ಗೋಷ್ಠಿಗಳು, ವಿಚಾರ ಸಂಕೀರ್ಣಗಳು, ಸಂವಾದ, ಚರ್ಚೆ ಮತ್ತು ಮಾತುಕತೆಗಳಿಗೆ ವೇದಿಕೆ ಕಲ್ಪಿಸಿಕೊಡವ ಸಿದ್ಧತೆಯಲ್ಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು [email protected] ಗೆ ಇಮೇಲ್ ಕಳುಹಿಸಿ. ನೀವು ಮೈಸೂರಿನವರಾಗಿದ್ದು (ಎನ್‌ಆರ್ ಐ) ಮತ್ತು ಸ್ವಯಂ ಸೇವೆಗೆ ಇಚ್ಛಿಸಿದ್ದಲ್ಲಿ ಇಮೇಲ್ ಮೂಲಕ ತಿಳಿಸಬಹುದು.

ಈ ಉತ್ಸವದಲ್ಲಿ ಭಾಗವಹಿಸುವ ಎಲ್ಲ ಕನ್ನಡಿಗರಿಗೆ ಆಯೋಜಕರು ವೇದಿಕೆಯಲ್ಲಿ ಅವಕಾಶವನ್ನು ಮಾತ್ರ ಕಲ್ಪಿಸುತ್ತಾರೆ. ಪ್ರವಾಸ ಹಾಗೂ ಊಟೋಪಚಾರದ ಖರ್ಚನ್ನು ಭಾಗವಹಿಸುವವರೇ ಭರಿಸಬೇಕು ಎಂದು ತಿಳಿಸಿದ್ದಾರೆ.

English summary
Navika organisation of Mysuru is organising with department of Kannada and Culture an event of Non Residents of India, Navikotsava in August 4 and 5 at Mysuru. NRI Kannadigas will take part in this event
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X