ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ವಾರಣಾಸಿ ಎಕ್ಸ್‌ಪ್ರೆಸ್‌ ರೈಲಿಗೆ ಎಲ್‌ಎಚ್‌ಬಿ ಕೋಚ್‌

|
Google Oneindia Kannada News

ಮೈಸೂರು, ಏಪ್ರಿಲ್ 26 : ಮೈಸೂರು-ವಾರಣಾಸಿ ನಡುವೆ ಸಂಚಾರ ನಡೆಸುವ ಎಕ್ಸ್‌ಪ್ರೆಸ್ ರೈಲಿಗೆ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಮೈಸೂರು-ವಾರಣಾಸಿ ನಡುವೆ ವಾರಕ್ಕೆ ಎರಡು ಬಾರಿ ರೈಲು ಸಂಚಾರ ನಡೆಸುತ್ತದೆ.

ದೂರ ಪ್ರಯಾಣದ ರೈಲುಗಳಲ್ಲಿ ಲಿಂಕ್ ಹೋಫ್‌ಮ್ಯಾನ್ ಬುಶ್ (ಎಲ್‌ಎಚ್‌ಬಿ) ಕೋಚ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಈ ಯೋಜನೆ ಭಾಗವಾಗಿಯೇ ಮೈಸೂರು-ವಾರಣಾಸಿ ರೈಲಿಗೆ ಎಲ್‌ಎಚ್‌ಬಿ ಕೋಚ್ ಆಳವಡಿಕೆ ಮಾಡಲಾಗಿದೆ.

ಹುಬ್ಬಳ್ಳಿ-ಚೆನ್ನೈ ನಡುವೆ ವಾರಕ್ಕೊಂದು ವಿಶೇಷ ರೈಲು ಸಂಚಾರಹುಬ್ಬಳ್ಳಿ-ಚೆನ್ನೈ ನಡುವೆ ವಾರಕ್ಕೊಂದು ವಿಶೇಷ ರೈಲು ಸಂಚಾರ

ಎಲ್‌ಎಚ್‌ಬಿ ಕೋಚ್‌ಗಳನ್ನು ಜರ್ಮನಿ ತಂತ್ರಜ್ಞಾನದಲ್ಲಿ ತಯಾರು ಮಾಡಲಾಗಿದೆ. ದೂರ ಪ್ರಯಾಣ ಮಾಡುವಾಗ ಸುರಕ್ಷತೆ, ಆರಾಮದಾಯಕ ಪ್ರಯಾಣಕ್ಕೆ ಅನುಕೂಲವಾಗುವಂತೆ ಅಂತರಾಷ್ಟ್ರೀಯ ವಿನ್ಯಾಸದಲ್ಲಿ ಕೋಚ್‌ಗಳನ್ನು ಸಿದ್ಧಪಡಿಸಲಾಗಿದೆ.

ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು 6 ದಿನಕ್ಕೆ ವಿಸ್ತರಣೆಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು 6 ದಿನಕ್ಕೆ ವಿಸ್ತರಣೆ

LHB coaches

ಮೈಸೂರು-ವಾರಣಾಸಿ ನಡುವೆ ವಾರದಲ್ಲಿ ಎರಡು ದಿನ ರೈಲು ಸಂಚಾರ ನಡೆಸುತ್ತದೆ. ಗುರುವಾರ ಮೈಸೂರಿನಿಂದ ರೈಲು ಹೊರಡುತ್ತದೆ. ಶನಿವಾರ ವಾರಣಾಸಿಯಿಂದ ಮೈಸೂರಿಗೆ ರೈಲು ಹೊರಡುತ್ತದೆ.

ಮೈಸೂರು-ಕುಶಾಲನಗರ ರೈಲು ಮಾರ್ಗಕ್ಕೆ ಕೇಂದ್ರದ ಒಪ್ಪಿಗೆಮೈಸೂರು-ಕುಶಾಲನಗರ ರೈಲು ಮಾರ್ಗಕ್ಕೆ ಕೇಂದ್ರದ ಒಪ್ಪಿಗೆ

ಮುಂದಿನ ಕೆಲವು ದಿನಗಳಲ್ಲಿ ಮೈಸೂರಿನಿಂದ ಸಂಚಾರ ನಡೆಸುವ ಮೈಸೂರು-ಹೌರಾ ಎಕ್ಸ್‌ಪ್ರೆಸ್, ಮೈಸೂರು-ಹಜರತ್ ನಿಜಾಮುದ್ದೀನ್ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸಹ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
LHB (Linke-Hofmann-Busch) rake added to Mysuru–Varanasi Express train. This is part of the long-term plan to replace the rakes of all long-distance trains in the country with the LHB rakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X