ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಡಿಕೆ ಮುಂದಿನ ಮುಖ್ಯಮಂತ್ರಿ: ವಿಶ್ವನಾಥ್ ಗ್ಯಾರಂಟಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 29: ಸಿ.ಪೋರ್ ಸಮೀಕ್ಷೆಯಿಂದ ಬೀಗುವುದು ಬೇಡ ಹಣ ನೀಡಿದರೆ ಯಾರೂ ಬೇಕಾದರೂ, ಯಾವ ಪಕ್ಷಕ್ಕೆ ಬೇಕಾದರೂ ಸರ್ಟಿಫಿಕೆಟ್ ಕೊಡುತ್ತಾರೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸರ್ಕಾರದಿಂದ ಕೆರೆಗಳ ಅಕ್ರಮ ಡಿನೋಟಿಫಿಕೇಶನ್: ವಿಶ್ವನಾಥ್ ಆರೋಪ ಸರ್ಕಾರದಿಂದ ಕೆರೆಗಳ ಅಕ್ರಮ ಡಿನೋಟಿಫಿಕೇಶನ್: ವಿಶ್ವನಾಥ್ ಆರೋಪ

ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ 7ನೇ ವಾರ್ಡಿನಲ್ಲಿ ಆಯೋಜಿಸಿದ್ದ ಸಾಮೂಹಿಕ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Noboday can stop H.D.Kumaraswmy to become next CM of Karnataka: Vishwanath

ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ನಿರ್ಣಾಯಕ ಪಾತ್ರವಹಿಸಲಿದೆ, ರಾಜ್ಯದ ಜನತೆ ಈಗಾಗಲೇ ಜಾಗರೂಕರಾಗಿದ್ದು, ಯಾವ ಸಮೀಕ್ಷೆಯಿಂದಲೂ ಜನರ ಮನಸ್ಸನ್ನು ಬದಲಾಯಿಸಲು ಹಾಗೂ ಎಚ್.ಡಿ. ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.

ಎಚ್.ವಿಶ್ವನಾಥ್ ಪುತ್ರ ಅಮಿತ್ ಸ್ಥಾನಕ್ಕೂ ಬಂತು ಕುತ್ತು!ಎಚ್.ವಿಶ್ವನಾಥ್ ಪುತ್ರ ಅಮಿತ್ ಸ್ಥಾನಕ್ಕೂ ಬಂತು ಕುತ್ತು!

ಇದೇ ವೇಳೆ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲೂನಿಯ ಪುರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಶಿವಪ್ಪನವರ ಮೊಮ್ಮಗ ಚೇತನ್ ಕುಮಾರ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಆಯೋಜಿಸಿದ ಹಿನ್ನಲೆಯಲ್ಲಿ ಪಟ್ಟಣದ ಹಾಗೂ ತಾಲೂಕಿನ ನೂರಾರು ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಎಚ್.ವಿಶ್ವನಾಥ್ ಮತ್ತು ಹರೀಶ್ ಗೌಡ ನೇತೃತ್ವದಲ್ಲಿ ಸೇರ್ಪಡೆಗೊಂಡಿದ್ದು ವಿಶೇಷವಾಗಿತ್ತು.

ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಜೆಡಿಎಸ್ ಸೇರ್ಪಡೆಗೊಂಡ ನಂತರ ಹಲವಡೆ ಯುವಕರು, ಇತರೆ ಪಕ್ಷದ ಕಾರ್ಯಕರ್ತರು, ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ವಿಶ್ವನಾಥ್ ಅವರಿಗೆ ಹುಮ್ಮಸ್ಸು ಮೂಡಿಸಿದೆ. ಜತೆಗೆ ಈಗಾಗಲೇ ಹುಣಸೂರು ಕ್ಷೇತ್ರದಿಂದ ಎಚ್.ವಿಶ್ವನಾಥ್ ಅವರೇ ಸ್ಪರ್ಧಿಸುವುದು ಖಚಿತವಾಗಿರುವುದರಿಂದ ಜೆಡಿಎಸ್ ಸಕ್ರಿಯವಾಗಿರುವುದು ಕಂಡು ಬರುತ್ತಿದೆ.

English summary
Noboday can stop H.D.Kumaraswmy to become next chief minister of Karnataka, JDS leader H.Vishwanath told to in a programme which takes place in Hunsur, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X