ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿಗೆ 8 ತಿಂಗಳಿನಿಂದ ಉಪಕುಲಪತಿಗಳೇ ಇಲ್ಲ!

By Yashaswini
|
Google Oneindia Kannada News

ಮೈಸೂರು, ಅಕ್ಟೋಬರ್ 12 : ದೇಶದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವ, ಶತಮಾನೋತ್ಸವ ಆಚರಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ ಪ್ರಮುಖ 6 ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳಿಲ್ಲದೆ ಹಂಗಾಮಿ ಉಪಕುಲಪತಿಗಳೇ ಆಡಳಿತ ನಡೆಸುತ್ತಿದ್ದಾರೆ.

ಯು.ಆರ್.ಅನಂತಮೂರ್ತಿ ಪುತ್ರ ಮೈಸೂರು ವಿವಿ ಉಪಕುಲಪತಿ?ಯು.ಆರ್.ಅನಂತಮೂರ್ತಿ ಪುತ್ರ ಮೈಸೂರು ವಿವಿ ಉಪಕುಲಪತಿ?

ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಹಗ್ಗ- ಜಗ್ಗಾಟದಿಂದಾಗಿ ಉಪಕುಲಪತಿ ನೇಮಕ ಪಕ್ರಿಯೆ ನೆನೆಗುದಿಗೆ ಬಿದ್ದಿದ್ದು ವಿವಿಗಳಲ್ಲಿ ದೈನಂದಿನ ವ್ಯವಹಾರಗಳ ಹೊರತು ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಶೈಕ್ಷಣಿಕ ವಿಷಯಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ.

No vice chancellor for Mysuru university from 8 months

ಹಂಗಾಮಿ ಉಪಕುಲಪತಿಗಳ ಅಧ್ಯಕ್ಷತೆಯಲ್ಲಿ ಶಿಕ್ಷಣ ಮಂಡಳಿ ಸಭೆ ಹಾಗೂ ಸಿಂಡಿಕೇಟ್ ಸಭೆಗಳು ನಡೆದರೂ ಇಲ್ಲಿ ಪ್ರಮುಖ ವಿಷಯಗಳನ್ನು ಕಾರ್ಯಸೂಚಿಯಲ್ಲಿ ತರುತ್ತಿಲ್ಲ. ತಂದರೂ ಅವನ್ನು ಮುಂದೂಡುತ್ತಲೇ ಬರಲಾಗಿದೆ. ಇದರಿಂದ ವಿವಿ ಆಡಳಿತದಲ್ಲಿ ಚಟುವಟಿಕೆ ನೀಡುವಂತೆ ಸೂಚಿಸಿದ್ದಾರೆ. ಬೇರೆ ಪಟ್ಟಿ ಯಾಕೆ ಸಲ್ಲಿಸಬೇಕು ಎಂಬುದು ಸರ್ಕಾರದ ಧೋರಣೆ.

ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ಪತ್ರ ವ್ಯವಹಾರ ಕೂಡ ನಡೆದಿದೆ. ಮೈಸೂರು ವಿವಿಗೆ ಪ್ರೊ.ಸಿ.ಪಿ.ಸಿದ್ಧಾಶ್ರಮ ಹಂಪಿ , ಕನ್ನಡ ವಿವಿ ಉಪಕುಲಪತಿ ಡಾ.ಮಲ್ಲಿಕಾ ಘಂಟಿ, ಬೆಂಗಳೂರು ವಿವಿಯ ಪ್ರೊ.ಸೋಮಶೇಖರ್ ಅವರ ಹೆಸರುಗಳು ಶಿಫಾರಸಾಗಿದ್ದವು. ಇದರ ನಡುವೆ ವಿಶ್ರಾಂತ ಕುಲಪತಿ ದಿ.ಡಾ.ಯು.ಆರ್. ಅನಂತಮೂರ್ತಿ ಅವರ ಪುತ್ರನ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಪ್ರೊ.ಸಿ.ಪಿ.ಸಿದ್ಧಾಶ್ರಮ ಅವರು ಹೆಸರು ಶಿಫಾರಸ್ಸಾಗಿದ್ದರೂ ಕೊನೆ ಗಳಿಗೆಯಲ್ಲಿ ಅದನ್ನು ಹಿಂಪಡೆದು ಪ್ರೊ.ಸೋಮಶೇಖರ್ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು ಎನ್ನಲಾಗಿದೆ.

ಮೈಸೂರು ವಿವಿ ಕುಲಸಚಿವರ ಕಚೇರಿಗೆ ಬೀಗ!ಮೈಸೂರು ವಿವಿ ಕುಲಸಚಿವರ ಕಚೇರಿಗೆ ಬೀಗ!

ಇನ್ನು ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾನಿಲಯ ದಲ್ಲಿ ಪೂರ್ಣಕಾಲಿಕ ಉಪಕುಲಪತಿ, ಕುಲಸಚಿವ ಹಾಗೂ ಮೌಲ್ಯಮಾಪನ ಕುಲಸಚಿವರಿಲ್ಲದೆ ಎರಡು ವರ್ಷ ಕಳೆದಿದೆ. ಬೆಂಗಳೂರು ವಿಶ್ವವಿದ್ಯಾನಿಲಯ ಹಾಗೂ ಇಲ್ಲದಂತಾಗಿದೆ. ಉಪಕುಲಪತಿಗಳೇ ಇಲ್ಲದಿರುವುದರಿಂದ ಶೈಕ್ಷಣಿಕ ಗುಣಮಟ್ಟಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ. ಶೋಧನಾ ಸಮಿತಿ ಶಿಫಾರಸ್ಸು ಮಾಡಿದ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿರುವ ಪಟ್ಟಿಗೆ ರಾಜ್ಯಪಾಲರು ಸಹಿ ಹಾಕುತ್ತಿಲ್ಲ.

ಹಾಗೆಯೇ ರಾಜ್ಯಪಾಲರು ವಾಪಸ್ ಕಳುಹಿಸಿದ ಹೆಸರನ್ನೇ ಸರ್ಕಾರ ಮತ್ತೆ ಮತ್ತೆ ಸಲ್ಲಿಸುತ್ತಿದೆ. ಇದು ಸರ್ಕಾರ ಮತ್ತು ರಾಜಭವನದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಮೈಸೂರು, ಬೆಂಗಳೂರು ಹಾಗೂ ರಾಜೀವ್ ‍ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಕ್ಕೆ ಉಪಕುಲಪತಿ ನೇಮಕ ಸಂಬಂಧ ಪ್ರತ್ಯೇಕ ಶೋಧನಾ ಸಮಿತಿ ರಚನೆ ಮಾಡಲಾಗಿದೆ.

ಮೂರು ಶೋಧನಾ ಸಮಿತಿಗಳು ಪ್ರತ್ಯೇಕವಾಗಿ ಸಭೆ ಸೇರಿ, ಅರ್ಜಿಗಳನ್ನು ಪರಿಶೀಲಿಸಿ, ಜೇಷ್ಠತೆಯ ಆಧಾರದಲ್ಲಿ ಅರ್ಹತಾ ಪಟ್ಟಿಯನ್ನು ಸರ್ಕಾರಕ್ಕೆ ಶಿಫಾರಸಿನ ಮೂಲಕ ಸಲ್ಲಿಸಿವೆ. ಸರ್ಕಾರವು ಆ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದೆ. ಆದರೆ, ರಾಜ್ಯಪಾಲರು ಸರ್ಕಾರ ಸಲ್ಲಿಸಿರುವ ಯಾವ ಪಟ್ಟಿಗೂ ಹಸಿರು ನಿಶಾನೆ ತೋರಿಲ್ಲ. ಬೇರೆ ಪಟ್ಟಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಹುದ್ದೆಗಳು ತೆರವುಗೊಂಡು 8 ತಿಂಗಳು ಕಳೆದಿದೆ. 4 ತಿಂಗಳಿಂದ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆ ಖಾಲಿ ಬಿದ್ದಿದೆ.

ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಹುದ್ದೆ ಖಾಲಿಯಾಗಿ ಒಂದೂವರೆ ತಿಂಗಳು ಕಳೆದಿದೆ. ಇನ್ನು, ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಮಾನ್ಯತೆ ನೀಡುವ, ಅದರ ನಿರ್ವಹಣೆ ಮಾಡುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ತಿಂಗಳಿಂದ ಉಪಕುಲಪತಿ ಹುದ್ದೆಗೆ ಕಾಯಂ ನೇಮಕಾತಿಯಾಗಿಲ್ಲ.

ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ಸೇರಿ ರಾಜ್ಯ ದಲ್ಲಿ 48 ವಿಶ್ವವಿದ್ಯಾಲಯಗಳಿವೆ. ಸರ್ಕಾರದ ಅಧೀನ ದಲ್ಲಿರುವ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರೇ ಉಪಕುಲಪತಿಗಳಾಗಿರುತ್ತಾರೆ. ಉಪಕುಲಪತಿ ನೇಮಕಕ್ಕೂ ಅಂತಿಮ ಸಹಿ ರಾಜ್ಯಪಾಲರೇ ಹಾಕಬೇಕು. ಆದರೆ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಕುಲಾಧಿಪತಿ, ಉಪಕುಲಪತಿ ನೇಮಕ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ.

English summary
Vice chancellor has not been appointed for Mysuru University since 8 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X