ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾರ ಮೇಲೆ ಯಾರೂ ದೂರು ಕೊಟ್ಟಿಲ್ಲ; ಜಿ.ಟಿ.ದೇವೇಗೌಡ

|
Google Oneindia Kannada News

ಮೈಸೂರು, ಜೂನ್ 20: ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ದೂರು ನೀಡಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನಿರಾಧಾರ ಎಂದು ಮೈಸೂರಿನಲ್ಲಿ ಸಚಿವ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.

ಮೈತ್ರಿ ಪಕ್ಷದಲ್ಲಿ ಎಲ್ಲರೂ ಅನ್ಯೋನ್ಯವಾಗಿದ್ದಾರೆ. ಹೈಕಮಾಂಡ್ ಗೆ ಯಾವುದೇ ದೂರನ್ನು ನೀಡಿಲ್ಲ ಎಂದು ಅವರು ಹೇಳಿದರು.

 ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭವಿಲ್ಲ, ಸಿದ್ದರಾಮಯ್ಯ ವರದಿ 4 ಅಂಶಗಳು ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭವಿಲ್ಲ, ಸಿದ್ದರಾಮಯ್ಯ ವರದಿ 4 ಅಂಶಗಳು

ಸರ್ಕಾರ ನಡೆಸೋದಕ್ಕೆ ಅವಕಾಶ ಕೊಡಿ. ಎಲ್ಲಾ ರೀತಿ ತೊಡಕುಗಳನ್ನು ನಿವಾರಿಸಲು ಸಹಕಾರ ಕೊಡಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತಾಡಿದ್ದೇವೆ. ಕಾಂಗ್ರೆಸ್ ಗೆ ಅಭದ್ರತೆ ಸೃಷ್ಟಿಸುವ ಅವಶ್ಯಕತೆ ಇಲ್ಲಿ ಇಲ್ಲ. ಪ್ರೀತಿ ವಿಶ್ವಾಸದಿಂದ ಇರೋದು ನಮ್ಮ ಮುಂದಿನ ಗುರಿಯಷ್ಟೆ ಎಂದು ತಿಳಿಸಿದರು.

No one complaints about congress or jds said gt devegowda

ದೆಹಲಿಯಲ್ಲಿ ಕೂತು ಸಿದ್ದರಾಮಯ್ಯ ಹೂಡಿದ ದಾಳಕ್ಕೆ ಗಿರ್ರನೇ ತಿರುಗಿದ ರಾಜ್ಯ ಕಾಂಗ್ರೆಸ್ಸಿಗರುದೆಹಲಿಯಲ್ಲಿ ಕೂತು ಸಿದ್ದರಾಮಯ್ಯ ಹೂಡಿದ ದಾಳಕ್ಕೆ ಗಿರ್ರನೇ ತಿರುಗಿದ ರಾಜ್ಯ ಕಾಂಗ್ರೆಸ್ಸಿಗರು

ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಭೇಟಿ ವಿಚಾರವನ್ನು ಪ್ರಸ್ತಾಪಿಸಿ, ಚುನಾವಣೆಯ ಅವಲೋಕನೆಗೆ ಸಿದ್ದರಾಮಯ್ಯ ಅಲ್ಲಿಗೆ ಹೋಗಿದ್ದರು. ಸೋಲಿನ ವರದಿ ಕೊಡುವುದಕ್ಕೆ ಭೇಟಿ ಕೊಟ್ಟಿದ್ದಾರೆ ಅಷ್ಟೆ. ಯಾವುದೇ ದೂರು ಕೊಟ್ಟಿಲ್ಲ ಎಂದರು ಜಿ.ಟಿ. ದೇವೇಗೌಡ.

English summary
No one in the party complaints about congress or jds said gt devegowda in mysuru. Siddaramaiah met rahul gandhi just for the sake of givign election overview he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X