ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳಿಗೆ ತಪ್ಪಿಲ್ಲ ಶಾಲಾ ಬ್ಯಾಗ್ ಹೊರೆ: ಪತ್ರಕ್ಕಷ್ಟೇ ಸೀಮಿತವಾದ ಆದೇಶ

|
Google Oneindia Kannada News

ಮೈಸೂರು, ಜುಲೈ 23: ಶಾಲಾ ಮಕ್ಕಳ ಬ್ಯಾಗ್ ಇಂತಿಷ್ಟೇ ತೂಕವಿರಬೇಕೆಂದು ಆದೇಶ ನೀಡಿ, ಮಕ್ಕಳ ಹೊರೆ ತಗ್ಗಿಸಲು ನೀತಿ ರೂಪಿಸಿದ ಸುಪ್ರೀಂ ಕೋರ್ಟ್‌, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರೂ ರಾಜ್ಯದ ಬಹುತೇಕ ಶಾಲೆಗಳು ಈ ನಿಯಮವನ್ನು ಪಾಲನೆ ಮಾಡುತ್ತಿಲ್ಲ.

ನ್ಯಾಯಾಲಯದ ಆದೇಶದನ್ವಯ ರಾಜ್ಯ ಸರ್ಕಾರ ಅಧಿಸೂಚನೆಯಂತೆ ಪ್ರತಿ ತರಗತಿಗೆ ಬ್ಯಾಗ್‌ ತೂಕ ಇಂತಿಷ್ಟು ಎಂದು ನಿಗದಿಪಡಿಸಲಾಗಿದೆ. 1 ಮತ್ತು 2ನೇ ತರಗತಿಯ ಮಕ್ಕಳಿಗೆ 1.5-2 ಕೆ.ಜಿಯಷ್ಟು ಮಾತ್ರ ಬ್ಯಾಗಿನ ತೂಕವಿರಬೇಕು. ಇದೇ ರೀತಿ, 3 ಮತ್ತು 5 ನೇ ತರಗತಿಯ ಮಕ್ಕಳಿಗೆ 2-3 ಕೆ.ಜಿ, 6 ರಿಂದ 8ನೇ ತರಗತಿಯ ಮಕ್ಕಳಿಗೆ 3-4 ಕೆ.ಜಿ, 8 ಮತ್ತು 9ನೇ ತರಗತಿಯ ಮಕ್ಕಳಿಗೆ 4-4.5 ಕೆಜಿ ಹಾಗೂ 10ನೇ ತರಗತಿಯ ಮಕ್ಕಳಿಗೆ 4-5 ಕೆ.ಜಿ ಬ್ಯಾಗ್ ತೂಕ ಮೀರುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಉತ್ತಮವಾಗಿ ಕಲಿಯಲು ಸಾಧ್ಯವೆಂಬ ನಿಟ್ಟಿನಲ್ಲಿ ಈ ಆದೇಶ ನೀಡಿತ್ತು.

 ಹ್ಯಾಪಿ ನ್ಯೂಸ್: ಶಾಲಾ ಮಕ್ಕಳ ಬ್ಯಾಗ್ ಭಾರ ಇಳಿಸಿದ ಸರ್ಕಾರ ಹ್ಯಾಪಿ ನ್ಯೂಸ್: ಶಾಲಾ ಮಕ್ಕಳ ಬ್ಯಾಗ್ ಭಾರ ಇಳಿಸಿದ ಸರ್ಕಾರ

ಆದರೆ ಅನೇಕ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಇದರಿಂದ ಮಕ್ಕಳು ಭಾರವಾದ ಬ್ಯಾಗ್‌ ಹೊತ್ತು ಏದುಸಿರು ಬಿಡುತ್ತಾ ಶಾಲೆಗೆ ಹೋಗುವುದು ಅನಿವಾರ್ಯವಾಗಿದೆ.

no implementation of order on Children School Bag Load

ಮಕ್ಕಳು ಚೆನ್ನಾಗಿ ಓದಲಿ ಅಂತ ಒಳ್ಳೆಯ ಶಾಲೆಗಳಿಗೆ ಸೇರಿಸುತ್ತೇವೆ. ಅಲ್ಲಿನ ನಿಯಮಾವಳಿಯಂತೆ ನಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ವೇಳಾ ಪಟ್ಟಿಯಂತೆ ಪ್ರತಿ ದಿನ ಮಕ್ಕಳ ಬ್ಯಾಗಿಗೆ ಪುಸ್ತಕ ಮತ್ತು ಇನ್ನಿತರ ಚಟುವಟಿಕೆಗಳ ಸಾಮಗ್ರಿಗಳನ್ನು ಹಾಕಿ ಕಳಿಸುತ್ತೇವೆ ಎಂಬುದು ಪಾಲಕರ ಮಾತು.

ಇತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ, "ನಾವು ಸರ್ಕಾರದ ಸೂಚನೆಯನ್ವಯ ಈಗಾಗಲೇ ನೋಟಿಸ್ ನೀಡಿದ್ದೇವೆ. ಎರಡನೇ ನೋಟಿಸ್ ಅನ್ನು ನೀಡುತ್ತೇವೆ. ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎನ್ನುತ್ತಾರೆ.

ಶಾಲಾ ಮಕ್ಕಳು ತಿಂಗಳಲ್ಲಿ 2 ದಿನ ಸ್ಕೂಲ್‌ ಬ್ಯಾಗ್‌ ಹೊರಬೇಕಾಗಿಲ್ಲಶಾಲಾ ಮಕ್ಕಳು ತಿಂಗಳಲ್ಲಿ 2 ದಿನ ಸ್ಕೂಲ್‌ ಬ್ಯಾಗ್‌ ಹೊರಬೇಕಾಗಿಲ್ಲ

"ಮಕ್ಕಳಿಗೆ ಬ್ಯಾಗ್ ತೂಕದ ಕುರಿತು ನಿರ್ಣಯ ತೆಗೆದುಕೊಳ್ಳುವುದು ಅಸಾಧ್ಯ. ಬ್ಯಾಗಿನ ತೂಕವೇ 1 ಕೆ.ಜಿ.ಗೂ ಹೆಚ್ಚಿರುತ್ತದೆ. ಶಾಲೆಯ ಬ್ಯಾಗ್ ಜೊತೆ ಮ್ಕಕಳು ಊಟದ ಬಾಕ್ಸ್ ತರಬೇಕು. ಮಕ್ಕಳ ಪ್ರತಿ ಶಾಲಾ ಪುಸ್ತಕ 400-600 ಗ್ರಾಂ ಇರುತ್ತದೆ. ಹೀಗಿದ್ದಾಗ ಆದೇಶ ಪಾಲಿಸುವುದು ಹೇಗೆ" ಎನ್ನುತ್ತಾರೆ ಶಾಲಾ ಆಡಳಿತ ಮಂಡಳಿಯವರು.

ಒಟ್ಟಾರೆ ಸರ್ಕಾರದ ಈ ಬ್ಯಾಗ್ ನಿಯಮ ಕೇವಲ ಪೇಪರ್ ಗಷ್ಟೇ ಸೀಮಿತವಾಗಿದ್ದು, ಹಲವು ಗೊಂದಲದಿಂದಲೇ ಕೂಡಿಕೊಂಡು ಜಾರಿಗೆ ಬರದಂತಾಗಿದೆ.

English summary
The court order was not implemented effectively on reducing of Children’s school bag weight. Most of the schools in the states are not following the rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X