ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಜಿಲ್ಲೆಯ ಲಾಕ್ ಡೌನ್ ಗೊಂದಲಕ್ಕೆ ತೆರೆ ಎಳೆದ ಡಿಸಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 13: ಮೈಸೂರು ಲಾಕ್ ಡೌನ್ ಗೊಂದಲಕ್ಕೆ ತೆರೆ ಬಿದ್ದಿದೆ. ಮೈಸೂರು ಸಂಪೂರ್ಣ ಲಾಕ್ ಡೌನ್ ಇಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದಾರೆ.

Recommended Video

Steve Jobs , ಹೆತ್ತವರಿಗೆ ಬೇಡವಾಗಿದ್ದ ಕೂಸು , ಜಗತ್ತನ್ನೇ ಗೆದ್ದ ಕಥೆ | Oneindia Kannada

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಇಡೀ ಮೈಸೂರು ಲಾಕ್‌ಡೌನ್ ಮಾಡಲ್ಲ. ಎನ್ .ಆರ್.ಕ್ಷೇತ್ರದ ಕೆಲವು ಭಾಗ ಮಾತ್ರ ಲಾಕ್‌ಡೌನ್ ಮಾಡುತ್ತೇವೆ. ಲಾಕ್‌ಡೌನ್‌ ಅನ್ನು ತೋರ್ಪಡಿಕೆಗೆ ಅಥವಾ ಅವೈಜ್ಞಾನಿಕವಾಗಿ ಮಾಡಬಾರದು. ಲಾಕ್‌ಡೌನ್‌ನಿಂದ ಕೇಸುಗಳೇನು ಕಡಿಮೆ ಆಗೋಲ್ಲ" ಎಂದು ಹೇಳಿದ್ದಾರೆ.

ಮೈಸೂರು: ಕೊರೊನಾ ವೈರಸ್ ಜೊತೆಗೆ ಕಂಟೈನ್ಮೆಂಟ್ ವಲಯಗಳು ಏರಿಕೆಮೈಸೂರು: ಕೊರೊನಾ ವೈರಸ್ ಜೊತೆಗೆ ಕಂಟೈನ್ಮೆಂಟ್ ವಲಯಗಳು ಏರಿಕೆ

ನಮ್ಮ ಉದ್ದೇಶ ಸಾವು ಕಡಿಮೆ‌ ಮಾಡುವುದು. ಅದಕ್ಕಾಗಿ ಲಾಕ್‌ಡೌನ್ ಮಾಡಿ ಸರ್ವೇ ಮಾಡುತ್ತೇವೆ. ಸರ್ವೆ ಸಂದರ್ಭದಲ್ಲಿ ಆಂಟಿಜೆನ್ ಟೆಸ್ಟ್ ಮಾಡಿ ಸ್ಥಳದಲ್ಲೇ ಫಲಿತಾಂಶ ಪಡೆಯುತ್ತೇವೆ. ಮುಂಬೈ ಧಾರಾವಿ ಮಾಡೆಲ್‌ನಲ್ಲಿ ಚೇಜಿಂಗ್ ವೈರಸ್ ಮಾಡೆಲ್ ಪ್ರಯತ್ನ ಮಾಡ್ತಿವಿ. ಆ ಮೂಲಕ ನಿಗದಿತ ಕಂಟೈನ್ಮೆಂಟ್ ಜೋನ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.

Only Selected Areas Lockdown In Mysuru District

ಸದ್ಯಕ್ಕೆ ಲಾಕ್‌ಡೌನ್ ಇಲ್ಲ. ಭವಿಷ್ಯದಲ್ಲಿ ಅಗತ್ಯವಿದ್ದರೆ ಮಾತ್ರ ಲಾಕ್‌ಡೌನ್ ಮಾಡಲಾಗುತ್ತದೆ. ಸ್ವಯಂ ಲಾಕ್‌ಡೌನ್ ಗೆ ಬೆಂಬಲ‌ ಕೊಡುತ್ತೇವೆ. ಕೆಲವು ಕಡೆ ಸ್ಥಳಿಯರ ಸಹಾಯದಿಂದ ನಾವು ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ಪಡುತ್ತಿದ್ದೇವೆ. ಇಂದಿನ ಸಿಎಂ ಸಭೆಯಲ್ಲೂ ಅದನ್ನೇ ಹೇಳಿದ್ದೇವೆ. ಮೈಸೂರಿಗೆ ಲಾಕ್‌ಡೌನ್ ಅವಶ್ಯಕತೆ ಇಲ್ಲ ಅಂತ ಸಿಎಂಗೂ ಹೇಳಿದ್ದೇವೆ ಎಂದು ತಿಳಿಸಿದರು.

ಸುಭಾಷ್ ನಗರ, ಮಂಡಿ ಮೊಹಲ್ಲ, ಉದಯಗಿರಿ, ಕಲ್ಯಾಣ ಗಿರಿ ಮಾತ್ರ ಲಾಕ್ ಡೌನ್ ಮಾಡಲಾಗುತ್ತದೆ ಎಂದಿದ್ದಾರೆ.

English summary
There is no complete lockdown in mysuru, informed dc Abhiram G Shankar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X