ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢ ಪೂಜೆಗೆ ಬ್ರೇಕ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 16: "ಈಗ ಪರಿಸ್ಥಿತಿ ಸಂಪೂರ್ಣ ಸುಧಾರಿಸಿಲ್ಲ. ಹೀಗಾಗಿ ಚಾಮುಂಡಿ ಬೆಟ್ಟದಲ್ಲಿ ಆಷಾಢ ವಿಶೇಷ ಪೂಜೆ ಬೇಡವೆಂದು ಆಡಳಿತ ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ. ಆಷಾಢದ ಪ್ರತಿ ಶುಕ್ರವಾರ ಲಕ್ಷಾಂತರ ಜನ ಬೆಟ್ಟಕ್ಕೆ ಬರುವ ಹಿನ್ನೆಲೆ ಪೂಜೆ ಬೇಡ ಎಂಬ ತೀರ್ಮಾನಕ್ಕೆ ಬರುತ್ತಿದ್ದೇವೆ" ಎಂದು ತಿಳಿಸಿದ್ದಾರೆ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್.

Recommended Video

COVID-19 have connection with the solar eclipse? | Oneindia Kannada

ಸದ್ಯಕ್ಕೆ ಚಾಮುಂಡಿ ಬೆಟ್ಟದಲ್ಲಿ ಆಷಾಢ ಪೂಜೆಗೆ ಬ್ರೇಕ್ ಹಾಕಲು ತೀರ್ಮಾನಿಸಲಾಗಿದೆ. ದಸರಾ ವಿಚಾರದಲ್ಲಿ ಇನ್ನೂ ಯಾವ ಚರ್ಚೆಯನ್ನೂ ಆರಂಭಿಸಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಅದರ ಚರ್ಚೆಗಳು ಶುರುವಾಗುತ್ತವೆ ಎಂದು ತಿಳಿಸಿದ್ದಾರೆ.

 ಆಷಾಢ ಮಾಷದ ವಿಶೇಷ ಪೂಜೆ, ಚಾಮುಂಡೇಶ್ವರಿ ವರ್ಧಂತಿಗೆ ಬ್ರೇಕ್

ಆಷಾಢ ಮಾಷದ ವಿಶೇಷ ಪೂಜೆ, ಚಾಮುಂಡೇಶ್ವರಿ ವರ್ಧಂತಿಗೆ ಬ್ರೇಕ್

ಆಷಾಢ ಮಾಸದ ಒಂದು ತಿಂಗಳು ಶುಕ್ರವಾರ, ಶನಿವಾರ, ಭಾನುವಾರ ಮೂರು ದಿನವೂ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದರ್ಶನ ಇರುವುದಿಲ್ಲ. ಈ ಬಾರಿ ಚಾಮುಂಡೇಶ್ವರಿ ವರ್ಧಂತಿ ಆಚರಣೆಯೂ ನಡೆಯುವುದಿಲ್ಲ. ಎಲ್ಲಿಯೂ ವರ್ಧಂತಿ ಹಾಗೂ ಆಷಾಢ ಮಾಸದ ಹೆಸರಿನಲ್ಲಿ ಪ್ರಸಾದ ವಿನಿಯೋಗ ಮಾಡುವಂತಿಲ್ಲ. ದೇವಾಲಯದ ಒಳಗಡೆ ಎಂದಿನಂತೆ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಜಿಲ್ಲಾ ವ್ಯಾಪ್ತಿಯ ಚಾಮುಂಡೇಶ್ವರಿ ದೇಗುಲದಲ್ಲಿ ಆಷಾಢ ಪೂಜೆ ನಡೆಸುವ ಸಂಬಂಧ ಚರ್ಚೆ ನಡೆಸಿ‌ ಆದೇಶ ಮಾಡುತ್ತೇವೆ ಎಂದು ಡಿಸಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.

ಹಸಿರನ್ನೊದ್ದ ಚಾಮುಂಡಿ ಬೆಟ್ಟದಲ್ಲೀಗ ಬೆಳ್ಮೋಡಗಳ ಮನಮೋಹಕ ಚಿತ್ತಾರ...ಹಸಿರನ್ನೊದ್ದ ಚಾಮುಂಡಿ ಬೆಟ್ಟದಲ್ಲೀಗ ಬೆಳ್ಮೋಡಗಳ ಮನಮೋಹಕ ಚಿತ್ತಾರ...

 ಚಾಮುಂಡಿ ದೇವಿ ದರ್ಶನ ಪಡೆದ ಸಚಿವರು

ಚಾಮುಂಡಿ ದೇವಿ ದರ್ಶನ ಪಡೆದ ಸಚಿವರು

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಇಂದು ಸಚಿವರಾದ ಎಸ್.ಟಿ.ಸೋಮಶೇಖರ್, ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಸಚಿವರು. ನಾಡ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮತ್ತಿತರರು ಸಾಥ್ ನೀಡಿದರು.

 ವಿಧಾನ ಪರಿಷತ್‌ಗೆ ಎಚ್.ವಿಶ್ವನಾಥ್, ಎಂಟಿಬಿ, ಶಂಕರ್‌ ಹೆಸರು ಶಿಫಾರಸ್ಸು

ವಿಧಾನ ಪರಿಷತ್‌ಗೆ ಎಚ್.ವಿಶ್ವನಾಥ್, ಎಂಟಿಬಿ, ಶಂಕರ್‌ ಹೆಸರು ಶಿಫಾರಸ್ಸು

"ಬಿಜೆಪಿ ಕೋರ್ ಕಮಿಟಿಯಲ್ಲಿ ಈ ಮೂವರ ಹೆಸರನ್ನು ಅಂತಿಮ ಮಾಡಲಾಗಿದೆ. ಕೋರ್ ಕಮಿಟಿ ತನ್ನ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿದೆ. ಸಂಜೆ ವೇಳೆಗೆ ಅಧಿಕೃತ ಆದೇಶ ಬರಲಿದೆ. ಮೂವರು ಒಂದೇ ಕೋಮಿನವರು ಎಂಬ ಪ್ರಶ್ನೆಗಳು ಈಗ ಇಲ್ಲ. ಈ‌ ಮೂವರು ರಾಜೀನಾಮೆ ಕೊಟ್ಟಿರುವುದಕ್ಕೆ ಸರ್ಕಾರ ಬಂದಿರುವುದು. ಸಿಎಂ ಕೊಟ್ಟ ಭರವಸೆಯೇನು ಎಂಬುದು ನಮಗು ಅವರಿಗು ಗೊತ್ತು. ಅಲ್ಲಿ ಏನ್ ತೀರ್ಮಾನ ಆಗಬೇಕೋ ಅದೆಲ್ಲ ಆಗಿದೆ" ಎಂದು ತಿಳಿಸಿದರು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್.

ಶನಿವಾರ, ಭಾನುವಾರ ಮೈಸೂರಿಗೆ ಹೋಗುವವರ ಗಮನಕ್ಕೆಶನಿವಾರ, ಭಾನುವಾರ ಮೈಸೂರಿಗೆ ಹೋಗುವವರ ಗಮನಕ್ಕೆ

 ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಲಕ್ಷ ವೃಕ್ಷ ನೆಡುವ ಅಭಿಯಾನ

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಲಕ್ಷ ವೃಕ್ಷ ನೆಡುವ ಅಭಿಯಾನ

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಲಕ್ಷ ವೃಕ್ಷ ನೆಡುವ ಅಭಿಯಾನದ ಕುರಿತು ಇಂದು ಬೆಟ್ಟದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಹಸಿರೀಕರಣ ಮಾಡಲು ನೂತನ ಯೋಜನೆ ರೂಪಿಸಲಾಗಿದ್ದು, ಗಿಡ ನೆಡುವ ಜೊತೆಗೆ ನಿರ್ವಹಣೆಗೆ ಮಹತ್ವ ನೀಡಲಾಗಿದೆ. ರಾಜ್ಯಾದ್ಯಂತ ಈ ಯೋಜನೆ ರೂಪಿಸಲಾಗಿದ್ದು, ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು ಅರಣ್ಯ ಸಚಿವ ಆನಂದ್ ಸಿಂಗ್.

ಕಾಡಂಚಿನ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಚಿಂತನೆ ನಡೆದಿದೆ. ಈ ಬಗ್ಗೆ ಈಗಾಗಲೇ ಮಹತ್ವದ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್ ಎಲ್.ನಾಗೇಂದ್ರ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

English summary
No ashada puja will be held this time in Chamundi hills. chamundeswari Vardhanti celebrations will not take place this time said DC Abhiram Shankar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X