ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

LIVE: ನಾಡಹಬ್ಬ ಉದ್ಘಾಟನೆ ನೆರವೇರಿಸಿದ ಕವಿ ನಿಸಾರ್ ಅಹ್ಮದ್

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 21: ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2017ರ ಉದ್ಘಾಟನಾ ಸಮಾರಂಭ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ಇಂದು ಬೆಳಿಗ್ಗೆ 9:05ರ ಹೊತ್ತಿಗೆ ತುಲಾ ಲಗ್ನದಲ್ಲಿ ನೆರವೇರಿತು.

ಮೈಸೂರು ದಸರಾ: ಸೆ.21ರ ಕಾರ್ಯಕ್ರಮದ ಸಂಪೂರ್ಣ ವಿವರಮೈಸೂರು ದಸರಾ: ಸೆ.21ರ ಕಾರ್ಯಕ್ರಮದ ಸಂಪೂರ್ಣ ವಿವರ

11:00- ಸಿಂಹಾಸನದ ಮೇಲೆ ಕುಳಿತು ದರ್ಬಾರ್ ನಡೆಸಲಿರುವ ಯದುವೀರ್. ಈ ವೇಳೆ ಮೊಳಗಿದ ಕಾಯೋ ಶ್ರೀಗೌರಿ ಗೀತೆ.

10: 45- ಅರಮನೆ ಪುರೋಹಿತರಿಂದ ಗಣಹೋಮ, ಕಳಸಪೂಜೆ ಕಾರ್ಯ. ಆಹ್ವಾನಿತರನ್ನು ಹೊರತುಪಡಿಸಿ ಬೇರೆಯವರಿಗೆ ಅರಮನೆ ಪ್ರವೇಶ ನಿರ್ಬಂಧ

10: 30- ಅಂಬಾವಿಲಾಸ ಅರಮನೆಯಲ್ಲಿ ಮಹಾರಾಜ ಯದುವೀರ್ ರಿಂದ ನವರಾತ್ರಿ ಪೂಜೆ

ವೈಭವದ ದಸರಾ ವಿಶೇಷ ಪುಟ

10: 15- ಮಂಗಳ ಸ್ನಾನವಾದ ಬಳಿಕ ಕಂಕಣಬದ್ಧವಾಗಿರುವ ಯದುವೀರ್ ದಂಪತಿ

10:00- ಭಾಷಣಕ್ಕೂ ಮುನ್ನ ಬೇಂದ್ರೆಯವರ ಕವನದ ಸಾಲು ಹೇಳಿದ ಕವಿ ನಿಸಾರ್ ಅಹ್ಮದ್

10:00- ಉದ್ಘಾಟನೆ ಅವಕಾಶಕ್ಕಾಗಿ ಸಿಎಂಗೆ ಚಿರ ಋಣಿ ಎಂದ ನಿತ್ಯೋತ್ಸವ ಕವಿ.

10:00- "ನಿಮ್ಮ ಮುಂದೆ ನಿಂತು ಮಾತನಾಡುವ ನೈತಿಕ ಸ್ಥೈರ್ಯ ನನಗೆ ಇದೆಯೋ ಇಲ್ಲವೋ ಗೊತ್ತಿಲ್ಲ"- ನಿಸಾರ್ ಅಹ್ಮದ್

10:00- "ನಾನು ಇಲ್ಲಿ ಉತ್ಸವ ಮೂರ್ತಿ, ಸರ್ಕಾರದ ಸಾಧನೆಗಳ ಹಿನ್ನೆಲೆಯಲ್ಲಿ ಮಾತನಾಡುವೆ"- ನಿಸಾರ್ ಅಹ್ಮದ್

9:35- ಮಹಿಳಾ ದಸರಾಕ್ಕೆ ಸಚಿವೆ ಉಮಾಶ್ರೀ ಚಾಲನೆ

Photos : 407ನೇ ಮೈಸೂರು ದಸರಾಗೆ ವೈಭವದ ಚಾಲನೆ

9: 30: ಮುಖ್ಯಮಂತ್ರಿ ಸಿದ್ದರಾಮಯ್ಯ ರಿಂದ ಕ್ರೀಡಾ ಜ್ಯೋತಿ ಹಸ್ತಾಂತರ. ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಗೆ ಕ್ರೀಡಾ ಜ್ಯೋತಿ ಹಸ್ತಾಂತರ.

Nisar Ahmed inaugurates Dasara celebrations in Mysuru

Recommended Video

Mysuru is all set to welcome Dasara | 4 more Elephants added for Jamboosavari

9:25- ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ‌ ನೀಡಿದ ನಿತ್ಯೋತ್ಸ ಕವಿ. ಚಾಲನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಮತ್ತು ಗಣ್ಯರು ಭಾಗಿ.
ಇಂದು ದಸರಾ ಅಂಗವಾಗಿ ಹತ್ತು ಹಲವು ಕಾರ್ಯಕ್ರಮಗಳು ಇದರ ಬೆನ್ನೆಲ್ಲೇ ಉದ್ಘಾಟನೆ ಗೊಳ್ಳಲಿವೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ,ತನ್ವೀರ್ ಸೇಠ್, ಉಮಾಶ್ರೀ, ಶಾಸಕರಾದ ಜಿಟಿ ದೇವೇಗೌಡ, ಸಾ.ರಾ.ಮಹೇಶ್, ಸಂಸದರಾದ ಧೃವನಾರಾಯಣ್, ಪ್ರತಾಪ್ ಸಿಂಹ ಸೇರಿದಂತೆ ಇತರೆ ಗಣ್ಯರು ಭಾಗಿ.
9:20-
ಕಂಕಣ ಕಟ್ಟಿಸಿಕೊಂಡ ಮಹಾರಾಜ ಯದುವೀರ
9:15 -
ಅರಮನೆಯಲ್ಲಿ ಪೂಜಾ ಕೈಂಕರ್ಯ ಆರಂಭ
ಬೆ. 9:05 -
ಈಗಾಗಲೇ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಉದ್ಘಾಟನಾ ಸಮಾರಂಭ ಆರಂಭವಾಗಿದ್ದು, ನಾಡೋಜ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದಾರೆ.

ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ, ನಿಸಾರ್ ಅಹ್ಮದ್ ಅವರು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಡಾ. ಹೆಚ್.ಸಿ. ಮಹದೇವಪ್ಪ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ, ಮತ್ತು ಹಿರಿಯ ನಾಗರೀಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಸಚಿವೆ ಉಮಾಶ್ರೀ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿಗಳು ಮರಿತಿಬ್ಬೇಗೌಡ ಅವರುಗಳು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಿದ್ದಾರೆ.

ದಸರಾ ಉದ್ಘಾಟನೆಗಾಗಿ ಮೈಸೂರಿಗೆ ಆಗಮಿಸಿದ ನಿಸಾರ್ ಅಹ್ಮದ್ದಸರಾ ಉದ್ಘಾಟನೆಗಾಗಿ ಮೈಸೂರಿಗೆ ಆಗಮಿಸಿದ ನಿಸಾರ್ ಅಹ್ಮದ್

ಇತರ ಕಾರ್ಯಕ್ರಮಗಳು: ಬೆಳಿಗ್ಗೆ 10-30 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ಪೊಲೀಸ್ ಸಹಾಯವಾಣಿ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ.

English summary
Kannada Poet Prof. Nisar Ahmed will inaugarate the Dasara Celebration 2017 in Mysuru on September 21st, 2017 at 8:45 a.m.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X