• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎನ್‌ಐಇ ಕಾಲೇಜು ಹೆಗಲಿಗೆ ಟಾಟಾ ಕ್ಯಾಂಪಸ್ ಕ್ವಿಜ್ ಬಹುಮಾನ

|

ಮೈಸೂರು, ಮಾರ್ಚ್ 21: ಟಾಟಾ ಕ್ರೂಸಿಬಲ್ ಕಂಪನಿಯು ಮೈಸೂರಿನ ಕಲಾಮಂದಿರದಲ್ಲಿ ಕ್ಯಾಂಪಸ್ ರಸಪ್ರಸ್ನೆ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಿತ್ತು.

ಈ ರಸಪ್ರಶ್ನೆಯನ್ನು ಮೈಸೂರಿನ ಕೆ.ಎಂ. ನಿಶಾಂತ್ ಮತ್ತು ತಂಡ ಆಯೋಜಿಸಿತ್ತು. ಇದರಲ್ಲಿ ಮೈಸೂರಿನ ವಿವಿಧ ಎಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳ 100ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ ಇಬ್ಬರಂತೆ 511 ತಂಡಗಳು ಭಾಗವಹಿಸಿದ್ದವು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಟಾಟಾ ಕಂಪನಿಯ ಈ ಕಾರ್ಯಕ್ರಮದಲ್ಲಿ ವಿಜೇತರಾದ ತಂಡಕ್ಕೆ 75,000ರೂ ಹಾಗೂ ರನ್ನರ್ ಅಪ್ ತಂಡಕ್ಕೆ 35ಸಾವಿರ ರೂ ನಗದು ಬಹುಮಾನ ನಿಗದಿಪಡಿಸಲಾಗಿತ್ತು ಅದಲ್ಲದೆ ಸುಮಾರು 20ತಂಡಗಳಿಗೆ ಸಮಾಧಾನಕರ ಬಹುಮಾನವನ್ನೂ ನೀಡಲಾಯಿತು.

ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಎನ್ಐಇ ಎಂಜಿನಿಯರ್ ಕಾಲೇಜಿನ ವಿದ್ಯಾಥಿಗಳಾದ ಮಹೇಶ್ ಭಟ್ ಹಾಗೂ ಹರ್ಷಿತಾ ಪಡೆದುಕೊಂಡರು. ರನ್ನರ್ ಅಪ್ ಆಗಿ ಮೈಸೂರಿನ ಐಸಿಎಐ ಕಾಲೇಜಿನ ಸುವಿಜ ಹಾಗೂ ಗ್ಲಾಡಿ ಪಡೆದುಕೊಂಡರು.

2004 ರಲ್ಲಿ ಟಾಟಾ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕರಾದ ಜೆ.ಆರ್.ಡಿ. ಟಾಟಾ ರವರ ಜನ್ಮ ಶತಮಾನೋತ್ಸವ ಅಂಗವಾಗಿ ದೇಶದ ಅತ್ಯಂತ ತೀಕ್ಷ್ಣ ಬುದ್ಧಿಯ ಯುವಕರನ್ನು ಗುರುತಿಸಲು ಈ ರಸಪ್ರಶ್ನೆ ಕಾರ್ಯಕ್ರಮವನ್ನು 14 ವರ್ಷಗಳಿಂದ ರಾಷ್ಟ್ರಾದ್ಯಂತ ಸುಮಾರು 38 ಪ್ರತಿಷ್ಟಿತ ನಗರಗಳಲ್ಲಿ ನಡೆಸಲಾಗುತ್ತಿದೆ.

English summary
TATA company has sponsored a campus Quiz program at Kala mandir in Mysuru. Mahesh Bhat and VH Harshith of NIE college have won the Rs.75,000 first prize.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X