ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಮದ ಜೊತೆ ಆಟವಾಡ್ಬೇಕಾ?:ಹಾಗಾದ್ರೆ ಮೈಸೂರಿನ ಈ ಸ್ನೋ ಪಾರ್ಕ್ ಗೆ ಬನ್ನಿ!

|
Google Oneindia Kannada News

ಮೈಸೂರು, ಏಪ್ರಿಲ್ 29:ಹಿಮದಲ್ಲಿ ಆಟವಾಡಲು ಹಾತೊರೆಯುವ ಮನಸ್ಸುಗಳು ಹಿಮಾಲಯ ಪರ್ವತ ಶ್ರೇಣಿಗಳಿಗೆ ಹೋಗಬೇಕಾಗಿಲ್ಲ. ಆದರೆ ಇಂತಹದ್ದೊಂದು ಅನುಭವ ನೀಡುವ ಹಿಮಾವೃತಗೊಂಡ ಪ್ರದೇಶ ಮೈಸೂರು ನಗರದಲ್ಲಿ ರೂಪುಗೊಂಡಿದೆ.

ಹೌದು, ಸಾಂಸ್ಕೃತಿಕ ನಗರಿ ಮೈಸೂರಿನ ವರ್ತುಲ ರಸ್ತೆಯ ಜಿ ಆರ್ಎಸ್ ಫ್ಯಾಂಟಸಿ ಪಾರ್ಕ್ ನಲ್ಲಿ ಸ್ನೋ ಪಾರ್ಕ್ ಗೆ ಪ್ರವಾಸೋದ್ಯಮ ಸಚಿವ ಸಾ. ರಾಮಹೇಶ್ ಚಾಲನೆ ನೀಡಿದ್ದಾರೆ. ಈ ಹಿಮಲೋಕವು ಸುಮಾರು 40ಸಾವಿರ ಚದರಡಿ ಹರಿದುಕೊಂಡಿದ್ದು, ಇದರಲ್ಲಿ ರೆಸ್ಟೋರೆಂಟ್ ಹಾಗೂ ಸಮಗ್ರ ಪಾರ್ಕಿಂಗ್ ಗೆ ಸ್ಥಳಾವಕಾಶವಿದೆ.

ಮೈಸೂರಿನಲ್ಲಿ ಗರಿಗೆದರಿದ ಕುಂಬಾರರ ವ್ಯಾಪಾರ:ಮಡಿಕೆಗೆ ಹೆಚ್ಚಿದ ಬೇಡಿಕೆಮೈಸೂರಿನಲ್ಲಿ ಗರಿಗೆದರಿದ ಕುಂಬಾರರ ವ್ಯಾಪಾರ:ಮಡಿಕೆಗೆ ಹೆಚ್ಚಿದ ಬೇಡಿಕೆ

ಮೈನಸ್ 8 ಡಿಗ್ರಿ ಸೆಲ್ಸಿಯಸ್ ನಿಂದ ಮೈನಸ್ 10 ಡಿಗ್ರಿ ಸೆಲ್ಸಿಯಸ್ ನಷ್ಟು ಚಳಿಯ ವಾತಾವರಣ ಸೃಷ್ಟಿಸಿದ್ದು, ಒಳಗೆ ಕಾಲಿಡುತ್ತಿದ್ದಂತೆ ಒಂದು ಅಡಿಯಷ್ಟು ಶುದ್ಧ ಕುಡಿಯುವ ನೀರಿನಿಂದ ತಯಾರಿಸಲ್ಪಟ್ಟ ಬಿಳಿ ಹಿಮ ನಿಮ್ಮನ್ನು ಸ್ವಾಗತಿಸುತ್ತದೆ.

ಯಾವುದೇ ರಾಸಾಯನಿಕಗಳಿಲ್ಲದೇ ಶುದ್ಧ ಹಿಮ ತಯಾರಿಕೆಗಾಗಿ ವಿಶೇಷವಾದ ಆರ್ ಓ ಘಟಕಗಳನ್ನು ಇಲ್ಲಿ ಅಳವಡಿಸಲಾಗಿದೆ. ಈ ಪಾರ್ಕ್ ಅನ್ನು ದುಬಾಯಿ ಸ್ಕಿ ಪಾರ್ಕ್ ಪರಿಗಣನೆಗೆ ತೆಗೆದುಕೊಂಡು ಆಲ್ ಪ್ಲಾನ್ ಸಂಸ್ಥೆ ವಿನ್ಯಾಸಗೊಳಿಸಿದೆ.

ಪುಟಾಣಿ ರೈಲು ಪ್ರಮುಖ ಆಕರ್ಷಣೆ

ಪುಟಾಣಿ ರೈಲು ಪ್ರಮುಖ ಆಕರ್ಷಣೆ

ಜಿ ಆರ್ಎಸ್ ಸ್ನೋ ಪಾರ್ಕ್ ಭಾರತದ ಅತಿ ಉದ್ದದ ಒಳಾಂಗಣ ತೂಗು ಸೇತುವೆಯಾದ ಆಲ್ಫೈನ್ ಹ್ಯಾಂಗಿಂಗ್ ಬ್ರಿಡ್ಜ್ ಹೊಂದಿದೆ.ದುಬೈನಲ್ಲಿರುವ ಸ್ನೋಪಾರ್ಕ್ ಗೆ ಇದು ಹೋಲುವಂತಿದೆ. ಬೃಹತ್ ಸೇತುವೆಗಳು, ಶಿಖರಗಳ ನಡುವೆ ಹಾದುಹೋಗುವ ಸೈಡ್ಲ್, ಕ್ಯಾರ್ ಸೋಲ್, ಹಿಮದ ಗುಹೆಗಳು, ಹಿಮ ಪರ್ವತದ ಪುಟಾಣಿ ರೈಲು ಪ್ರಮುಖ ಆಕರ್ಷಣೆಯಾಗಿದೆ.

 ಸಾಂಸ್ಕೃತಿಕ ನಗರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ! ಸಾಂಸ್ಕೃತಿಕ ನಗರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ!

ಕಾಫಿ ಅಥವಾ ಟೀ ಸವಿಯಬಹುದು

ಕಾಫಿ ಅಥವಾ ಟೀ ಸವಿಯಬಹುದು

ಇತರೆ ಆಕರ್ಷಣೆಗಳಲ್ಲಿ ಫ್ರೋಜನ್ ಕೆಫೆಯನ್ನು ಒಂದು ಬದಿಯಲ್ಲಿ ಕೆತ್ತಲಾಗಿದ್ದು, ವೀಕ್ಷಕರು ಹಿಮಪಾತದ ಸಂದರ್ಭದಲ್ಲಿ ಕಾಫಿ ಅಥವಾ ಟೀಯನ್ನು ಸವಿಯಬಹುದಾಗಿದೆ. ಪ್ರತಿ ಪ್ರದರ್ಶನವೂ ಒಂದು ಗಂಟೆಯಾಗಿದ್ದು, ಸಂಸ್ಥೆ ವತಿಯಿಂದಲೇ ಚಳಿ ತಡೆದುಕೊಳ್ಳಲು ಜರ್ಕಿನ್ , ಗ್ಲೌಸ್ , ಬೋಟ್ ನೀಡಲಾಗುತ್ತದೆ.

 ಮೈಸೂರಿನಲ್ಲಿರುವ ಈ ಎಲ್ಲಾ ತಾಣಗಳು ಪ್ರೇಮಿಗಳಿಗೆ ಅಚ್ಚುಮೆಚ್ಚು ಮೈಸೂರಿನಲ್ಲಿರುವ ಈ ಎಲ್ಲಾ ತಾಣಗಳು ಪ್ರೇಮಿಗಳಿಗೆ ಅಚ್ಚುಮೆಚ್ಚು

ಸಚಿವ ಸಾರಾ ಮಹೇಶ್ ಹೇಳಿಕೆ

ಸಚಿವ ಸಾರಾ ಮಹೇಶ್ ಹೇಳಿಕೆ

ಸ್ನೋ ಪಾರ್ಕ್ ಉದ್ಘಾಟಿಸಿ ಮಾತನಾಡಿದ ಸಚಿವ ಸಾರಾ ಮಹೇಶ್, ಮೈಸೂರಿನಲ್ಲಿ ವಿಶ್ವವಿಖ್ಯಾತ ಪ್ರವಾಸಿ ತಾಣಗಳಿದ್ದರೂ ರಾತ್ರಿ ವೇಳೆ ಸೆರೆ ಹಿಡಿದುಕೊಳ್ಳಲು ಯಾವುದೇ ಪ್ರವಾಸಿ ತಾಣವಿಲ್ಲ. ಹಾಗಾಗಿ ಕೆಆರ್ ಎಸ್ ಅಣೆಕಟ್ಟೆಯಲ್ಲಿ ಡಿಸ್ನಿಲ್ಯಾಂಡ್ ಮಾದರಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಿ ನೀರಿನ ಕಾರಂಜಿ ನಿರ್ಮಿಸಲು ಸರ್ಕಾರ ನಿರ್ಧರಿಸಿತ್ತು ಎಂದರು.

 ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕಾರಿ

ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕಾರಿ

ಪ್ರಗತಿಪರರು, ರೈತರು ಪರ -ವಿರೋಧ ಚರ್ಚೆ ನಡೆದು ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಕೈಬಿಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಚಿಂತನೆ ನಡೆಸಲಾಗುವುದು ಎಂದ ಸಾರಾ ಮಹೇಶ್, ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸ್ನೋ ಪಾರ್ಕ್ ನಿರ್ಮಾಣ ಮಾಡಿರುವುದು ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

English summary
As a tourist attraction new GRS Snow Park has been started Backside of GRS Fantasy Park. It will give wonderful and chill experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X