ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವೈರಸ್ ಅಬ್ಬರ: ಮೈಸೂರಿನಲ್ಲಿ 49 ಕೇಸ್ ದೃಢ, ಚಿಕ್ಕಮಗಳೂರಿನಲ್ಲಿ 1 ಸಾವು

By Lekhaka
|
Google Oneindia Kannada News

ಚಿಕ್ಕಮಗಳೂರು, ಜುಲೈ 8: ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಸಾವಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 52 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ಇತ್ತೀಚಿಗೆ ಈ ಮಹಿಳೆ ಬೆಂಗಳೂರಿಗೆ ಹೋಗಿ ಬಂದಿದ್ದಳು. ಮಂಗಳವಾರ ಚಿಕ್ಕಮಗಳೂರು ನಗರದ ಉಪ್ಪಳ್ಳಿಯ ನಿವಾಸದಲ್ಲೇ ಮೃತರಾಗಿದ್ದು, ಸಾವಿನ ಬಳಿಕ ವೈದ್ಯರು ಗಂಟಲಿನ ಸ್ವಾಬ್ ತೆಗೆದು ಲ್ಯಾಬ್ ಗೆ ಕಳಿಸಿದ್ದರು. ಲ್ಯಾಬ್ ವರದಿಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢವಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಚಿಕ್ಕಮಗಳೂರು: ಎಂಎಲ್ಸಿ ಬೋಜೇಗೌಡರಿಗೂ ಕೊರೊನಾ ವೈರಸ್ ಸೋಂಕುಚಿಕ್ಕಮಗಳೂರು: ಎಂಎಲ್ಸಿ ಬೋಜೇಗೌಡರಿಗೂ ಕೊರೊನಾ ವೈರಸ್ ಸೋಂಕು

ಮೈಸೂರು ಜಿಲ್ಲೆಯಲ್ಲಿ 49ಕೊರೋನಾ ವೈರಸ್ ಸೋಂಕು ಪತ್ತೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಬ್ಬರ ಮುಂದುವರಿದಿದ್ದು, ಮಂಗಳವಾರ ಜಿಲ್ಲೆಯಲ್ಲಿ 49 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

New 49 Coronavirus Infection Cases Reported In Mysuru

ಜಿಲ್ಲೆಯಲ್ಲಿ 1 ತಿಂಗಳ ಹಸುಗೂಸು ಸೇರಿದಂತೆ ಗರ್ಭಿಣಿ ಹಾಗೂ ಆರೋಗ್ಯ ಸಿಬ್ಬಂದಿಗಳಿಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 530 ಕ್ಕೆ ಏರಿಕೆಯಾಗಿದೆ. ಮೃತಪಟ್ಟ ನಾಲ್ವರು ಸೇರಿದಂತೆ 49 ಸೋಂಕಿತರಲ್ಲಿ ಬೆಂಗಳೂರಿನಿಂದ ಬಂದ 8 ಮಂದಿ, ವಿಜಯಪುರ ಹಾಗೂ ದುಬೈನಿಂದ ಬಂದ ವ್ಯಕ್ತಿ, ಮಂಡ್ಯದಿಂದ ಬಂದವರಿಬ್ಬರು ಇದ್ದಾರೆ.

ಮೈಸೂರು; ಆರೋಗ್ಯ ಇಲಾಖೆ ಸೂಚನೆ ಪಾಲಿಸದ ಔಷಧಿ ಅಂಗಡಿಗಳ ಅಮಾನತುಮೈಸೂರು; ಆರೋಗ್ಯ ಇಲಾಖೆ ಸೂಚನೆ ಪಾಲಿಸದ ಔಷಧಿ ಅಂಗಡಿಗಳ ಅಮಾನತು

19 ಮಂದಿ ಸೋಂಕಿತರ ಸಂಪರ್ಕಿತರು, ಸರಿ 12 ಮಂದಿ, ಐಎಲ್ಐ ನಿಂದ ಬಳಲುತ್ತಿದ್ದವರು ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರು ಪತ್ತೆಯಾದ ಸ್ಥಳಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಹೊರಗಿನವರ ಪ್ರವೇಶ ಹಾಗೂ ಒಳಗಿನವರು ಹೊರ ಹೋಗುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

https://kannada.oneindia.com/news/karnataka/coronavirus-noted-physician-dr-anjanappa-important-tips-to-public-196169.html

English summary
Coronavirus continues to spread in Mysuru district, with 49 cases of coronavirus being detected in the district on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X