ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆದರ್ ಲ್ಯಾಂಡ್ ನಿಂದ ಬಂದು ಮೈಸೂರು ಯುವತಿ ವರಿಸಿದ ಯುವಕ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 4: ಪ್ರೀತಿಗೆ ಭಾಷೆ, ಜಾತಿ, ಧರ್ಮ, ದೇಶ, ಗಡಿಯ ಹಂಗಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಅದಕ್ಕೊಂದು ನೂತನ ನಿದರ್ಶನ ದೊರೆತಿರುವುದು ಮೈಸೂರಿನಲ್ಲಿ. ಮೈಸೂರಿನ ಚೆಲುವೆಯ ಅಂದಕ್ಕೆ ಮಾರು ಹೋದ ನೆದರ್ ‌ಲ್ಯಾಂಡ್ ಯುವಕ ಆಕೆಯೊಂದಿಗೆ ಭಾನುವಾರ ಹಸೆಮಣೆ ಏರಿದ್ದಾನೆ.

ಮೈಸೂರಿನ ವಕೀಲರಾದ ಸುಮನಾ ಮತ್ತು ರಾಮ ರವೀಂದ್ರ ಅವರ ಪುತ್ರಿ ಅನು, ನೆದರ್ ‌ಲ್ಯಾಂಡ್ ನ ರೆನೆ ವ್ಯಾನ್ ಬೊರ್ಗೆಟ್ ಅವರನ್ನು ನಿನ್ನೆ ವರಿಸಿದ್ದಾರೆ. ನೆದರ್ ‌ಲ್ಯಾಂಡ್‌ಗೆ ಎಲ್‌ಎಲ್‌ಎಂ (ಲ್ಯಾಟಿನ್ ಲೆಗಮ್ ಮ್ಯಾಜಿಸ್ಟರ್) ವ್ಯಾಸಂಗಕ್ಕೆ ತೆರಳಿದ್ದ ಅನು ಅಲ್ಲಿ ಪರಿಚಯವಾದ ರೆನೆ ಅವರನ್ನು ಪ್ರೀತಿಸಿ ತಮ್ಮ ಪೋಷಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಪಾಕಿಸ್ತಾನದಿಂದ ಬಂದು ಗುಜರಾತ್ ನಲ್ಲಿ ಮದುವೆಯಾಗುವ ಈ ಸಮುದಾಯದ ಕಥೆ ಕೇಳಿಪಾಕಿಸ್ತಾನದಿಂದ ಬಂದು ಗುಜರಾತ್ ನಲ್ಲಿ ಮದುವೆಯಾಗುವ ಈ ಸಮುದಾಯದ ಕಥೆ ಕೇಳಿ

ಅನು ತಮ್ಮ ಪ್ರೀತಿ ಶುರುವಾದ ಮೇಲೆ ಪ್ರಿಯಕರ ರೆನೆ ವ್ಯಾನ್ ಗೆ ಕನ್ನಡ ಮಾತಾಡುವುದನ್ನು ಕಲಿಸಿದ್ದಾರೆ. ರೆನೆ ಒಂದೆರಡು ಕನ್ನಡ ಶಬ್ದಗಳನ್ನು ಮಾತಾಡುತ್ತಾರೆ. ರೆನೆ ಅವರ ಪೋಷಕರು ಕೂಡ ಒಂದೆರಡು ಪದ ಕನ್ನಡ ಕಲಿತಿದ್ದಾರೆ. ಹೀಗಾಗಿ ವಿದೇಶಿ ನೆಂಟರು ಕನ್ನಡ ಕಲಿತು ಕನ್ನಡದಲ್ಲೇ ಮಾತಾಡುತ್ತಿದ್ದ ದೃಶ್ಯಗಳು ಮದುವೆ ಮನೆಯಲ್ಲಿ ಕಂಡು ಬಂತು.

Netherland Boy Marries Mysuru Girl

ಭತ್ತ ಕುಟ್ಟುವುದು, ಮೆಹೆಂದಿ ಶಾಸ್ತ್ರ, ಹೋಳಿ, ಅರಿಶಿನ ಹಚ್ಚುವ ಶಾಸ್ತ್ರ, ಗೌರಿ ಪೂಜೆ ಹೀಗೆ ಹಲವು ಸಂಪ್ರದಾಯದೊಂದಿಗೆ ಮದುವೆ ನಡೆಯಿತು. ಪೋಲ್ಯಾಂಡ್, ಅಮೆರಿಕ, ಸ್ಪೇನ್, ಜರ್ಮನಿ, ನೆದರ್ ‌ಲ್ಯಾಂಡ್ ಮುಂತಾದ ದೇಶಗಳಿಂದ ಬಂದಿದ್ದ 40 ಮಂದಿ ಈ ಆಚರಣೆಗಳನ್ನು ಬೆರಗು ಗಣ್ಣಿನಿಂದ ನೋಡುತ್ತಿದ್ದರಲ್ಲದೇ, ಪ್ರತಿಯೊಂದು ಆಚರಣೆಯನ್ನು ಸಂಭ್ರಮಿಸುತ್ತಿದ್ದರು. ಮುಂದಿನ ವರ್ಷ ಡಚ್‌ ಸಂಪ್ರದಾಯದಂತೆಯೂ ಮದುವೆ ಆಗುತ್ತೇವೆ ಎಂದು ಅನು ತಿಳಿಸಿದರು. ಅನು ಅವರನ್ನು ಪ್ರೀತಿಸಲು ಶುರು ಮಾಡಿದಂದಿನಿಂದ ಅಲ್ಪ ಸ್ವಲ್ಪ ಕನ್ನಡ ಕಲಿತಿದ್ದೇನೆ ಎಂದ ವರ ರೆನೆ ಇಲ್ಲಿನ ಸಂಸ್ಕ್ರತಿ ತುಂಬಾ ಇಷ್ಟ ಎಂದರು.

English summary
Anu, the daughter of Mysuru lawyers Sumana and Rama Ravindra, married with Rene van Borgett of Netherland
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X