ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡಲ್ಲಿ ಬಿಸಿ ಬಿಸಿ ಮ್ಯಾಗಿ ರೆಡಿಯಾಗ್ತಿದೆ!

By Mahesh
|
Google Oneindia Kannada News

ಮೈಸೂರು, ಅ.27: ಮ್ಯಾಗಿ ಪ್ರಿಯರಿಗೆ ಶುಭ ಸುದ್ದಿ ಸಿಕ್ಕಿದೆ. ಮಾರಾಟ ನಿಷೇಧದ ಶಾಪ ವಿಮೋಚನೆಯಿಂದ ಮುಕ್ತವಾಗಿದೆ. ನೆಸ್ಲಿ ಕಂಪನಿಯ ಮ್ಯಾಗಿ ನವೆಂಬರ್ ಮೊದಲ ವಾರಕ್ಕೆ ನಿಮ್ಮ ಮನೆ ಸಮೀಪದ ಮಳಿಗೆಗಳಲ್ಲಿ ಲಭ್ಯವಾಗಲಿದೆ. ನಂಜನಗೂಡಿನ ಘಟಕ ಸೇರಿದಂತೆ ದೇಶದ ಮೂರು ಕಡೆಗಳಲ್ಲಿ ಮ್ಯಾಗಿ ತಯಾರಿ ಭರದಿಂದ ಸಾಗಿದೆ.

ಮೈಸೂರಿನ ನಂಜನಗೂಡು ಘಟಕ, ಪಂಜಾಬಿನ ಮೊಗಾ ಹಾಗೂ ಗೋವಾದ ಬಿಚೋಲಿಮ್ ನ ಘಟಕದಲ್ಲಿ ಮ್ಯಾಗಿ ತಯಾರಿ ನಡೆಯುತ್ತಿದೆ. ದೇಶದಲ್ಲಿ ಒಟ್ಟು ಐದು ಕಡೆಗಳಲ್ಲಿ ಈ ಮುಂಚೆ ಮ್ಯಾಗಿ ತಯಾರಾಗುತ್ತಿತ್ತು. ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ್ ನ ಘಟಕಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲದ ಕಾರಣ ಮೂರು ಕಡೆಗಳಲ್ಲಿ ಮಾತ್ರ ಉತ್ಪಾದನೆ ಜಾರಿಯಲ್ಲಿದೆ.

Nestle India re-starts production of Maggi at three plants

ಮ್ಯಾಗಿಯಲ್ಲಿ ಆರೋಗ್ಯಕ್ಕೆ ಮಾರಕವಾದ ಸೀಸದ ಅಂಶ ಪತ್ತೆಯಾಗಿತ್ತು ಎಂಬ ಹಿನ್ನೆಲೆಯಲ್ಲಿ ಮಾರಾಟದ ಮೇಲೆ ನಿಷೇಧ ಹೇರಲಾಗಿತ್ತು. ಜನರ ಮತ್ತು ಮಾಧ್ಯಮಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಜೂನ್ ತಿಂಗಳಲ್ಲಿ ಮ್ಯಾಗಿ ಮೇಲೆ ನಿಷೇಧ ಹೇರಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಅಭಿಪ್ರಾಯಗಳು ಹರಿದಾಡಿದ್ದವು. ಅಲ್ಲದೇ ಕೆಲವರು ಹಾಸ್ಯಭರಿತವಾಗಿ ಕಾಮೆಂಟ್ ಗಳನ್ನು ದಾಖಲಿಸಿದ್ದರು.[ಬಾಂಬೆ ಕೋರ್ಟ್ ನಿಂದ ಮ್ಯಾಗಿ ಮೇಲಿನ ನಿಷೇಧ ತೆರವು]

ಪತಂಜಲಿ ಉತ್ಪನ್ನಗಳ ಮೂಲಕ ಜನರಿಗೆ ಹತ್ತಿರವಾಗಿರುವ ಬಾಬಾ ರಾಮ್ ದೇವ್ ಸೆಪ್ಟೆಂಬರ್ ನಲ್ಲಿ ಸ್ವದೇಶಿ ನ್ಯೂಡಲ್ಸ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಗೋಧಿಯಿಂದ ತಯಾರಿಸಿದ ಪತಂಜಲಿ "ಆಟಾ ನೂಡಲ್ಸ್‌'ಅನ್ನು ಬಾಬಾ ರಾಮ್‌ದೇವ್‌ ಹರಿದ್ವಾರದಲ್ಲಿ ಬಿಡುಗಡೆ ಮಾಡಿದ್ದರು. ಹೀಗಾಗಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಜೋರಾಗಿ ನಡೆಯುವ ಸಾಧ್ಯತೆಯಿದೆ.

English summary
Nestle India, which is in the process of getting Maggi noodles back on the shelves, has re-started production at three of its plants. A Nestle India spokesperson said that the company has resumed production at Nanjangud in Karnataka, Moga in Punjab and Bicholim in Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X