ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದು ಸಿಟ್ಟು, ಜಮಲಾರ್ ಆವೇಶ, ನಡೆದಿದ್ದೇನು? ತನಿಖೆಗೆ ಆಯೋಗ ಸೂಚನೆ

|
Google Oneindia Kannada News

ಮೈಸೂರು, ಜನವರಿ 28: ಮೈಸೂರಿನ ಟಿ.ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್ ಪವರ್ ಎಕ್ಸಚೈಂಜ್ ಕಾಮಗಾರಿ ಶಂಕಸ್ಥಾಪನೆ ವೇಳೆ ನಡೆದ ಘಟನೆ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಲಾರ್ ನಡುವೆ ನಡೆದ ವಾಗ್ದಾಳಿ ಬಗ್ಗೆ ತನಿಖೆ ನಡೆಸುವಂತೆ ಡಿಜಿಪಿ ನೀಲಮಣಿ ರಾಜು ಅವರಿಗೆ ಮಹಿಳಾ ಆಯೋಗ ನಿರ್ದೇಶನ ನೀಡಿದೆ.

ಟೇಬಲ್ ಕುಟ್ಟಿ ಮಗನ ವಿರುದ್ಧ ದೂರು:ಕೆಂಡಮಂಡಲವಾದ ಸಿದ್ದರಾಮಯ್ಯಟೇಬಲ್ ಕುಟ್ಟಿ ಮಗನ ವಿರುದ್ಧ ದೂರು:ಕೆಂಡಮಂಡಲವಾದ ಸಿದ್ದರಾಮಯ್ಯ

ತಮ್ಮ ಊರಿನ ಸಮಸ್ಯೆ ಕುರಿತು ಜಮಲಾರ್ ಅವರು ವಿವರಿಸುತ್ತಾ ಭಾವನಾತ್ಮಕವಾಗಿ ವರ್ತಿಸಿ, ಸಿದ್ದರಾಮಯ್ಯ ಅವರ ಮುಂದಿದ್ದ ಮೇಜಿಗೆ ಕುಟ್ಟಿದ್ದಾರೆ. ನಿಮ್ಮ ಮಗ ಹಾಗೂ ಎಂಎಲ್ಎ ಯತೀಂದ್ರ ಊರಿಗೆ ಬರುವುದಿಲ್ಲ. ನಮ್ಮ ಸಮಸ್ಯೆ ಕೇಳುವವರಿಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ಅವರ ಬಳಿ ಇದ್ದ ಮೈಕನ್ನು ಸಿದ್ದರಾಮಯ್ಯ ಅವರು ಕಸಿದುಕೊಂಡಿದ್ದಾರೆ. ಈ ವೇಳೆ ಜಮಾಲರ ದುಪ್ಪಟ್ಟಾ ಜಾರಿದೆ. ಸಿದ್ದರಾಮಯ್ಯ ಅವರು ಆಕೆಯನ್ನು ಗದರಿದ್ದಾರೆ.

ನಾವೇನೋ ದೇಶಕ್ಕೆ ಅನ್ಯಾಯ ಮಾಡಿರೋರ ಥರ ಮಾತಾಡ್ತಿದ್ದೀಯಾ? ಟೇಬಲ್ ಕುಟ್ಟಿ ಮಾತಾಡ್ತಿಯಾ? ನನ್ನ ಮುಂದೆಯೇ ಟೇಬಲ್ ಕುಟ್ಟಿ ಮಾತನಾಡುತ್ತಿದ್ದೀಯಾ? ಕುತ್ಕೊಳ್ಳಮ್ಮ ಸುಮ್ಮನೆ ಎಂದು ಏರು ಧ್ವನಿಯಲ್ಲೇ ಸಿದ್ದರಾಮಯ್ಯ ಅವಾಜ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಯತೀಂದ್ರ ಅವರು ಅಲ್ಲೇ ಉಪಸ್ಥಿತರಿದ್ದರು. ಸಿದ್ದರಾಮಯ್ಯ ಹಾಗೂ ಜಮಾಲರ ನಡುವಿನ ಮಾತಿನ ಚಕಮಕಿ ವಿಡಿಯೋ ವೈರಲ್ ಆಗಿದೆ. ಆದರೆ, ಈ ಬಗ್ಗೆ ಜಮಾಲ ಅವರು ಸ್ಪಷ್ಟನೆ ನೀಡಿದ್ದಾರೆ.

ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಲಾರ್

ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಲಾರ್

ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಲಾರ್ ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿ, ನಾನು ಆವೇಶದಿಂದ ಮಾತನಾಡಿದೆ. ಶಾಸಕರು ಬಂದರೂ ನಮ್ಮ ಜೊತೆ ಮಾತನಾಡಲು ಸಿಗುತ್ತಿಲ್ಲ ಎಂದು ಹೇಳಿದೆ. ಸಿದ್ದರಾಮಯ್ಯ ನಮ್ಮ ನೆಚ್ಚಿನ ಮುಖ್ಯಮಂತ್ರಿ, ನಾನು ಕೋಪದ ಭರದಲ್ಲಿ ಟೇಬಲ್ ಮೇಲೆ ಗುದ್ದಿದೆ. ಮಾತು ನಿಲ್ಲಿಸುವಂತೆ ನನಗೆ ಹೇಳಿ, ಮೈಕ್ ಕಿತ್ತುಕೊಂಡರು ಅಷ್ಟೇ. ನಾನು ತಾಳ್ಮೆಯಿಂದ ವರ್ತಿಸಬೇಕಿತ್ತು ಎಂದಿದ್ದಾರೆ.

Array

ಮಾತಿನ ಚಕಮಕಿ ವಿಡಿಯೋ ವೈರಲ್

ಮೈಸೂರಿನ ಟಿ.ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್ ಪವರ್ ಎಕ್ಸಚೈಂಜ್ ಕಾಮಗಾರಿ ಶಂಕಸ್ಥಾಪನೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಲಾರ್ ನಡುವೆ ನಡೆದ ಮಾತಿನ ಚಕಮಕಿ ವಿಡಿಯೋ ವೈರಲ್ ಆಗಿದೆ.

Array

ಮಹಿಳಾ ಆಯೋಗದಿಂದ ತನಿಖೆಗೆ ಸೂಚನೆ

ಮೈಸೂರಿನ ಟಿ.ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್ ಪವರ್ ಎಕ್ಸಚೈಂಜ್ ಕಾಮಗಾರಿ ಶಂಕಸ್ಥಾಪನೆ ವೇಳೆ ನಡೆದ ಘಟನೆ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚಿಸಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

ಆಕೆಯನ್ನು ನಾನು 15 ವರ್ಷಗಳಿಂದ ಬಲ್ಲೆ, ಪಕ್ಷದ ಕಾರ್ಯಕರ್ತೆ, ನನ್ನ ತಂಗಿ ಇದ್ದ ಹಾಗೆ, ಅನುಚಿತವಾಗಿ ವರ್ತಿಸಿದೆ ಎಂಬುದು ಸುಳ್ಳು. ಆವೇಶಭರಿತರಾಗಿ ಮಾತನಾಡಿದ್ದು ನಿಜ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.

English summary
National Commission for Women (NCW) writes to Neelmani Raju, DGP of Karnataka asking for investigation into the matter. Former CM Sidadramaiah had a verbal spat with a former TP vice president Jamala during a event at Gargeshwara village, T Narshipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X