ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಕಾರಿ ನೌಕರಿ ಬೇಕೆ? ಇಲ್ಲಿದೆ ರವಿ ಡಿ. ಚನ್ನಣ್ಣನವರ್ ರ ಹೊಸ ಉಪಾಯ

By Yashaswini
|
Google Oneindia Kannada News

Recommended Video

ರವಿ ಡಿ ಚಣ್ಣನವರ್ ರವರಿಂದ ಸರ್ಕಾರೀ ನೌಕರಿ ಪಡೆಯುವ ಹೊಸ ಉಪಾಯ

ಮೈಸೂರು, ಅಕ್ಟೋಬರ್ 24 : ನಿಮಗೆ ಐಎಎಸ್, ಕೆಎಎಸ್ ಅಥವಾ ಸರ್ಕಾರಿ ಅಧಿಕಾರಿ ಆಗಬೇಕು ಎಂಬ ಆಸೆಯಿದೆಯೇ? ಹಾಗಾದರೆ ಶೀಘ್ರವೇ ನಿಮ್ಮ ಕನಸು ಕೈಗೂಡುವ ಅವಕಾಶವೊಂದು ನಿಮಗೆ ಒದಗಿ ಬರಲಿದೆ!

ಹೌದು, ಬಡ ಪ್ರತಿಭಾವಂತ ಮಕ್ಕಳ ಉದ್ಯೋಗದ ಕನಸನ್ನು ನನಸು ಮಾಡಲಿಕ್ಕಾಗಿಯೇ ಮೈಸೂರಿನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ತರಬೇತಿಯು ಉಚಿತವಾಗಿ ಪ್ರಾರಂಭವಾಗುತ್ತಿದ್ದು, ಹಲವು ಬಡ ವಿದ್ಯಾರ್ಥಿಗಳ ಪಾಲಿಗೆ ವರದಾನ ವಾಗಿದೆ.

ರಾಜ್ಯದ 34 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಪದವಿ ಭಾಗ್ಯರಾಜ್ಯದ 34 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಪದವಿ ಭಾಗ್ಯ

ಜಿಲ್ಲಾಡಳಿತ, ಪ್ರಮತಿ ಹಿಲ್ ವ್ಯೂ ಅಕಾಡೆಮಿ ಹಾಗೂ ನವೋದಯ ಫೌಂಡೇಶನ್ ವತಿಯಿಂದ ರಾಷ್ಟ್ರಮಟ್ಟದಲ್ಲಿ ಗುಣಾತ್ಮಕ ತರಬೇತಿ ನೀಡುವ ಉದ್ದೇಶದಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ 60 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ತರಬೇತಿಯ ಸಂಚಾಲಕರೂ ಆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.

National level competitive training is free of charge in Mysore.

ಹೈದರಾಬಾದ್ ನಂತಹ ಮಹಾನಗರಗಳಿಗೆ ತೆರಳಿ ಗುಣಮಟ್ಟದ ತರಬೇತಿ ಪಡೆಯಲಾಗದ ಬಡಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೈಸೂರಿನಲ್ಲಿಯೇ ಉಚಿತ ಸುಸಜ್ಜಿತ ವಸತಿ, ಗ್ರಂಥಾಲಯ ಸೌಲಭ್ಯದೊಂದಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆಲಸದ ಹಸಿವೋ? ಸರ್ಕಾರಿ ನೌಕರಿ ಮೋಹವೋ?ಕೆಲಸದ ಹಸಿವೋ? ಸರ್ಕಾರಿ ನೌಕರಿ ಮೋಹವೋ?

ತರಬೇತಿಗೆ 60 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದ್ದು ಅದರಲ್ಲಿ 30 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಎಂಟು ತಿಂಗಳ ವಸತಿ ಸಹಿತ ಉಚಿತ ತರಬೇತಿ ಹಾಗೂ ಉಳಿದ 30 ವಿದ್ಯಾರ್ಥಿಗಳಿಗೆ ವಸತಿ ರಹಿತ ಉಚಿತ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ತರಬೇತಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತೀರ್ಮಾನಿಸಿದ್ದು, ನ.12ರಂದು ಬೆಳಿಗ್ಗೆ 10ಗಂಟೆಗೆ ಕುವೆಂಪುನಗರದ ಪ್ರಮತಿ ಹಿಲ್ ವ್ಯೂ ಅಕಾಡೆಮಿಯಲ್ಲಿ ಪರೀಕ್ಷೆ ನಡೆಯಲಿದೆ.

ಫಲಿತಾಂಶವನ್ನು ನ.30ರಂದು ರಾಮಸ್ವಾಮಿ ವೃತ್ತದಲ್ಲಿನ ನವೋದಯ ಫೌಂಡೇಷನ್ ನಲ್ಲಿ ಪ್ರಕಟಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾದ ಇನ್ನೂರು ವಿದ್ಯಾರ್ಥಿ ಗಳಿಗೆ ಪರಿಣತ ಕಾರ್ಯಕಾರಿ ಸಮಿತಿಯಿಂದ ಡಿ.7ರಿಂದ 15ರವರೆಗೆ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಡಿ.25ರಿಂದ ತರಗತಿಗಳು ನಡೆಯಲಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.

English summary
60 talented students from rural and urban areas will be trained to provide qualitative training at the national level KAS and IAS exams. Wellknown police officer Ravi D Chennananavar find a new way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X