ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪದವಿ ಹಂತದಲ್ಲಿ ಕನ್ನಡ ಭಾಷೆಗೆ ಕೊಕ್, ಪ್ರೊ. ತಿಮ್ಮೇಗೌಡ ಹೇಳಿದ್ದೇನು?

|
Google Oneindia Kannada News

ಮೈಸೂರು, ಜೂ. 29: ಸಂಸ್ಕೃತಿ, ಬದುಕನ್ನು ಕಲಿಸಿಕೊಡುವ ಕನ್ನಡ ಭಾಷೆ ಅಧ್ಯಯನ ಇನ್ನು ಕೇವಲ ಪದವಿಯಲ್ಲಿ ಒಂದು ವರ್ಷಕ್ಕೆ ಸೀಮಿತ. ಅದೂ ಕೇವಲ ವ್ಯವಹಾರಿಕವಾಗಿ ಮಾತನಾಡಲು ಸೀಮಿತ ! ಹೌದು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ನೆಪದಲ್ಲಿ ಪದವಿ ಹಂತದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಕೋಕ್ ಕೊಡಲಾಗುತ್ತಿದೆ. ರಾಜ್ಯದಲ್ಲಿ ಪ್ರಾಯೋಗಿಕವಾಗಿ ಪದವಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸಕ್ತ ಸಾಲಿನಲ್ಲಿ ಅಳವಡಿಸಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಕನ್ನಡ ಭಾಷೆ ಅಧ್ಯಯನವನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿರುವ ಈ ನೀತಿಯ ವಿರುದ್ಧ ರಾಜ್ಯ ಕನ್ನಡ ಪ್ರಾಧ್ಯಾಪಕರು ಅಸಮಾಧಾನ ಹೊರ ಹಾಕಿದ್ದಾರೆ.

ಕನ್ನಡ ಮೇಸ್ಟ್ರುಗಳ ಮನದಾಳದ ಮಾತು
ಸಾಹಿತಿಗಳ ಸಮ್ಮುಖದಲ್ಲಿ ನಾಳೆ ಚರ್ಚೆ ರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪ್ರಾಯೋಗಿಕವಾಗಿ ಕರ್ನಾಟಕದಲ್ಲಿ ಪ್ರಸಕ್ತ ಸಾಲಿನ ಪದವಿ ಹಂತದಲ್ಲಿ ಅಳವಡಿಸಲು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಮುಂದಾಗಿದ್ದಾರೆ. ಈ ಎಲ್ಲಾ ಪದವಿ ಕಾಲೇಜುಗಳಿಗೆ ಹೊಸ ಪದವಿ ಪದ್ಧತಿ ಅಳವಡಿಸಲು ಸೂಚಿಸಲಾಗಿದೆ. ಯಾವುದೇ ಪೂರ್ವ ತಯಾರಿ ಇಲ್ಲದೇ, ಪ್ರಾದೇಶಿಕ ಭಾಷೆ ಅಧ್ಯಯನ ಕಡಗಣನೆ ಮಾಡಿರುವ ಶಿಕ್ಷಣ ನೀತಿ ವಿರುದ್ಧ ಕನ್ನಡ ಪ್ರಾಧ್ಯಾಪಕರು ಧ್ವನಿಯೆತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಹಳೇ ಪದವಿಯಲ್ಲಿ ಭಾಷೆ ಅಧ್ಯಯನ

ಹಳೇ ಪದವಿಯಲ್ಲಿ ಭಾಷೆ ಅಧ್ಯಯನ

ಪ್ರಸ್ತುತ ಚಾಲ್ತಿಯಲ್ಲಿರುವ ಪದವಿ ಮೂರು ವರ್ಷದ್ದು. ಕನ್ನಡ ಮತ್ತು ಇಂಗ್ಲೀಷ್ ಭಾಷಾ ವಿಷಯಗಳನ್ನಾಗಿ ಎರಡು ವರ್ಷ ಅಧ್ಯಯನ ಮಾಡಲಿಕ್ಕೆ ಅವಕಾಶ ನೀಡಲಾಗಿದೆ. ಉಳಿದ ಮೂರು ಐಚ್ಛಿಕ ವಿಷಯ ಕೊನೆ ವರ್ಷದಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಲಾಗಿದೆ. ಅದರಲ್ಲಿ ಕನ್ನಡ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ಓದಲು ಅವಕಾಶವಿತ್ತು. ಮೂರು ವರ್ಷ ಪದವಿ ಪೂರೈಸಿದ ಬಳಿಕ ಸ್ನಾತಕೋತ್ತರ ಪದವಿ ಇಲ್ಲವೇ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಬಹುತೇಕ ಸರ್ಕಾರಿ ಉದ್ಯೋಗಗಳಿಗೆ ಪದವಿಯನ್ನೇ ಮಾನದಂಡವನ್ನಾಗಿ ಪರಿಗಣಿಸಲಾಗಿತ್ತು.

ಹೊಸ ನೀತಿಯ ಪದವಿ ಬೇರೆ

ಹೊಸ ನೀತಿಯ ಪದವಿ ಬೇರೆ

ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಪದವಿಯನ್ನು ನಾಲ್ಕು ವರ್ಷಕ್ಕೆ ಹೆಚ್ಚಿಸಲಾಗಿದೆ. ಹೊಸ ಪದವಿ ಬಗ್ಗೆ ಸಾಕಷ್ಟು ಗೊಂದಲ ಏರ್ಪಟ್ಟಿದೆ. ಯಾವುದೇ ಪೂರ್ವ ತಯಾರಿ ಇಲ್ಲದೇ, ಶಿಕ್ಷಣ ನೀತಿಯ ಅರಿವು ಜನರಲ್ಲಿ ಮೂಡಿಸದೇ ಜಾರಿ ಮಾಡಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಇದರ ಪ್ರಕಾರ, ಮೊದಲ ವರ್ಷ ಅಧ್ಯಯನ ಮಾಡಿದವರಿಗೆ ಸರ್ಟಿಫಿಕೇಟ್ ಎರಡು ವರ್ಷ ಅಧ್ಯಯನ ಮಾಡಿದರೆ ಡಿಪ್ಲೋಮಾ, ಮೂರು ವರ್ಷ ಅಧ್ಯಯನ ಮಾಡಿದರೆ ಪದವಿ, ನಾಲ್ಕು ವರ್ಷ ಅಧ್ಯಯನ ಮಾಡಿದ ಅಭ್ಯರ್ಥಿಗಳನ್ನು ಸ್ನಾತಕೋತ್ತರ ಪದವೀಧರ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅದರೆ ಈ ಬಗ್ಗೆ ಯಾರಲ್ಲೂ ಸ್ಪಷ್ಟತೆ ಇಲ್ಲ. ಇದು ರಾಜ್ಯದ ಪ್ರಾಧ್ಯಾಪಕರಲ್ಲಿ ಬಾರೀ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಭಾಷಾ ವಿಷಯಕ್ಕೆ ಕತ್ತರಿ

ಭಾಷಾ ವಿಷಯಕ್ಕೆ ಕತ್ತರಿ

ಹೊಸ ಶಿಕ್ಷಣ ನೀತಿ ಪ್ರಕಾರ ಕನ್ನಡ ಭಾಷೆಯನ್ನು ಕೇವಲ ಒಂದು ವರ್ಷದ ಅಧ್ಯಯನಕ್ಕೆ ಸೀಮಿತಗೊಳಿಸಲಾಗಿದೆ. ಎರಡನೇ ವರ್ಷದಿಂದ ಕನ್ನಡ ಭಾಷೆ ಇರುವುದಿಲ್ಲ. ಆದರೆ ದೇಶವ್ಯಾಪ್ತಿ ಚಾಲ್ತಿಯಲ್ಲಿರುವ ಇಂಗ್ಲೀಷ್ ಭಾಷೆ ಕಲಿಕೆಗೆ ಅವಕಾಶ ನೀಡಲಾಗಿದೆ ಎಂದೇ ಹೇಳಲಾಗುತ್ತಿದೆ. ಇದು ರಾಜ್ಯದ ಕನ್ನಡ ಪ್ರಾಧ್ಯಾಪಕರನ್ನು ಕೆರಳಿಸಿದೆ. ಯಾವುದೇ ಪೂರ್ವ ಪರ ಚರ್ಚೆ ಇಲ್ಲದೇ, ಶಿಕ್ಷಣ ನೀತಿಯ ವಾಸ್ತವ ಅಂಶಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸದೇ ಜಾರಿ ಮಾಡಲಾಗುತ್ತಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಏಕಾ ಏಕಿ ಹೊಸ ಶಿಕ್ಷಣ ನೀತಿ ಜಾರಿ ಮಾಡಲು ಹೊರಟಿರುವ ಉನ್ನತ ಶಿಕ್ಷಣ ಇಲಾಖೆ ನಡೆ ವಿರುದ್ಧ ರಾಜ್ಯದೆಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ಭಾಷೆಯನ್ನು ಒಂದು ವರ್ಷದ ಅಧ್ಯಯನಕ್ಕೆ ಸೀಮಿತಗೊಳಿಸರುವ ನೀತಿ ಸರಿಯಿಲ್ಲ ಎಂದು ಪ್ರಾಧ್ಯಾಪಕರು ಕಿಡಿ ಕಾರಿದ್ದಾರೆ.

ಪ್ರಾಧ್ಯಾಪಕರ ಬೇಡಿಕೆ ಏನು?

ಪ್ರಾಧ್ಯಾಪಕರ ಬೇಡಿಕೆ ಏನು?

ಮೂರು ವರ್ಷದ ಪದವಿ ಇದ್ದಾಗಲೂ ಭಾಷೆಯನ್ನು ಎರಡು ವರ್ಷ ಕಲಿಕೆಗೆ ಅವಕಾಶ ನೀಡಲಾಗಿತ್ತು. ನಾಲ್ಕು ವರ್ಷದ ಪದವಿ ಪರಿಚಯಿಸುವುದಾದರೆ ಕನ್ನಡ ಭಾಷೆ ಅಧ್ಯಯನವನ್ನು ಮೂರು ವರ್ಷಕ್ಕೆ ಪರಿಚಯಿಸಬೇಕು. ಭಾಷೆ ಕೇವಲ ವ್ಯವಹಾರಿಕ ಭಾಷೆ ಅಲ್ಲ. ಅದು ಸಂಸ್ಕೃತಿ. ಒಬ್ಬ ವ್ಯಕ್ತಿಯನ್ನು ಒಳ್ಳೆಯವನ್ನಾಗಿ ಪರಿವರ್ತನೆ ಮಾಡುವ ಸಂಸ್ಕತಿ. ಕನ್ನಡ ನೆಲದಲ್ಲಿ ಕನ್ನಡ ಭಾಷೆ ಶ್ರೇಷ್ಠ. ಐಟಿ - ಬಿಟಿ ಉದ್ಯೋಗದ ಯಂತ್ರಗಳನ್ನು ಸೃಷ್ಟಿಸುವ ಬರದಲ್ಲಿ ಭಾಷೆಯನ್ನು ಮರೆತರೆ ಅದಕ್ಕೆ ಸಮಾಜ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಕನ್ನಡ ಪ್ರಾಧ್ಯಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರೊ ತಿಮ್ಮೇಗೌಡ ಕನ್ನಡ ಕಾಳಜಿ

ಪ್ರೊ ತಿಮ್ಮೇಗೌಡ ಕನ್ನಡ ಕಾಳಜಿ

ಒಂದು ಭಾಷೆಯನ್ನು ಸಂವಹನವಕ್ಕೆ ಸೀಮಿತಗೊಳಿಸಬಾರದು. ಭಾಷೆ ಎಂಬುದು ಸಂಸ್ಕೃತಿ. ದುಡಿಯುವ ವ್ಯಕ್ತಿಗಳ ನಿರ್ಮಾಣದ ಹೆಸರಿನಲ್ಲಿ ಭಾಷೆಯನ್ನು ತ್ಯಜಿಸಿದರೇ ಆಗುವುದಿಲ್ಲ. ಹಣ ದುಡಿಯುವುದರಿಂದ ವ್ಯಕ್ತಿತ್ವ ನಿರ್ಮಾಣ ಅಸಾಧ್ಯ. ಅದು ಸಾಹಿತ್ಯದ ಮೂಲಕವೇ ಅಗಬೇಕು. ಒಬ್ಬ ಯುವಕ ಶಿವಾಜಿ ಆಗಿದ್ದು ಅಮ್ಮನ ಹೇಳಿದ ಕಥೆಗಳಿಂದ ಎಂಬುದನ್ನು ಇತಿಹಾಸ ಪಾಠ ಹೇಳಿದೆ. ಕುವೆಂಪು ಅವರ ರಾಮಾಯಣ ದರ್ಶನಂ ವಿಚಾರಕ್ಕೆ ಬಂದರೆ, ಏಕಾಂಗಿ ರಾವಣ ತನ್ನ ಕುಟುಂಬದ ಒಳಿತಿಗಾಗಿ ಸೀತೆಯ ಸಹವಾಸಕ್ಕೆ ಹೋಗುವುದಿಲ್ಲ ಎಂದು ಮಾತು ಕೊಡುತ್ತಾನೆ. ಕೊನೆಯಲ್ಲಿ ತಾನು ಮುಂದೆ ಸೀತೆಯ ಹೊಟ್ಟೆಯಲ್ಲಿ ಹುಟ್ಟಬೇಕು ಎಂದು ಬಯಸುತ್ತಾನೆ. ಕುವೆಂಪು ಅವರ ರಾಮಾಯಣ ದರ್ಶನಂ ನಲ್ಲಿ ಆ ರೀತಿಯ ಮೌಲ್ಯಗಳನ್ನ ಎತ್ತಿ ಹಿಡಿಯಲಾಗಿದೆ. ಒಬ್ಬ ಕೆಟ್ಟ ವ್ಯಕ್ತಿಯನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಪರಿವರ್ತನೆ ಮಾಡುವ ಶಕ್ತಿ ಸಾಹಿತ್ಯಕ್ಕೆ ಇದೆ. ಸಾಹಿತ್ಯವನ್ನೇ ವಿದ್ಯಾರ್ಥಿಗಳಿಂದ ದೂರ ಮಾಡಿದರೆ ಏನು ಪ್ರಯೋಜನ. ? ಈ ಬದುಕು- ಸಂಸ್ಕೃತಿಯನ್ನು ಯಾವ ಕೆಮಿಸ್ಟ್ರಿ, ಬಯಾಲಜಿ ಹೇಳಿಕೊಡುತ್ತೆ ಎಂದು ಮೈಸೂರು ಮಹಾಜನ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಪ್ರೊ. ತಿಮ್ಮೇಗೌಡ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪದವಿ ಹಂತದಲ್ಲಿ ಕನ್ನಡ ಭಾಷೆ ಅಧ್ಯಯನ ಒಂದು ವರ್ಷಕ್ಕೆ ಸೀಮಿತಗೊಳಿಸಿರುವ ನಿರ್ಧಾರವನ್ನು ಟೀಕಿಸಿದರು.

ದೇಶದಲ್ಲಿ ಮೊದಲು ಇಲ್ಲಿ ಜಾರಿ

ದೇಶದಲ್ಲಿ ಮೊದಲು ಇಲ್ಲಿ ಜಾರಿ

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿಯೇ ಮೊದಲು ಉನ್ನತ ಶಿಕ್ಷಣ ಹಂತದಲ್ಲಿ ಅಳವಡಿಸಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಕೊರೊನಾ ಸಂಕಷ್ಟದಿಂದ ಇನ್ನೂ ರಾಜ್ಯ ಮೇಲೆ ಎದ್ದಿಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಣ ನೀತಿಯ ಮೇಲೆ ಪ್ರಯೋಗ ನಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ - ಬಾಧಕಗಳ ಬಗ್ಗೆ ಅಧ್ಯಯನ ಮಾಡಿಲ್ಲ. ಜನರಲ್ಲಿ ಜಾಗೃತಿ ಮೂಡಿಸದೇ ಮೋದಿಯನ್ನು ಮೆಚ್ಚಿಸಲು ಹೊರಟಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಕನ್ನಡ ಭಾಷೆಗೆ ಕೋಕ್ ನೀಡಿರುವ ವಿರುದ್ಧ ರಾಜ್ಯದ ಕನ್ನಡ ಪ್ರಾಧ್ಯಾಪಕರು ತಿರುಗಿ ಬಿದ್ದಿದ್ದು, ಇದೀಗ ಸಾಹಿತಿಗಳ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

English summary
Kannada language study is limited to one year at the graduate level. Kannada professors have raised their voice against the National Education Policy know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X