ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್‌ಗೆ ಜೆಡಿಎಸ್, ರಾಜ್ಯದ ಜನರ ಮೇಲೆ ನಂಬಿಕೆ ಇಲ್ಲ : ಮೋದಿ

|
Google Oneindia Kannada News

ಮೈಸೂರು, ಏಪ್ರಿಲ್ 09 : 'ರಾಹುಲ್ ಗಾಂಧಿ ಅವರಿಗೆ ಕರ್ನಾಟಕದ ಜನರು ಮತ್ತು ಜೆಡಿಎಸ್ ಪಕ್ಷದ ಮೇಲೆ ನಂಬಿಕೆ ಇಲ್ಲ. ಆದ್ದರಿಂದ, ರಾಜ್ಯದಲ್ಲಿ ಅವರದ್ದೇ ಸರ್ಕಾರವಿದ್ದರೂ ಕೇರಳದಲ್ಲಿ ಹೋಗಿ ಚುನಾವಣೆಗೆ ನಿಂತಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದರು. 'ಕರ್ನಾಟಕದ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದೆ' ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಪ್ರವಾಸದಲ್ಲಿದ್ದಾರೆ. ಮಂಗಳವಾರ ಅವರು ಚಿತ್ರದುರ್ಗದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಬಳಿಕ ವಿಶೇಷ ವಿಮಾಣದ ಮೂಲಕ ಮೈಸೂರಿಗೆ ಆಗಮಿಸಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡರು.

ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

Narendra Modi election campaign rally Mysuru highlights

ಮೈಸೂರು-ಕೊಡಗು, ಚಾಮರಾಜನಗರ, ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನರೇಂದ್ರ ಮೋದಿ ಅವರು ಪ್ರಚಾರ ನಡೆಸಿದರು. ಮೈಸೂರು-ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹ, ಚಾಮರಾಜನಗರ ಕ್ಷೇತ್ರದಿಂದ ವಿ.ಶ್ರೀನಿವಾಸ ಪ್ರಸಾದ್, ಹಾಸನ ಕ್ಷೇತ್ರದಿಂದ ಎ.ಮಂಜು ಬಿಜೆಪಿ ಅಭ್ಯರ್ಥಿಗಳು....

ಮೈಸೂರು ಕ್ಷೇತ್ರದ ಚುನಾವಣಾ ಪುಟ

Newest FirstOldest First
5:51 PM, 9 Apr

ನಿಮ್ಮ ಬೆಂಬಲಕ್ಕೆ, ಆಶೀರ್ವಾದಕ್ಕೆ ನಾನು ಎರಡೂ ಕೈ ಮುಗಿದು ವಂದಿಸುವೆ.
5:50 PM, 9 Apr

ಎಲ್ಲರೂ ಹೇಳಿ ಮಕ್ಕಳು, ಹಿರಿಯರು, ಡಾಕ್ಟರ್, ಇಂಜಿನಿಯರ್, ರೈತರು, ಶ್ರಮಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಕೂಡಾ ಹೇಳಿ ನಾನು ಚೌಕಿದಾರ್
5:50 PM, 9 Apr

ನಿಮ್ಮ ಪ್ರತಿ ಒಂದು ಮತ ಚೌಕಿದಾರನಾದ ನನ್ನನ್ನು ಸಶಕ್ತಗೊಳಿಸುತ್ತದೆ. ನಾನು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂಬ ನಂಬಿಕೆ ಇದೆಯೇ? ಹಾಗಾದರೆ ನಾನು ಚೌಕಿದಾರ್ ಎಂದು ಹೇಳಿರಿ
5:48 PM, 9 Apr

ಅಂಬರೀಶ್ ಅವರು ಮಾಡಿದ ಕಾರ್ಯಗಳಿಂದ ಅವರು ಇಂದು ಜನರ ಮನಸ್ಸಿನಲ್ಲಿದ್ದಾರೆ. ಸುಮಲತಾ ಅವರು ಅಂಬರೀಶ್ ಅವರ ಜೊತೆ ಸೇರಿ ಕನ್ನಡ ಸಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಆಪಾರ. ಅವರಿಗೆ ನೀವು ಬೆಂಬಲ ನೀಡುವಿರಿ ಎಂಬ ವಿಶ್ವಾಸವಿದೆ.
5:47 PM, 9 Apr

ಮೊದಲ ಬಾರಿಗೆ ಮತಹಾಕುವ ನನ್ನ ಯುವ ಮಿತ್ರರೇ ನಿಮ್ಮ ಒಂದು ಮತ ದೇಶಕ್ಕೆ ಸುಸ್ಥಿರ ಸರ್ಕಾರವನ್ನು ನೀಡುತ್ತದೆ. ಆದ್ದರಿಂದ ನೀವು ಮತವನ್ನು ಹಾಕಬೇಕು ಎಂದು ಮೋದಿ ಕರೆ ನೀಡಿದರು.
5:46 PM, 9 Apr

ಈಗ ಕೇರಳದಿಂದ ಚುನಾವಣೆಗೆ ನಿಂತಿರುವ ರಾಹುಲ್ ಗಾಂಧಿ ಶಬರಿಮಲೆ ವಿಚಾರದಲ್ಲಿ ಯಾವ ಬದ್ಧತೆ ಪ್ರದರ್ಶನ ಮಾಡುತ್ತಾರೆ? ಎಂದು ಮೋದಿ ಪ್ರಶ್ನಿಸಿದರು.
5:45 PM, 9 Apr

ಧಾರ್ಮಿಕ ನಂಬಿಕೆಗಳಿಗೆ ಸಂವಿಧಾನದ ರಕ್ಷಣೆ ಸಿಗಬೇಕು ಎಂಬುದು ನಮ್ಮ ಆಶಯ. ಆದ್ದರಿಂದ, ಶಬರಿಮಲೆ ವಿಚಾರದಲ್ಲಿ ನಾವು ಕಾನೂನು ಗೌರವಿಸಿದೆವು. ಆದರೆ, ಸಿಪಿಎಂ ಸರ್ಕಾರ ಏನು ಮಾಡಿತು.
Advertisement
5:43 PM, 9 Apr

ನಮ್ಮ ಸೇನೆ ಮೇಲೆ ನಿಮಗೆ ಭರವಸೆ ಇದೆಯೇ?. ಅವರ ಶೌರ್ಯದ ಬಗ್ಗೆ ಭರವಸೆ ಇದೆಯೇ? ನಿಮಗೆ ನಂಬಿಕೆ ಇದೆ ಎಂದ ಮೇಲೆ ಸಾಕ್ಷಿಗಳನ್ನು ನಾವು ನೀಡಬೇಕು.
5:42 PM, 9 Apr

ಆದ್ದರಿಂದ ಕರ್ನಾಟಕವನ್ನು ಬಿಟ್ಟು ಕೇರಳಕ್ಕೆ ಹೋಗಿ ಚುನಾವಣೆಗೆ ನಿಂತಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ದೇವೇಗೌಡರು ತಮ್ಮ ಮಗ ಪ್ರಧಾನಿ ಆಗುವುದನ್ನು ತಪ್ಪಿಸಲಿದ್ದಾರೆ ಎಂಬ ಆತಂಕವಿದೆ.
5:41 PM, 9 Apr

ದಕ್ಷಿಣದಲ್ಲಿ ಸ್ಪರ್ಧಿಸಲು ಬಯಸಿದ್ದಲ್ಲಿ ಮೈಸೂರು, ಚಾಮರಾಜನಗರದಲ್ಲಿ ಕಣಕ್ಕಿಳಿಯಬಹುದಿತ್ತು. ಇಲ್ಲಿ ನಿಮ್ಮದೇ ಸರ್ಕಾರವಿದೆ. ಆದರೆ, ಅವರಿಗೆ ಇಲ್ಲಿನ ಜನರು ಮತ್ತು ಜೆಡಿಎಸ್‌ ಬಗ್ಗೆ ಅನುಮಾನವಿದೆ.
5:40 PM, 9 Apr

ಭ್ರಷ್ಟಾಚಾರ, ಕುಟುಂಬ ರಾಜಕಾರಣದ ವಿರುದ್ಧ ದೇಶದ ಜನರ ಆಕ್ರೋಶವಿದೆ. ನಾಮ್‌ಧಾರ್ ವ್ಯಕ್ತಿಗೆ ಅವರ ಪಕ್ಷದ ಸ್ಥಿತಿ ಏನಾಗಲಿದೆ ಎಂಬುದು ತಿಳಿದಿಲ್ಲ.
5:39 PM, 9 Apr

ಕಾಂಗ್ರೆಸ್ ಸರ್ಕಾರ ನಡೆಸುವ ರೀತಿ ಇದೆಯಲ್ಲಾ ಅದನ್ನು ನೀವು ನೋಡಬೇಕು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಪಂಚಿಂಗ್ ಬ್ಯಾಗ್ ಮಾಡಿಕೊಂಡಿದ್ದಾರೆ.
Advertisement
5:36 PM, 9 Apr

ಬಡವರನ್ನು ಉದ್ದಾರ ಮಾಡುವುದು ಕಾಂಗ್ರೆಸ್ ಉದ್ದೇಶವಲ್ಲ. ಬಡವರ ಹೆಸರಿನಲ್ಲಿ ಯೋಜನೆ ಆರಂಭಿಸಿ ಹಣ ಲೂಟಿ ಮಾಡುತ್ತಾರೆ. ರೈತರ ಸಾಲಮನ್ನಾ ಹೆಸರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ದುಡ್ಡು ಹೊಡೆಯುತ್ತಿದೆ.
5:35 PM, 9 Apr

ಕಾಂಗ್ರೆಸ್ ಸರ್ಕಾರವಿದ್ದಾಗ ಗೃಹ ಸಾಲ, ವಿದ್ಯಾಭ್ಯಾಸದ ಸಾಲದ ಇಎಂಐ ಎಷ್ಟಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಿ. ಕಾಂಗ್ರೆಸ್‌ ದೇಶಕ್ಕೆ 2ಜಿ ಹಗರಣ ನೀಡಿತು. ನಮ್ಮ ಸರ್ಕಾರ ಸ್ಮಾರ್ಟ್‌ ಪೋನ್ ಮತ್ತು ಡೇಟಾ ನೀಡಿತು.
5:33 PM, 9 Apr

ಚೌಕಿದಾರ್ ಇರುವ ತನಕ ಸರಿಯಾಗಿ ತೆರಿಗೆ ಕಟ್ಟುವ ಪ್ರತಿ ವ್ಯಕ್ತಿಯನ್ನು ಗೌರವಿಸಲಾಗುತ್ತದೆ. ಕಾಂಗ್ರೆಸ್ ಮತ್ತು ಅವರ ಮೈತ್ರಿಕೂಟ ಇದ್ದಾಗ 2 ಲಕ್ಷದ ತನಕ ಮಾತ್ರ ಆದಾಯ ತೆರಿಗೆ ಮಿತಿ ಇತ್ತು. ನಮ್ಮ ಸರ್ಕಾರ 5 ಲಕ್ಷಕ್ಕೆ ಅದನ್ನು ಏರಿಕೆ ಮಾಡಿತು
5:31 PM, 9 Apr

ಗರೀಭಿ ಹಠಾವೋ ಗರೀಭಿ ಹಠಾವೋ ಎಂದು ಹೇಳುತ್ತಿದ್ದರು. ಈಗ ಬಡವರು ಕಾಂಗ್ರೆಸ್ ಹಠಾವೋ ಎಂದು ಹೇಳುತ್ತಿದ್ದಾರೆ.
5:31 PM, 9 Apr

ಅವರ ಕಾರ್ಯಕ್ರಮ, ಭಾಷಣ ಕೇಳಿ ಒಂದೇ ಮಾತು ಮೋದಿ ಹಠವೋ ಮೋದಿ ಹಠವೋ ಎಂದು ಹೇಳುತ್ತಿದ್ದಾರೆ. ಆದರೆ, ನಿಮ್ಮ ಪ್ರೀತಿ ನೋಡಿ ಅವರಿಗೆ ನಿದ್ದೆ ಬರುತ್ತಿಲ್ಲ.
5:30 PM, 9 Apr

ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆ ಎರಡರಷ್ಟು ಹೆಚ್ಚಾಗಲಿದೆ. ಒಂದು ಕಡೆ ನಮ್ಮ ಸಂಕಲ್ಪ ಪತ್ರ ಮತ್ತೊಂದು ಕಡೆ ಕಾಂಗ್ರೆಸ್‌ನ ಪ್ರಣಾಳಿಕೆ. ಎರಡನ್ನೂ ನೀವು ನೋಡಿ. ಯಾವ ಪಕ್ಷದ ನೀತಿ ನಿಮ್ಮ ಪರವಾಗಿದೆ ಎಂಬುದು ತಿಳಿಯಲಿದೆ.
5:28 PM, 9 Apr

ನಿನ್ನೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ನಮ್ಮ ಸೇನೆಯನ್ನು ನಾವು ಮತ್ತಷ್ಟು ಬಲಗೊಳಿಸುತ್ತೇವೆ ಎಂಬ ಸಂಕಲ್ಪ ಮಾಡಿದ್ದೇವೆ. 2030ರ ವೇಳೆಗೆ ಆರ್ಥಿಕವಾಗಿ ನಾವು ವಿಶ್ವದಲ್ಲೇ ಉತ್ತಮ ಸ್ಥಾನದಲ್ಲಿ ಇರುತ್ತೇವೆ.
5:26 PM, 9 Apr

ಬೆಂಗಳೂರು-ಮೈಸೂರು 8 ಪಥದ ರಸ್ತೆ ಅಂತ್ಯಗೊಂಡರೆ ಮೈಸೂರು ಅಭಿವೃದ್ಧಿಯಾಗಲಿದೆ. ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣ ಅಭಿವೃದ್ಧಿಯಾಗಲಿದೆ. ದೇಶದ ಮೊದಲ ಅಂಚೆ ಕಚೇರಿ ಪಾಸ್‌ಪೋರ್ಟ್ ಕೇಂದ್ರ ಮೈಸೂರಿನಲ್ಲಿ ಆರಂಭವಾಯಿತು.
5:25 PM, 9 Apr

ಕಳೆದ ಐದು ವರ್ಷಗಳಲ್ಲಿ ನಿಮ್ಮ ಈ ಸೇವಕ ಸಬ್ ಕೇ ಸಾಥ್ ಸಬ್‌ ಕಾ ವಿಕಾಸ್ ಎಂಬ ತತ್ವದೊಂದಿಗೆ ಮುಂದೆ ಸಾಗುತ್ತಿದ್ದೇನೆ.
5:24 PM, 9 Apr

ನಾನು ಚಿತ್ರದುರ್ಗದಿಂದ ಬಂದೆ. ಬೇಸಿಗೆಯ ಬಿಸಿಲು ನೋಡಿದೆ. ಚುನಾವಣೆ ಕಾವು ಹೆಚ್ಚುತ್ತಿದೆ. ಆದರೂ ನೀವೆಲ್ಲಾ ನಮಗೆರ ಅಶೀರ್ವಾದ ಮಾಡಲು ಬಂದಿರುವುದಕ್ಕೆ ಅಭಾರಿ
5:23 PM, 9 Apr

ನಮಗೆಲ್ಲಾ ಶಕ್ತಿ ಮತ್ತು ಅಶೀರ್ವಾದ ನೀಡುವ ಚಾಮುಂಡೇಶ್ವರಿರ ಪುಣ್ಯಭೂಮಿಯಲ್ಲಿ ನಾನು ನಿಂತಿದ್ದೇನೆ
5:21 PM, 9 Apr

ದೆಹಲಿಯಲ್ಲಿ ಎಸಿ ರೂಂನಲ್ಲಿ ಕುಳಿತು ಅರ್ಧ ಪರ್ಸೆಂಟ್ ಕಮೀಷನ್ ಅಲ್ಲಿ, ಇಲ್ಲಿ ಎಂದು ಲೆಕ್ಕಹಾಕುವವರು ಮೈಸೂರಿನ ಮೈದಾನಕ್ಕೆ ಬಂದು ನೋಡಿ. ಜನಸಾಗರವೇ ಸೇರಿದೆ
5:21 PM, 9 Apr

ಜನ ಸಾಗರವೇ ಇಂದು ಸೇರಿದೆ. ಮೈಸೂರಿಗೆ ಹಿಂದೆಯೂ ಬಂದಿದ್ದೆ. ಆದರೆ, ಇಷ್ಟು ಜನರನ್ನು ಈಗ ನೋಡುತ್ತಿದ್ದೇನೆ.
5:20 PM, 9 Apr

ಚಾಮರಾಜನಗರ, ಮಂಡ್ಯ, ಹಾಸನ, ಮೈಸೂರು ಜಿಲ್ಲೆಗಳ ಆಧರಣೀಯ ನಾಗರೀಕ ಬಂಧುಗಳೇ ಎಲ್ಲರಿಗೂ ನಿಮ್ಮ ಚೌಕಿದಾರ್ ನರೇಂದ್ರ ಮೋದಿಯ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭ
5:19 PM, 9 Apr

ಕನ್ನಡದಲ್ಲಿ ಭಾಷಾಂತರ ಬೇಕೆ, ಹಿಂದಿ ಚಲೇಗಾ ಎಂದು ಪ್ರಶ್ನಿಸಿದ ಮೋದಿ
5:18 PM, 9 Apr

ನರೇಂದ್ರ ಮೋದಿ ಅವರಿಗೆ ಮೈಸೂರು ಜಿಲ್ಲಾ ಘಟಕದ ವತಿಯಿಂದ ಸನ್ಮಾನ ಮಾಡಲಾಯಿತು.
5:15 PM, 9 Apr

ಬಿ.ಎಸ್.ಯಡಿಯೂರಪ್ಪ, ಪ್ರತಾಪ್ ಸಿಂಹ, ವಿ.ಶ್ರೀನಿವಾಸ ಪ್ರಸಾದ್, ರಾಮದಾಸ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದಾರೆ.
5:15 PM, 9 Apr

ಸಮಾವೇಶದ ವೇದಿಕೆಗೆ ಆಗಮಿಸಿದ ನರೇಂದ್ರ ಮೋದಿ
READ MORE

English summary
Prime ministers of India Narendra Modi addressed election campaign rally in Mysuru on April 9, 2019. Election will be held in Mysuru-Kodagu seat on April 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X