ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಆದಾಯದಲ್ಲಿ ಭಾರೀ ಇಳಿಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 31; ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಿರುವ ಕೊರೊನಾ, ದೇವಾಲಯಗಳ ಆದಾಯದ ಮೇಲೂ ಪರಿಣಾಮ ಬೀರಿದೆ. ಕೋವಿಡ್-19 ಆತಂಕದಿಂದಾಗಿ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ.

ಕಳೆದ ಬಾರಿ ಸಂಗ್ರಹಕ್ಕೆ ಹೋಲಿಸಿದರೆ 41,57,204 ರೂ. ಕಡಿಮೆ ಸಂಗ್ರಹವಾಗಿದೆ. ಈ ಬಾರಿಯ ಎಣಿಕೆಯಲ್ಲಿ ಸಂಗ್ರಹವಾದ ಕಾಣಿಕೆ 69,24,900 ರೂ. ಆಗಿದೆ.‌ 2020ರ ಜನವರಿಯಲ್ಲಿ 1,10,82,900 ರೂ. ಸಂಗ್ರಹವಾಗಿದೆ. ಆದರೆ ನಂತರದಲ್ಲಿ ಉಂಟಾದ ಕೊರೊನಾ ಲಾಕ್ ಡೌನ್ ಕಾರಣದಿಂದ ದೇವಸ್ಥಾನಕ್ಕೆ ಬರುವ ಭಕ್ತರ‌ ಸಂಖ್ಯೆ ಕೂಡ ಇಳಿಕೆಯಾಗಿದೆ. ಹೀಗಾಗಿ ದೇವಸ್ಥಾನದ ಹುಂಡಿಗಳಲ್ಲಿ ಸಂಗ್ರಹವಾಗುತ್ತಿದ್ದ ಆದಾಯದ ಮೇಲೆ ಪರಿಣಾಮ ಬೀರಿದೆ.

Mysuru: Nanjanagudu Srikanteshwara Temple Revenue Dropped

ಕರ್ನಾಟಕದ ದೇವಾಲಯಗಳ ಆದಾಯ ಶೇ 72ರಷ್ಟು ಕುಸಿತ
ದೇವಸ್ಥಾನದ ಹುಂಡಿಯಲ್ಲಿ ಈ ಬಾರಿಯೂ ನಿಷೇಧಿತ ನೋಟುಗಳು ಲಭಿಸಿವೆ. ಈ ಬಾರಿಯ ಹುಂಡಿ ಎಣಿಕೆಯ ಸಂದರ್ಭದಲ್ಲಿ 11,500 ರೂ. ನಷ್ಟು ನಿಷೇಧಿತ ನೋಟುಗಳು ಸಿಕ್ಕಿವೆ. ಕಳೆದ ಬಾರಿಯ ಎಣಿಕೆಯಲ್ಲಿ 80,500 ರೂ. ಮೌಲ್ಯದ ನಿಷೇಧಿತ ನೋಟುಗಳು ದೊರೆತಿದ್ದವು. ಲಾಕ್ ಡೌನ್ ವೇಳೆಯಲ್ಲಿ ದೇವಸ್ಥಾನದ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಸಂಗ್ರಹವಾಗಿದ್ದು, 7 ವಿದೇಶಿ ಕರೆನ್ಸಿ ನೋಟುಗಳು ಹುಂಡಿ ಎಣಿಕೆ ವೇಳೆಯಲ್ಲಿ ದೊರೆತಿವೆ.

English summary
Due to coronavius, the revenue of nanjanagudu Srikantheshwara swamy temple dropped
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X