ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ನಾಗರಾಜ ಗೊಂಡ, ಮಾದಮ್ಮ

|
Google Oneindia Kannada News

ಮೈಸೂರು, ಫೆಬ್ರವರಿ 5; ಗೊಂಡ್ ಸಮುದಾಯದ ನಾಗರಾಜ ಗೊಂಡ ಹಾಗೂ ಸೊಲಿಗ ಸಮುದಾಯದ ಮಾದಮ್ಮ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡಿದ್ದರು. 13 ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡ ಅನುಭವವನ್ನು ಅವರು ಹಂಚಿಕೊಂಡರು.

ಮೈಸೂರಿನ ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ಸಹ ಅನುಭವ ಹಂಚಿಕೆ ಮಾಡಿಕೊಂಡರು.

ವಿಡಿಯೋ: ಗಣರಾಜ್ಯೋತ್ಸವ ಸಂಭ್ರಮ ಹೆಚ್ಚಿಸಿದ ITBP ಯೋಧರು ವಿಡಿಯೋ: ಗಣರಾಜ್ಯೋತ್ಸವ ಸಂಭ್ರಮ ಹೆಚ್ಚಿಸಿದ ITBP ಯೋಧರು

ನಾಗರಾಜ ಗೊಂಡ ಮಾತನಾಡಿ, "ದೆಹಲಿ ಪ್ರವಾಸ ವಿಶಿಷ್ಟ ಅನುಭವ ನೀಡಿತು. ಪ್ರಧಾನಮಂತ್ರಿ ಸೇರಿದಂತೆ ಅನೇಕ ಗಣ್ಯರನ್ನು ಭೇಟಿಯಾದೆವು. ವಿಐಪಿ ಗ್ಯಾಲರಿಯಲ್ಲಿ ಕುಳಿತು ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಿದೆವು" ಎಂದರು.

ಗಣರಾಜ್ಯೋತ್ಸವ: ಮೊದಲ ಬಾರಿಗೆ ಬಾಂಗ್ಲಾದೇಶ ಮಾರ್ಚಿಂಗ್ ತಂಡ ಭಾಗಿ ಗಣರಾಜ್ಯೋತ್ಸವ: ಮೊದಲ ಬಾರಿಗೆ ಬಾಂಗ್ಲಾದೇಶ ಮಾರ್ಚಿಂಗ್ ತಂಡ ಭಾಗಿ

Nagaraj Gond And Madamma Participated In Republic Day Parade

"ಇಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ನಮ್ಮ ಸಮುದಾಯವರಿಗೆ ಪಾಲ್ಗೊಳ್ಳುವುದೇ ಕಷ್ಟವಾಗಿತ್ತು. ನಮ್ಮ ಸಂಪ್ರಾದಾಯಿಕ ಧರಿಸಿನಲ್ಲಿ ಹಾಜರಾಗಿದ್ದು ವಿಶೇಷವಾಗಿತ್ತು ಮತ್ತು 13 ದಿನಗಳ ಕಾಲ ದೆಹಲಿಯ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದು ಜೀವನದಲ್ಲಿ ಮರೆಯಲಾಗದ ಕ್ಷಣ" ಎಂದು ಹೇಳಿದರು.

ಗಣರಾಜ್ಯೋತ್ಸವ ಫ್ಲೈಪಾಸ್ಟ್‌ನಲ್ಲಿ ವಿಶೇಷ ಸಾಧನೆಗೈದ ಮಹಿಳಾ ಪೈಲಟ್ ಗಣರಾಜ್ಯೋತ್ಸವ ಫ್ಲೈಪಾಸ್ಟ್‌ನಲ್ಲಿ ವಿಶೇಷ ಸಾಧನೆಗೈದ ಮಹಿಳಾ ಪೈಲಟ್

ಸೋಲಿಗ ಸಮುದಾಯದ ಮಾದಮ್ಮ ಅವರು, "ಇದುವರೆಗೆ ವಿಮಾನದಲ್ಲಿ ಪ್ರಯಾಣವೇ ಮಾಡಿರಲಿಲ್ಲ. ಈ ಕಾರ್ಯಕ್ರಮದಿಂದಾಗಿ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡಿದೆ. ದೆಹಲಿ ಬಹಳ ಸ್ವಚ್ಚವಾಗಿದೆ. ಹಾಗೆಯೇ ನಮ್ಮ ಕರ್ನಾಟಕವೂ ಸಹ ಸ್ವಚ್ಚವಾಗಬೇಕು" ಎಂದರು.

ಪ್ರತಿವರ್ಷ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರು ಜಿಲ್ಲೆಯಿಂದ ಬುಡಕಟ್ಟು ಸಮಯದಾಯದ ಪ್ರತಿನಿಧಿಗಳನ್ನು ಕಳಿಸಲಾಗುತ್ತದೆ. ಗಣ್ಯರ ಜೊತೆ ಕುಳಿತು ಅವರು ಪರೇಡ್ ವೀಕ್ಷಣೆ ಮಾಡಬಹುದಾಗಿದೆ.

English summary
Gond Tribe community Nagaraj Gond and Soliga community Madamma from Mysuru participated in Republic Day parade 2021 at New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X