ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೃಗಾಲಯಕ್ಕೆ ಬಂದ ಚಿಂಪಾಂಜಿ, ಸಿಂಹಗಳು

|
Google Oneindia Kannada News

ಮೈಸೂರು, ಜೂನ್ 28: ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಸಿಂಗಾಪುರ ಮೃಗಾಲಯದಿಂದ ಒಂದು ಹೆಣ್ಣು ಚಿಂಪಾಂಜಿ ಹಾಗೂ ಗುಜರಾತ್ ಮೃಗಾಲಯದಿಂದ ಭಾರತೀಯ ಸಿಂಹಗಳು ಆಗಮಿಸಿವೆ.

ಗುಜರಾತಿನಿಂದ ಮೈಸೂರಿನ ಝೂಗೆ ಬರಲಿವೆ 5 ಸಿಂಹಗಳುಗುಜರಾತಿನಿಂದ ಮೈಸೂರಿನ ಝೂಗೆ ಬರಲಿವೆ 5 ಸಿಂಹಗಳು

ಮೃಗಾಲಯದಲ್ಲಿರುವ ಒಂಟಿ ಪ್ರಾಣಿಗಳ ಜೊತೆಗೂಡಿಸುವಿಕೆ ಹಾಗೂ ಅನುಮೋದಿತ ಪ್ರಾಣಿ ಸಂಗ್ರಹಣಾ ಯೋಜನೆಯನ್ನು ಉತ್ಕೃಷ್ಟಗೊಳಿಸುವ ನಿಟ್ಟಿನಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಹೆಣ್ಣು ಚಿಂಪಾಂಜಿ ಮೈಸೂರು ಮೃಗಾಲಯಕ್ಕೆ ಆಗಮಿಸಿದೆ. ಜೂ.26ರಂದು ಸಿಂಗಾಪುರದಿಂದ 14 ವರ್ಷ ವಯಸ್ಸಿನ ರ್ಹಾ' ಎಂಬ ಹೆಸರಿನ ಹೆಣ್ಣು ಚಿಂಪಾಂಜಿ ಬಂದಿದ್ದು, ಪ್ರಸ್ತುತ ಅದನ್ನು ಬಂಧನದಲ್ಲಿರಿಸಿ ನಿಗಾವಹಿಸಲಾಗಿದೆ.

 ಮೈಸೂರು ಮೃಗಾಲಯದ ಪ್ರವೇಶ ಶುಲ್ಕ ಏರಿಕೆ ಮೈಸೂರು ಮೃಗಾಲಯದ ಪ್ರವೇಶ ಶುಲ್ಕ ಏರಿಕೆ

ಗುಜರಾತಿನ ಸಕ್ಕರ್ ‍ಬಾಗ್ ಮೃಗಾಲಯದಿಂದ ಬಂದಿದ್ದ 2 ಜೊತೆ ಭಾರತೀಯ ಸಿಂಹಗಳ ಪೈಕಿ ಒಂದು ಜೊತೆ ಸಿಂಹಗಳನ್ನು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ. ಎರಡು ಪ್ರಾಣಿಗಳ ಬದಲಿಯಾಗಿ ಮೈಸೂರು ಮೃಗಾಲಯದಿಂದ ರಾಣಿ ಎಂಬ ಹೆಸರಿನ ಒಂದು ಹೆಣ್ಣು ಸ್ಲಾತ್ ಕರಡಿಯನ್ನು ಜೂ.26ರಂದು ಬೆಂಗಳೂರು ವಿಮಾನ ಮಾರ್ಗದ ಮೂಲಕ ಸಿಂಗಾಪುರ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

Mysuru zoo welcomed chimpanzee and lions as new members

ಮೃಗಾಲಯದ ಪ್ರಾಣಿ ಸಂಗ್ರಹಕ್ಕೆ ಸೇರ್ಪಡೆಗೊಂಡ ಹೆಣ್ಣು ಚಿಂಪಾಂಜಿ ಹಾಗೂ ಎರಡು ಸಿಂಹಗಳು ಮೃಗಾಲಯ ವೀಕ್ಷಣೆಗೆ ಬರುವವರನ್ನು ಆಕರ್ಷಿಸಲಿವೆ.

English summary
Mysuru zoo has added a new attraction to the visitors as it received a Chimpanzee from Singapore Zoo and two Pairs of Lions from Gujarath zoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X