ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್ ಲೈನ್ ನಲ್ಲಿ ಖರೀದಿಸಿ ನಂತರ ಮೈಸೂರಿನ ಈ ಗೃಹಿಣಿ ಮಾಡುತ್ತಿದ್ದುದೇನು?

|
Google Oneindia Kannada News

ಮೈಸೂರು, ಡಿಸೆಂಬರ್ 21; ಆನ್‌ ಲೈನ್‌ ನಲ್ಲಿ ಖರೀದಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಅಲ್ಲಿ ದರ ಕಡಿಮೆ ಎಂದು ಖರೀದಿದಾರರೆಲ್ಲರೂ ಬಟ್ಟೆ, ಮೊಬೈಲ್‌, ಟಿ.ವಿ, ಕೊನೆಗೆ ತರಕಾರಿಯನ್ನೂ ಖರೀದಿಸುತ್ತಿದ್ದಾರೆ. ಖರೀದಿಯಲ್ಲಿ ಕೆಲವೊಮ್ಮೆ ಗ್ರಾಹಕರಿಗೆ ವಂಚನೆ ಆಗಿರುವ ಕುರಿತೂ ಕೇಳಿರುತ್ತೇವೆ. ಮೊಬೈಲ್‌ ಫೋನ್‌ ಆರ್ಡರ್‌ ಮಾಡಿದಾಗ ಕಲ್ಲು ತುಂಬಿದ ಬಾಕ್ಸ್‌ ಡೆಲಿವರಿ ಆಗಿರುವುದೂ ಇದೆ.

ಆದರೆ ಇಂಥ ಬಹುಪಾಲು ಪ್ರಕರಣಗಳಲ್ಲಿ ಕಂಪೆನಿಯ ಪ್ಯಾಕಿಂಗ್ ಅಥವಾ ಕೊರಿಯರ್ ಕಂಪೆನಿಯ ನೌಕರರು ಈ ಕೆಲಸವನ್ನು ಮಾಡಿರುವುದು ಕಂಡುಬಂದಿದೆ. ಇದು ಆಯಾ ಕಂಪೆನಿ ಗಮನಕ್ಕೆ ಬಂದ ಕೂಡಲೇ ಹೆಸರು ಹಾಳಾಗುತ್ತದೆ ಎಂಬ ಭಯದಿಂದ ಗ್ರಾಹಕರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ.

"ಮೂಡ"ಕ್ಕೆ ಸುಳ್ಳು ಮಾಹಿತಿ ನೀಡಿ ಸರ್ಕಾರಿ ನೌಕರ ಪಡೆದಿರುವ ಸೈಟುಗಳೆಷ್ಟು ಗೊತ್ತೆ?

ಕಂಪೆನಿಗಳ ಈ ಗ್ರಾಹಕಸ್ನೇಹಿ ನೀತಿಯನ್ನೇ ದುರುಪಯೋಗಪಡಿಸಿಕೊಂಡ ಚಾಲಾಕಿ ಮಹಿಳೆ ಅತಿ ಬುದ್ಧಿವಂತಿಕೆ ತೋರಿಸಿ ಪೊಲೀಸರ ಅತಿಥಿ ಆಗಿದ್ದಾರೆ. ಜಯಲಕ್ಷ್ಮಿಪುರಂ ನಿವಾಸಿ ಅಶ್ವಿನಿ ಮನೋರಮಾ ಎಂಬ ಹೆಸರಿನಿಂದ ಇದೇ ಡಿಸೆಂಬರ್‌ 9ರಂದು ಅಮೆಜಾನ್‌ ಕಂಪೆನಿಯಿಂದ ಜೀನ್ಸ್ ಪ್ಯಾಂಟ್ ಆರ್ಡರ್‌ ಮಾಡಿದ್ದರು. ಅದು ಡಿಸೆಂಬರ್‌ 18ಕ್ಕೆ ಡೆಲಿವರಿ ಆಗಿತ್ತು. ಆದರೆ ಪ್ಯಾಂಟ್ ಸರಿಯಾಗಿಲ್ಲ ಎಂದು ಅಶ್ವಿನಿ ಕೆಲವೇ ಗಂಟೆಗಳಲ್ಲಿ ಕಂಪೆನಿಗೆ ವಾಪಸ್‌ ಕಳಿಸಿದ್ದರು. ಕಂಪೆನಿಯ ತನಿಖಾ ತಂಡದ ಮ್ಯಾನೇಜರ್‌ ರಾಜಾ ರಾವ್‌ ಪರಿಶೀಲನೆ ನಡೆಸಿದಾಗ ಹೊಸ ಪ್ಯಾಂಟ್ ಬದಲಿಗೆ ಉಪಯೋಗಿಸಿದ ಹಳೆಯ ಬೇರೊಂದು ಕಂಪೆನಿಯ ಪ್ಯಾಂಟ್ ವಾಪಸ್‌ ಮಾಡಿರುವುದು ಬೆಳಕಿಗೆ ಬಂತು.

Mysuru Women Fraud Amazon By Ordering Online

ನಂತರ ಕೂಲಂಕಷವಾಗಿ ಪರಿಶೀಲಿಸಿದಾಗ ಈ ಮಹಿಳೆ ಕಳೆದ ಒಂದು ವರ್ಷದಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಒಟ್ಟು 48 ಆರ್ಡರ್‌ ಗಳನ್ನು ಅಮೆಜಾನ್‌ ಕಂಪೆನಿಗೆ ನೀಡಿದ್ದು, ಎಲ್ಲ ವಸ್ತುಗಳನ್ನೂ ಸರಿಯಿಲ್ಲ ಎಂದು ಹಿಂತಿರುಗಿಸಿರುವುದು ತಿಳಿದುಬಂದಿತು. ಮರುಪಾವತಿ ಕೂಡ ಪಡೆದುಕೊಂಡಿದ್ದು, ಕಂಪೆನಿಗೆ ಒಟ್ಟು 1.17 ಲಕ್ಷ ರೂಪಾಯಿ ನಷ್ಟವಾಗಿದ್ದು ಬೆಳಕಿಗೆ ಬಂತು. ಶುಕ್ರವಾರ ಇಲ್ಲಿನ ವಿವಿ ಪುರಂ ಪೊಲೀಸ್‌ ಠಾಣೆಯಲ್ಲಿ ಕಂಪೆನಿಯವರು ಮೊಕದ್ದಮೆ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

English summary
A mysuru woman took advantage of consumer friendly policy of an online company and frauded,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X