ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತೀಯ ವಿ.ವಿ.ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೈಸೂರು ವಿವಿಗೆ 54ನೇ ಸ್ಥಾನ

|
Google Oneindia Kannada News

ಮೈಸೂರು, ಏಪ್ರಿಲ್ 9:ಭಾರತೀಯ ವಿಶ್ವವಿದ್ಯಾಲಯಗಳ ರಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಮೈಸೂರು ವಿಶ್ವವಿದ್ಯಾಲಯ 54ನೇ ಸ್ಥಾನ ಪಡೆದಿದೆ. ದೇಶದ ಒಟ್ಟು 4,867 ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಗಳು 2019ರ ರ‍್ಯಾಂಕಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ವಿವಿ ಹಾಗೂ ಒಟ್ಟಾರೆ ರ‍್ಯಾಂಕಿಂಗ್‌ ವರ್ಗ ಸೇರಿದಂತೆ ಒಟ್ಟು 9 ವರ್ಗಗಳಲ್ಲಿ ಸ್ಥಾನವನ್ನು ನೀಡಲಾಗಿದ್ದು, ಕರ್ನಾಟಕ ರಾಜ್ಯದ ಸಾರ್ವಜನಿಕ ವಿವಿಗಳಲ್ಲಿ ಈ ಸ್ಥಾನ ಪಡೆದ ಮೊದಲ ವಿವಿ ಮೈಸೂರು ಆಗಿದೆ.

ಮೈಸೂರು ವಿವಿ ಕೆ.ಸೆಟ್ ಪರೀಕ್ಷೆಯಲ್ಲಿ 5,627 ಅಭ್ಯರ್ಥಿಗಳಿಗೆ ಅರ್ಹತೆಮೈಸೂರು ವಿವಿ ಕೆ.ಸೆಟ್ ಪರೀಕ್ಷೆಯಲ್ಲಿ 5,627 ಅಭ್ಯರ್ಥಿಗಳಿಗೆ ಅರ್ಹತೆ

ಕೇಂದ್ರ ಸರ್ಕಾರದ ಮಾನವ ಅಭಿವೃದ್ಧಿ ಸಚಿವಾಲಯ ಆಶ್ರಯದಲ್ಲಿ ಎನ್ಐಆರ್ಎಫ್ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾನಮಾನವನ್ನು ಗುರುತಿಸುವ ಮಾನದಂಡಗಳನ್ನು ರೂಪಿಸಿದ್ದು, ರ‍್ಯಾಂಕಿಂಗ್‌ ಪದ್ಧತಿಯನ್ನು 2016 ರಿಂದ ಎಂಹೆಚ್ ಆರ್ ಡಿ ಜಾರಿಗೆ ತಂದಿದ್ದು, ಪ್ರಸ್ತುತ ಇದು ನಾಲ್ಕನೇ ಬಾರಿಗೆ ನಡೆದ ರ‍್ಯಾಂಕಿಂಗ್‌ ಸ್ಪರ್ಧೆಯಾಗಿದೆ.

Mysuru university is ranked 54th in Indian top most university rankings list

ಕರ್ನಾಟಕ ವಿಶ್ವವಿದ್ಯಾಲಯಗಳ ಪೈಕಿ ಈ ರಾಂಕ್ ಪಡೆದಿರುವ ಏಕೈಕ ವಿಶ್ವವಿದ್ಯಾಲಯ ಇದಾಗಿದೆ. ದೇಶದ ಎಲ್ಲಾ ವಿವಿಗಳ ಪೈಕಿ 54 ನೇ ರಾಂಕ್, ಎಲ್ಲಾ ಶಿಕ್ಷಣ ಸಂಸ್ಥೆಗಳ ಪೈಕಿ 80ನೇ ರಾಂಕ್ ಲಭಿಸಿದೆ. ರಾಜ್ಯದ ವಿವಿಗಳ ಪೈಕಿ ಮೈಸೂರು ವಿವಿಗೆ ಮೊದಲ ಸ್ಥಾನ ಸಿಕ್ಕಿದೆ.

 ಪ್ರೊ.ಮಾನೆ ವಿರುದ್ಧದ ಕಿರುಕುಳ ಪ್ರಕರಣ: ಹೈಕೋರ್ಟ್ ನಿಂದ ಬಂತು ಖಡಕ್ ಆದೇಶ ಪ್ರೊ.ಮಾನೆ ವಿರುದ್ಧದ ಕಿರುಕುಳ ಪ್ರಕರಣ: ಹೈಕೋರ್ಟ್ ನಿಂದ ಬಂತು ಖಡಕ್ ಆದೇಶ

ದೇಶದ ಒಟ್ಟು 4867 ಸಂಸ್ಥೆಗಳು ಎನ್ ಐ ಆರ್ ಎಫ್ ಅಧ್ಯಯನಕ್ಕೆ ಒಳಪಡಿಸಿತ್ತು. ಬೋಧನೆ, ಕಲಿಕೆ ಹಾಗೂ ಸಂಶೋಧನೆ, ವೃತ್ತಿಪರತೆ, ಪದವೀಧರರ ಪ್ರಮಾಣ ಗ್ರಹಿಕೆ ಮಾನದಂಡಗಳನ್ನು ಅಧ್ಯಯನ ಮಾಡಿ ರಾಂಕುಗಳನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದೆ.

 ಪ್ರಥಮ ಡಿಜಿಟಲ್ ಯೂನಿವರ್ಸಿಟಿಯಾಗಲು ಪಣತೊಟ್ಟ ಮೈಸೂರು ವಿವಿ ಪ್ರಥಮ ಡಿಜಿಟಲ್ ಯೂನಿವರ್ಸಿಟಿಯಾಗಲು ಪಣತೊಟ್ಟ ಮೈಸೂರು ವಿವಿ

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಕುಲಪತಿ ಪ್ರೊಫೆಸರ್ ಹೇಮಂತ್ ಕುಮಾರ್ ಅವರು ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ.

English summary
Top most Indian University Ranks list is released and the University of Mysuru is ranked 54th. The country's 4867 top educational institutions and universities participated in the 2019 ranking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X