ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ ಪ್ರವೇಶಾತಿ, ಪರೀಕ್ಷಾ ಶುಲ್ಕ ದರ ದಿಢೀರ್ ಏರಿಕೆ

|
Google Oneindia Kannada News

ಮೈಸೂರು, ಏಪ್ರಿಲ್ 29: ರಾಜ್ಯ ಸರ್ಕಾರ ಮೈಸೂರು ವಿಶ್ವವಿದ್ಯಾನಿಲಯಕ್ಕೆ ನೀಡುತ್ತಿದ್ದ ಅನುದಾನದಲ್ಲಿ ಕಡಿತ ಮಾಡಿರುವ ಪರಿಣಾಮ ಅನುದಾನವನ್ನು ಸರಿದೂಗಿಸಲು ಪ್ರವೇಶ ಮತ್ತು ಪರೀಕ್ಷಾ ಶುಲ್ಕವನ್ನು ಶೇ. 10ರಷ್ಟು ಏರಿಕೆ ಮಾಡಲಾಗಿದೆ.

ರಾಜ್ಯ ಸರ್ಕಾರದಿಂದ ಬರುತ್ತಿದ್ದ ಅನುದಾನದಲ್ಲಿ ಕಳೆದ ವರ್ಷಕ್ಕಿಂತ 16 ಕೋಟಿ ಕಡಿತಗೊಂಡಿದ್ದು, ಇದನ್ನು ಸರಿದೂಗಿಸಲು ಮೈಸೂರು ವಿವಿ ಈ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಪ್ರವೇಶ ಮತ್ತು ಪರೀಕ್ಷಾ ಶುಲ್ಕ ಹೆಚ್ಚಿಸಿ ಆಂತರಿಕ ಮೌಲ್ಯದಿಂದ ಸಂಪನ್ಮೂಲ ಕ್ರೋಢಿಕರಣಕ್ಕೆ ಕ್ರಮ ತೆಗೆದುಕೊಂಡಿದೆ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರಿನ ಮಾನಸ ಗಂಗೋತ್ರಿಗೆ ತಟ್ಟಿದ ನೀರಿನ ಕೊರತೆಯ ಬಿಸಿಮೈಸೂರಿನ ಮಾನಸ ಗಂಗೋತ್ರಿಗೆ ತಟ್ಟಿದ ನೀರಿನ ಕೊರತೆಯ ಬಿಸಿ

ವಿಶ್ವವಿದ್ಯಾಲಯದ ನಿರ್ವಹಣೆಗೆ 180 -200 ಕೋಟಿ ಅನುದಾನದ ಅಗತ್ಯವಿದ್ದು, 160 ಕೋಟಿ ರೂ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿತ್ತು. ಈ ಪೈಕಿ 122 ಕೋಟಿ ರೂ ನೀಡಿದೆ. ಕಳೆದ ವರ್ಷ 130 ಕೋಟಿ ರೂ.ನೀಡಿದ್ದು ಈ ಸಲ ಉಂಟಾಗಿರುವ ಹಣದ ಕೊರತೆಯನ್ನು ನೀಗಿಸಲು ಈ ಕ್ರಮ ಅನಿವಾರ್ಯ ಎಂದು ಮೈಸೂರು ವಿವಿ ಪ್ರತಿಪಾದಿಸಿದೆ.

Mysuru University admission and exam fee rates have been increased

ಸರ್ಕಾರ ನೀಡಿರುವ ಈ ಅನುದಾನದಲ್ಲಿ ವಿವಿ ಕಾಯಂ ಸಿಬ್ಬಂದಿಗೆ ವೇತನ, ನಿವೃತ್ತಿಯಾಗುವವರಿಗೆ ಪಿಂಚಣಿ ನೀಡುವುದಕ್ಕೆ 75 ಕೋಟಿ ಖರ್ಚಾಗಲಿದೆ. ಜೊತೆಗೆ ಪ್ರಯೋಗಾಲಯ, ಹಾಸ್ಟೆಲ್ ಗಳ ನಿರ್ವಹಣೆ , ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ, 650 ಅತಿಥಿ ಉಪನ್ಯಾಸಕರಿಗೆ ವೇತನ ನೀಡುವುದಕ್ಕೆ ಬಳಸಬೇಕಾಗಿದೆ. ಸುಮಾರು 60 ಕೋಟಿ ರೂ.ಕೊರತೆ ಉಂಟಾಗಿದೆ.

 ಮೈಸೂರು ವಿವಿ ಕೆ.ಸೆಟ್ ಪರೀಕ್ಷೆಯಲ್ಲಿ 5,627 ಅಭ್ಯರ್ಥಿಗಳಿಗೆ ಅರ್ಹತೆ ಮೈಸೂರು ವಿವಿ ಕೆ.ಸೆಟ್ ಪರೀಕ್ಷೆಯಲ್ಲಿ 5,627 ಅಭ್ಯರ್ಥಿಗಳಿಗೆ ಅರ್ಹತೆ

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ವಿವಿಗೆ ಇನ್ನಷ್ಟು ಅನುದಾನ ನೀಡಲು ರಾಜ್ಯ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಲಾಗಿದೆ. ಶುಲ್ಕ ಪರಿಷ್ಕರಣೆ ಈಗಿನಿಂದಲೇ ಜಾರಿಗೆ ಬಂದಿದ್ದು, ಏ.24ರಂದು ವಿಶ್ವವಿದ್ಯಾಲಯದ ವೆಬ್ ಸೈಟ್ ನಲ್ಲಿ ಕುರಿತು ಮಾಹಿತಿ ಪ್ರಕಟಿಸಲಾಗಿದೆ. ಪ್ರತಿ ವರ್ಷ ಎ ಮತ್ತು ಬಿ ಸ್ಕೀಂ ಯೋಜನೆಯಡಿ ಪ್ರವೇಶಾತಿ ನೀಡಲಾಗುತ್ತಿದೆ. ಶುಲ್ಕ ಏರಿಕೆಯಿಂದ 2 ಕೋಟಿ ರೂ ಹೆಚ್ಚುವರಿಯಾಗಿ ಸಂಗ್ರಹವಾಗಲಿದೆ.

 ಪ್ರಥಮ ಡಿಜಿಟಲ್ ಯೂನಿವರ್ಸಿಟಿಯಾಗಲು ಪಣತೊಟ್ಟ ಮೈಸೂರು ವಿವಿ ಪ್ರಥಮ ಡಿಜಿಟಲ್ ಯೂನಿವರ್ಸಿಟಿಯಾಗಲು ಪಣತೊಟ್ಟ ಮೈಸೂರು ವಿವಿ

ಮೈಸೂರು ವಿವಿ ಅಧೀನ, ಸ್ನಾತಕ, ಸ್ನಾತಕೋತ್ತರ ಕೇಂದ್ರಗಳು , ಅಧ್ಯಯನ ಸಂಸ್ಥೆಗಳು, ವಿವಿ ಪ್ರಾದೇಶಿಕ ಕೇಂದ್ರಗಳಾದ ಮಂಡ್ಯ, ಹಾಸನ, ಚಾಮರಾಜನಗರದಲ್ಲಿರುವ ವಿವಿಧ ವಿಭಾಗಗಳ ಸ್ವಾಯತ್ತತೆಯ ಕಾಲೇಜುಗಳ ಪ್ರವೇಶ ಮತ್ತು ಪರೀಕ್ಷಾ ಶುಲ್ಕವನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ.

English summary
Mysuru University admission and exam fee rates have been increased. The state government has reduced the grant of Rs 16 crore to university. So the fee is increased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X