ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಳೆಯಿಂದ ರೈಲು ಸಂಚಾರ; ಮೈಸೂರಿನಲ್ಲಿ ಉಸ್ತುವಾರಿ ಸಚಿವರಿಂದ ಪರಿಶೀಲನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 21: ಶುಕ್ರವಾರದಿಂದ ಮೈಸೂರಿನಲ್ಲಿ ರೈಲು ಓಡಾಟ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು ರೈಲ್ವೇ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Recommended Video

ಏನ್ರೀ ಹೀಗಾ ನಡ್ಕೊಳ್ಳೋದು? ಹೊರ ರಾಜ್ಯದವರ ಜೊತೆ ಅಸಭ್ಯತೆ ತೋರಿದ ರೈಲ್ವೆ ಸಿಬ್ಬಂದಿ | Oneindia Kannada

ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ನಾಗೇಂದ್ರ ಕೂಡ ಸಚಿವರ ಜೊತೆ ಇದ್ದರು. ರೈಲ್ವೆ ಸೀನಿಯರ್ ಡಿವಿಶನ್ ಮ್ಯಾನೇಜರ್ ಆನಂದ್ ಭಾರ್ತಿ ಸಚಿವರಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಸ್ಯಾನಿಟೈಸರ್, ಪ್ರಯಾಣಕ್ಕೆ ಮಾಡಿಕೊಂಡಿರುವ ಸಿದ್ಧತೆ ಹಾಗೂ ಸ್ವಚ್ಛತೆ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ಸದ್ಯಕ್ಕೆ ಮೈಸೂರು -ಬೆಂಗಳೂರುವರೆಗೆ ಮಾತ್ರ ರೈಲು ಸಂಚಾರ ಮಾಡಲಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ; ಶುಕ್ರವಾರದಿಂದ ಅಂತರ ಜಿಲ್ಲಾ ರೈಲು, ವೇಳಾಪಟ್ಟಿ ಕರ್ನಾಟಕ; ಶುಕ್ರವಾರದಿಂದ ಅಂತರ ಜಿಲ್ಲಾ ರೈಲು, ವೇಳಾಪಟ್ಟಿ

ಮೈಮುಲ್ ಆರೋಪದ ಬಗ್ಗೆ ಇಲಾಖೆಯಿಂದ ತನಿಖೆ ನಡೆದಿದೆ: ಮೈಮುಲ್ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯು ಕಳೆದ ಆರೇಳು ತಿಂಗಳಿನಿಂದ ನಡೆದುಕೊಂಡು ಬಂದಿದೆ. ಅದನ್ನು ತಕ್ಷಣಕ್ಕೆ ಮಾಡಿದ್ದಲ್ಲ ಎಂದು ಇದೇ ವೇಳೆ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು. "ಆರೋಪ ಮಾಡಿದ ತಕ್ಷಣ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಪಡಿಸಲು ಸಾಧ್ಯವಿಲ್ಲ. ಇಲಾಖಾ ತನಿಖೆ ಆರಂಭವಾಗಿದೆ. ವರದಿ ಏನು ಬರುತ್ತದೆ ನೋಡೋಣ. ಅಲ್ಲಿ ಆರೋಪ ಸತ್ಯವಾದಲ್ಲಿ ಮುಂದಿನ ತನಿಖೆ ನಡೆಸಲೂ ತಿಳಿಸಿದ್ದೇವೆ" ಎಂದರು.

Mysuru To Bengaluru Train Will Start From Tomorrow

"ಸಾ.ರಾ.ಮಹೇಶ್ ಅವರನ್ನು ಕೇಳಿ ತನಿಖೆ ಮಾಡಿಸುವುದಲ್ಲ. ನಾವು ಇಲಾಖೆ ತನಿಖೆ ನಡೆಸುತ್ತಿದೆ. ಅದನ್ನು ರಿಜಿಸ್ಟ್ರಾರ್ ಅವರು ಕೂಲಂಕಶವಾಗಿ ಪರಿಶೀಲನೆ ಮಾಡುತ್ತಾರೆ. ಇದು ರೈತರ ಸಂಸ್ಥೆ. ಮೈಮುಲ್ ‌ನಲ್ಲಿ ನೌಕರರ ಕೊರತೆ ಇದೆ. ನೌಕರರಿಲ್ಲದೆ ಡೈರಿ ಕೆಲಸ ಮಾಡಕಾಗಲ್ಲ, ಅಂತ ಅಧ್ಯಕ್ಷರು ಹೇಳ್ತಾರೆ. ಅವ್ಯವಹಾರ ನಡೆದಿರೋದನ್ನು ಬಿಡುಗಡೆ ಮಾಡ್ತೀನಿ, ಮಾಡ್ತೀನಿ ಅಂತಿದಾರೆ. ಈ ರೀತಿ ಬ್ಲಾಕ್‌ ಮೇಲ್‌ ಮಾಡೋಬದಲು ಅವರ ಹತ್ತಿರ ಏನಿದೆ ಸಾರ್ವಜನಿಕವಾಗಿ ಇಡಲಿ" ಎಂದರು.

English summary
District incharge minister st somashekhar visited railway station today on behalfof mysuru bengaluru train will operate from tomorrow,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X