ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಲ್ಲದ ಆರೋಪಕ್ಕೆ ಬೆದರಿ ಹಿಂದೆ ಸರಿಯಲ್ಲ: ಹಿರೇಮಠ

|
Google Oneindia Kannada News

ಮೈಸೂರು, ಜೂ. 13: ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ತಮ್ಮ ಮೇಲೆ ಸಲ್ಲದ ಆರೋಪ ಮಾಡುತ್ತಿರುವವರನ್ನು ತರಾಟೆಗೆ ರತೆಗೆದುಕೊಂಡಿದ್ದಾರೆ. ವಿದೇಶದಿಂದ ಹಣ ತಂದು ಹಿರೇಮಠ ಐಷರಾಮಿ ಬದುಕು ನಡೆಸುತ್ತಿದ್ದಾರೆ ಎಂಬ ರಾಜ್ಯ ಸರ್ಕಾರದ ಸಚಿವರ ಆರೋಪಕ್ಕೆ ಮಾಹಿತಿ ಹಕ್ಕು ಹೋರಾಟಗಾರ ಖಾರವಾಗಿ ಉತ್ತರಿಸಿದ್ದಾರೆ.

ರಾಜ್ಯ ಸರ್ಕಾರ ಮತ್ತು ವಿವಿಧ ರಾಜಕಾರಣಿಗಳ ಹಗರಣಗಳನ್ನು ಬಯಲು ಮಾಡುತ್ತಿರುವುದರಿಂದ ನನ್ನ ತೇಯೋವಧೆ ಮಾಡಲು ಆರೋಪ ಮಾಡಲಾಗುತ್ತಿದೆ. ನಾನು ಸಮಾಜದ ಒಳಿತಿನ ಕೆಲಸಕ್ಕೆ ದೇಣಿಗೆ ಪಡೆಯುತ್ತಿದ್ದೇನೆ ವಿನಃ ಅದನ್ನು ನನ್ನ ಸ್ವಂತ ಬಳಕೆಗೆ ಉಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ಮೈಸೂರಿನ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.[ಕೆಜೆ ಜಾರ್ಜ್ ವಿರುದ್ಧ ಹಿರೇಮಠ್ ಕೊಟ್ಟ ದಾಖಲೆಗಳೇನು?]

sr hiremath

ನಾನು 12ರಿಂದ 14 ವರ್ಷಗಳ ಕಾಲ ವಿದೇಶದಲ್ಲಿದ್ದೆ. ಹೀಗಾಗಿ ಅವರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಹಾಗಂತ ನಾನು ಆ ದುಡ್ಡಿನಲ್ಲಿ ಐಷಾರಾಮಿಯಾದ ಜೀವನ ಮಾಡುತ್ತಿಲ್ಲ. ಇನ್ನು ಆಟೋ, ರೈಲಿನಲ್ಲೇ ಓಡಾಡುತ್ತಿದ್ದೇನೆ ಎಂದು ಹೇಳಿದರು.[ಒನ್ಇಂಡಿಯಾಕ್ಕೆ ಹಿರೇಮಠ ನೀಡಿದ್ದ ಸಂದರ್ಶನದ ಪೂರ್ಣಪಾಠ]

ಭ್ರಷ್ಟರ ವಿರುದ್ಧ ಸಾರಿರುವ ಸಮರವನ್ನು ಯಾವ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ. ನಮ್ಮ ಹೋರಾಟ ನ್ಯಾಉಸಮ್ಮತವಾಗಿದ್ದು ಇಂಥ ವಾಮಮಾರ್ಗ ಮತ್ತು ಒತ್ತಡಗಳಿಂದ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

English summary
Mysuru: I am taking money from foreign country because of social service Samaj Parivartana Samudaya president SR Hiremath said on Saturday, at Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X