ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಸವರನ್ ಗೋಲ್ಡ್ ಬಾಂಡ್ ಯೋಜನೆ ಪ್ರಾರಂಭ

|
Google Oneindia Kannada News

ಮೈಸೂರು,ಅಕ್ಟೋಬರ್.13: ಭಾರತೀಯ ಅಂಚೆ ಇಲಾಖೆ ವತಿಯಿಂದ 2020-2021 ಸಾಲಿನ ಸರಣಿ ಸವರನ್ ಗೋಲ್ಡ್ ಬಾಂಡ್ ಯೋಜನೆಯು ಇದೇ ಅಕ್ಟೋಬರ್ 12 ರಂದು ಪ್ರಾರಂಭವಾಗಿದ್ದು, ಗ್ರಾಹಕರು ಅಕ್ಟೋಬರ್ 16 ರೊಳಗೆ ಸಮೀಪದ ಅಂಚೆ ಕಚೇರಿಯ ಮೂಲಕ ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಿಕೊಳ್ಳಬಹುದು.

ಒಂದು ಗ್ರಾಂ ಚಿನ್ನದ ದರವನ್ನು 5,051 ರೂ. ಗೆ ನಿಗದಿಪಡಿಸಲಾಗಿದೆ. ಕನಿಷ್ಠ ಹೂಡಿಕೆ ಒಂದು ಗ್ರಾಂ ಆಗಿದ್ದು, ವ್ಯಕ್ತಿಗಳಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೆ.ಜಿ ಹಾಗೂ ಟ್ರಸ್ಟ್ ಮತ್ತು ಇದೇ ರೀತಿಯ ಘಟಕಗಳಿಗೆ 20 ಕೆ.ಜಿ (ಒಂದು ಆರ್ಥಿಕ ವರ್ಷದಲ್ಲಿ) ಗರಿಷ್ಠ ಹೂಡಿಕೆಯಾಗಿರುತ್ತದೆ.

ಏನಿದು ಸವರನ್ ಗೋಲ್ಡ್ ಬಾಂಡ್? ಏನು ಪ್ರಯೋಜನ?ಏನಿದು ಸವರನ್ ಗೋಲ್ಡ್ ಬಾಂಡ್? ಏನು ಪ್ರಯೋಜನ?

ಹೆಚ್ಚಿನ ಮಾಹಿತಿಗೆ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸುವುದು ಅಥವಾ ದೂರವಾಣಿ ಸಂಖ್ಯೆ 0821-2417308,2017307, 9845107947 ಗೆ ಕರೆ ಮಾಡುವಂತೆ ಅಂಚೆ ಇಲಾಖೆಯ ಮೈಸೂರು ವಿಭಾಗದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ವಾರ್ಷಿಕ ಶೇ.2.5 ರಷ್ಟು ನಿಶ್ಚಿತ ಬಡ್ಡಿ ಲಭ್ಯ

ವಾರ್ಷಿಕ ಶೇ.2.5 ರಷ್ಟು ನಿಶ್ಚಿತ ಬಡ್ಡಿ ಲಭ್ಯ

ಬಾಂಡ್ ಅವಧಿ 8 ವರ್ಷವಾಗಿದ್ದು, ಬಾಂಡ್ ಅವಧಿ ಮುಗಿದಾಗ ಮಾರುಕಟ್ಟೆಯಲ್ಲಿರುವ ಚಿನ್ನದ ದರ ಮೊತ್ತವನ್ನು ನೀಡಲಾಗುವುದು. ವಾರ್ಷಿಕ ಶೇ.2.5 ರಷ್ಟು ನಿಶ್ಚಿತ ಬಡ್ಡಿಯೂ ಲಭ್ಯವಿರುತ್ತದೆ. (ಅರ್ಧವಾರ್ಷಿಕ -ವರ್ಷಕ್ಕೆ ಎರಡು ಬಾರಿ) 5, 6, ಮತ್ತು 7ನೇ ವರ್ಷಗಳಲ್ಲಿಯೂ ಸಹ ನಿರ್ಗಮಿಸುವ ಅವಕಾಶವಿರುತ್ತದೆ. ಜೊತೆಗೆ ಸಾಲಗಳಿಗೆ ಮೇಲಾಧಾರವಾಗಿ ಉಪಯೋಗಿಸಬಹದು. ಈ ಬಾಂಡ್‌ಗಳನ್ನು ಮಾರಾಟ ಮಾಡಲು ಬಯಸಿದರೆ ನೀವು ಕನಿಷ್ಠ 5 ವರ್ಷಗಳವರೆಗೆ ಕಾಯಬೇಕಾಗುತ್ತದೆ

 10 ಗ್ರಾಂಗೆ 51,170 ರೂ. ಎಂದು ನಿಗದಿಪಡಿಸಿದೆ

10 ಗ್ರಾಂಗೆ 51,170 ರೂ. ಎಂದು ನಿಗದಿಪಡಿಸಿದೆ

ಈ ಬಾಂಡ್ ಯೋಜನೆಯಲ್ಲಿ ಸರ್ಕಾರವು ಚಿನ್ನದ ಬೆಲೆಯನ್ನು ಪ್ರತಿ ಗ್ರಾಂಗೆ 5,117 ರೂ. ಅಂದರೆ 10 ಗ್ರಾಂಗೆ 51,170 ರೂ. ಎಂದು ನಿಗದಿಪಡಿಸಿದೆ. ಆದರೆ ನೀವು ಅದನ್ನು ಆನ್‌ಲೈನ್‌ನಲ್ಲಿ ಖರೀದಿಸಿದರೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಚಿನ್ನದ ಬಾಂಡ್‌ಗಳನ್ನು ಖರೀದಿಸುವಾಗ 10 ಗ್ರಾಂ ಬೆಲೆ 50,670 ರೂ.

ಲಾಕ್‌ಡೌನ್ ನಿಂದ ಲಾಭ: ಚಿನ್ನದ ಕಳ್ಳಸಾಗಣೆ ಗಮನಾರ್ಹ ಇಳಿಕೆಲಾಕ್‌ಡೌನ್ ನಿಂದ ಲಾಭ: ಚಿನ್ನದ ಕಳ್ಳಸಾಗಣೆ ಗಮನಾರ್ಹ ಇಳಿಕೆ

 ಕನಿಷ್ಠ ಅನುಮತಿಸುವ ಹೂಡಿಕೆ 1 ಗ್ರಾಂ ಚಿನ್ನ

ಕನಿಷ್ಠ ಅನುಮತಿಸುವ ಹೂಡಿಕೆ 1 ಗ್ರಾಂ ಚಿನ್ನ

ಕನಿಷ್ಠ ಅನುಮತಿಸುವ ಹೂಡಿಕೆ 1 ಗ್ರಾಂ ಚಿನ್ನ. ಆರ್ಥಿಕ ವರ್ಷದಲ್ಲಿ ಅರ್ಹ ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳು ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ ನಾಲ್ಕು ಕೆಜಿವರೆಗೆ ಚಿನ್ನವನ್ನು ಪಡೆಯಬಹುದು. ಟ್ರಸ್ಟ್‌ಗಳು ಮತ್ತು ಅಂತಹುದೇ ಘಟಕಗಳು ಹಣಕಾಸು ವರ್ಷದಲ್ಲಿ 20 ಕಿ.ಗ್ರಾಂ ವರೆಗೆ ಖರೀದಿಸಬಹುದು. ಯೋಜನೆಯ ಮುಕ್ತಾಯ ಅವಧಿ 8 ವರ್ಷಗಳು.

Recommended Video

RR Nagar , by electionಗೆ JDS ಅಭ್ಯರ್ಥಿ ಘೋಷಣೆ | Oneindia Kannada
 ಅಂಚೆ ಕಚೇರಿಯಲ್ಲದೆ ಇತರೆಡೆಯೂ ಲಭ್ಯ

ಅಂಚೆ ಕಚೇರಿಯಲ್ಲದೆ ಇತರೆಡೆಯೂ ಲಭ್ಯ

ನಿಗದಿತ ವಾಣಿಜ್ಯ ಬ್ಯಾಂಕುಗಳಿಂದ (ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳು) ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಷೇರು ವಿನಿಮಯ ಕೇಂದ್ರಗಳಿಂದ ಬಾಂಡ್‌ಗಳನ್ನು ಖರೀದಿಸಬಹುದು.

English summary
Sovereign Gold Bond Scheme 2020-21 Series VII opened in major post offices in Mysuru. In this scheme Bond will be issued at an interest rate of 2.5 per cent for a tenor of 8 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X