ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಬೋಡಿಯಾ ಸಂಸತ್ ಚುನಾವಣೆಗೆ ಸಜ್ಜಾಗುತ್ತಿದೆ ಮೈಲಾಕ್ ಶಾಹಿ

ದೇಶ ವಿದೇಶಗಳಲ್ಲಿ ನಡೆವ ಚುನಾವಣೆಗೆ ಮೈಲ್ಲಾಕ್ ಶಾಹಿಯನ್ನು ನೀಡುತ್ತಿದ್ದ ಮೈಸೂರಿನ ಮೈಸೂರು ಪೈಂಟ್ಸ್ ಆಂಡ್ ವಾರ್ನಿಶ್ ಸಂಸ್ಥೆ ಇದೀಗ ಕಾಂಬೋಡಿಯಾದಲ್ಲಿ ನಡೆಯಲಿರುವ ಚುನಾವಣೆಗೂ ತನ್ನ ಶಾಹಿಯನ್ನು ರಫ್ತು ಮಾಡಲಿದೆ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 8: ಕಾಂಬೋಡಿಯಾದಲ್ಲಿ ಇದೇ ಜೂನ್ ತಿಂಗಳಿನಲ್ಲಿ ನಡೆಯಲಿರುವ ಚುನಾವಣೆಗೆ ನಮ್ಮ ಹೆಮ್ಮೆಯ ಮೈಸೂರಿನ ಮೈಲ್ಲಾಕ್ ಶಾಹಿ ಕಳೆ ನೀಡಲಿದೆ! ಹೌದು, ತೋರು ಬೆರಳಿನಲ್ಲಿ ಹಲವು ದಿನಗಳ ಕಾಲ ಅಳಿಸಲಾಗದ ಹಚ್ಚೆಯನ್ನು ಒತ್ತಿ, ನಾಗರಿಕನ ಆದ್ಯ ಕರ್ತವ್ಯವನ್ನು ಈ ಶಾಹಿ ನೆನಪಿಸಲಿದೆ!

ದೇಶ ವಿದೇಶಗಳಲ್ಲಿ ನಡೆವ ಚುನಾವಣೆಗೆ ಮೈಲ್ಲಾಕ್ ಶಾಹಿಯನ್ನು ನೀಡುತ್ತಿದ್ದ ಮೈಸೂರಿನ ಮೈಸೂರು ಪೈಂಟ್ಸ್ ಆಂಡ್ ವಾರ್ನಿಶ್ ಸಂಸ್ಥೆ ಎಲ್ಲರಿಗೂ ಚಿರಪರಿಚಿತವೇ. ಮಾರ್ಚ್ ತಿಂಗಳಿನಲ್ಲಿ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲೂ ಮೈಲ್ಲಾಕ್ ಶಾಹಿಯನ್ನೇ ಬಳಸಲಾಗಿತ್ತು ಎಂಬುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಗುಂಡ್ಲೆಪೇಟೆ ಮತ್ತು ನಂಜನಗೂಡು ಉಪಚುನಾವಣೆಯ ನಂತರ ಮೈಲ್ಲಾಕ್ ಶಾಹಿಯ ಬದಲು ಮಾರ್ಕರ್ ಪೆನ್ನುಗಳನ್ನು ಉತ್ಪಾದಿಸುವುದಾಗಿ ಹೇಳಿದ್ದ ಸಂಸ್ಥೆ ಇದೀಗ ಕಾಂಬೋಡಿಯಾದಲ್ಲಿ ನಡೆಯಲಿರುವ ಚುನಾವಣೆಗೆ ಮೈಲ್ಲಾಕ್ ಶಾಹಿಯನ್ನು ರಫ್ತು ಮಾಡಲು ಒಪ್ಪಂದ ಮಾಡಿಕೊಂಡಿದೆ.[ನೇಪಥ್ಯಕ್ಕೆ ಸೇರಿದ ಮೈಲ್ಲಾಕ್ ಚುನಾವಣಾ ಶಾಯಿ]

ಎಷ್ಟು ಬಾಟಲಿ ಸಪ್ಲೈ…?

ಎಷ್ಟು ಬಾಟಲಿ ಸಪ್ಲೈ…?

ಕಾಂಬೋಡಿಯಾ ಚುನಾವಣೆಗೆ ಮೈಸೂರು ಪೇಂಟ್ಸ್ ಆಂಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆ ಅಧಿಕೃತವಾಗಿ ಶಾಹಿ ಸಪ್ಲೈ ಮಾಡಲಿದೆ. 46,500 ಇಂಕ್ ಬಾಟಲ್ ಗಳನ್ನು ನಮ್ಮ ಮೈಲಾಕ್ ಪೂರೈಸಲು ಸಮ್ಮತಿ ಸೂಚಿಸಿದ್ದು, ಒಂದು ಬಾಟಲ್ ನಲ್ಲಿ 70 ಮಿ.ಲೀ. ಇಂಕ್ ಇರಲಿದ್ದು, ಪ್ರತಿ ಬಾಟಲಿಯ ಬೆಲೆ 17 (1093.61 ರೂ.) ಅಮೆರಿಕನ್ ಡಾಲರ್ ಆಗಿದೆ. ಈ ಇಂಕ್ ಮೇ 6 ರಂದು ಉತ್ಪಾದನೆಗೊಂಡಿದ್ದು ಶಾಹಿ ಬಾಟಲ್ ಗಳು ರಫ್ತಿಗಾಗಿ ಕಾದು ಕುಳಿತಿದೆ. ಈ ಸಂಬಂಧ ಕಾಂಬೋಡಿಯಾ ಚುನಾವಣಾ ಆಯೋಗ ಮೈಸೂರು ಶಾಹಿ ಕಂಪನಿಯೊಂದಿಗೆ 5 ಕೋಟಿ ರೂ. ಗಳ ಒಪ್ಪಂದ ಮಾಡಿಕೊಂಡಿದೆ.

ಸಂತಸದ ವಿಷಯ

ಸಂತಸದ ವಿಷಯ

ಇನ್ನು ಈ ಬಗ್ಗೆ ಸಂತಸ ವ್ಯಕ್ತಪಡಿಸುವ ಕಂಪನಿ ಅಧ್ಯಕ್ಷ ಎಚ್.ಎ.ವೆಂಕಟೇಶ್, "ನಾವು ಶಾಹಿ ಗುಣಮಟ್ಟವನ್ನು ಕಾಪಾಡಿಕೊಂಡು ಸರಕುಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುತ್ತೇವೆ. ಕಾಂಬೋಡಿಯಾದಿಂದ ಬೇಡಿಕೆ ಬರಲು ಕೂಡ ನಮ್ಮ ಕಂಪನಿಯ ಗುಣಪಟ್ಟವೇ ಕಾರಣ" ಎಂದು ಹೇಳುತ್ತಾರೆ. ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಮೈಸೂರಿನ ಈ ಕಂಪನಿ 10 ಮಿ.ಲೀ. ಸಾಮರ್ಥ್ಯದ ಒಟ್ಟು 4.30 ಲಕ್ಷ ಇಂಕ್ ಬಾಟಲಿಗಳನ್ನು ಪೂರೈಸಿತ್ತು. ಅಲ್ಲದೇ ನೋಟ್ ಬ್ಯಾನ್ ಸಂದರ್ಭದಲ್ಲಿ ದೇಶಾದ್ಯಂತ ಬ್ಯಾಂಕ್ ಗಳಿಗೂ ಇಂಕ್ ಬಾಟಲಿಗಳನ್ನು ಪೂರೈಸಿತ್ತು. ಈಗ ಹೊರ ರಾಷ್ಟ್ರಗಳ ಚುನಾವಣೆಗೂ ನಮ್ಮ ರಾಜ್ಯದ ಕಂಪನಿಯೊಂದು ಇಂಕ್ ಬಾಟಲ್ ಗಳನ್ನು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ.[ಪಂಚರಾಜ್ಯದ ಚುನಾವಣೆಗೆ ಮೈಸೂರಿನಿಂದ ಮಸಿ ಬಳಕೆ!]

ಬೇಡಿಕೆ ಈಡೇರಿಕೆಗೆ ತೆಗೆದುಕೊಂಡಿದ್ದು ಕೇವಲ 8 ದಿನ ಮಾತ್ರ

ಬೇಡಿಕೆ ಈಡೇರಿಕೆಗೆ ತೆಗೆದುಕೊಂಡಿದ್ದು ಕೇವಲ 8 ದಿನ ಮಾತ್ರ

"ಇದೇ ಜೂನ್ ತಿಂಗಳಿನಲ್ಲಿ ಕಾಂಬೋಡಿಯದಲ್ಲಿ ಪಾರ್ಲಿಮೆಂಟ್ ಚುನಾವಣೆಗೆ ದಿನಾಂಕ ನಿಗದಿಗೊಂಡಿದೆ.ಈ ಹಿನ್ನೆಲೆಯಲ್ಲಿ ಶಾಯಿ ಪೂರೈಸುವಂತೆ ಮೈಲ್ಲಾಕ್ ಸಂಸ್ಥೆಗೆ ಬೇಡಿಕೆ ಬಂದಿತ್ತು. ಅದರಂತೆ 7.0 ಮಿ.ಲೀ.ನ ಒಟ್ಟು 46,500 ಬಾಟಲ್ ಗಳನ್ನು ತಯಾರಿಸಲು ಏ.26 ರಿಂದ ಅಳಿಸಲಾಗದ ಶಾಯಿ ಉತ್ಪಾದನೆ ಆರಂಭಿಸಲಾಯಿತು. ಮೇ 5 ರಂದು ಈ ಕಾರ್ಯ ಸಂಪೂರ್ಣಗೊಂಡಿತು ಎನ್ನುತ್ತಾರೆ ವೆಂಕಟೇಶ್.[ನೋಟು ನಿಷೇಧದಿಂದ ಮೈಲಾಕ್ ಗೆ ಕೋಟ್ಯಂತರ ರುಪಾಯಿ ಆದಾಯ!]

ಮಾರ್ಕರ್ ಪೆನ್ನು ತಯಾರಿಸಲು ಮೈಲ್ಲಾಕ್ ಸಿದ್ಧ

ಮಾರ್ಕರ್ ಪೆನ್ನು ತಯಾರಿಸಲು ಮೈಲ್ಲಾಕ್ ಸಿದ್ಧ

ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಅಳಿಸಲಾಗದ ಶಾಹಿಯ ಮಾರ್ಕರ್ ಪೆನ್ನುಗಳನ್ನು ತಯಾರಿಸಲು ಮೈಲ್ಲಾಕ್ ಸಂಪೂರ್ಣ ಸಜ್ಜಾಗಿದೆ ಎಂದು ಮೈಲ್ಲಾಕ್ ' ಸಂಸ್ಥೆಯ ಅಧ್ಯಕ್ಷ ಎಚ್.ಎ.ವೆಂಕಟೇಶ್ ತಿಳಿಸಿದರು. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಇನ್ಮುಂದೆ ದೇಶದ ಯಾವುದೇ ಚುನಾವಣೆ ಸಂದರ್ಭದಲ್ಲೂ ಅಳಿಸಲಾಗದ ಶಾಹಿಯ ಮಾರ್ಕರ್ ಪೆನ್ನು ಬಳಕೆ ಕಡ್ಡಾಯ. ಈ ಹಿನ್ನೆಲೆಯಲ್ಲಿ ಮೈಲ್ಲಾಕ್ ಸಂಸ್ಥೆ ಇದನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಅಗತ್ಯ ಪೂರ್ವ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಒಂದು ಪೆನ್ನು, ಸಾವಿರ ಗುರುತು!

ಒಂದು ಪೆನ್ನು, ಸಾವಿರ ಗುರುತು!

ಬೇಡಿಕೆ ಬಂದಷ್ಟು ಮೈಲ್ಲಾಕ್ ಮಾರ್ಕರ್ ಪೆನ್ನುಗಳನ್ನು ತಯಾರಿಸಲು ಸಂಸ್ಥೆ ಸಿದ್ಧವಾಗಿದೆ. ಈ ಮಾರ್ಕರ್ ಪೆನ್ನುಗಳ ಬಳಕೆಯಿಂದ ಹಣ ಉಳಿತಾಯದ ಜತೆಗೆ ಬಳಸುವವರಿಗೂ ಅನುಕೂಲವಾಗಲಿದೆ. ಒಂದು ಪೆನ್ನಿನಿಂದ ಅಂದಾಜು 1000 ಮಂದಿಗೆ ಗುರುತು ಹಾಕಬಹುದಾಗಿದೆ.[ಚಿತ್ರಗಳಲ್ಲಿ : ಬ್ಯಾಂಕುಗಳಲ್ಲಿ ಬೆರಳುಗಳಿಗೆ ಅಂಟಿದ ಮಸಿ]

English summary
Mysuru's pride Mylac ink is exporting to Cambodia soon! The ink will be used for the election which will be scheduled on comming June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X