ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರೋಕ್ಷವಾಗಿ ಸುಮಲತಾ ಬೆಂಬಲಿಸಿದ ಯದುವೀರ್ ಒಡೆಯರ್

|
Google Oneindia Kannada News

Recommended Video

ಅಂಬರೀಷ್ ಅವರಿಗೆ ರಾಜಮನೆತನ ಎಂದಿಗೂ ಕೃತಜ್ಞವಾಗಿರುತ್ತದೆ..! | Oneindia kannada

ಮೈಸೂರು, ಏಪ್ರಿಲ್ 3: ಚುನಾವಣೆಯಲ್ಲಿ ಯಾವ ಪಕ್ಷದವರ ಜೊತೆಯೂ ಪ್ರಚಾರಕ್ಕೆ ಹೋಗುವುದಿಲ್ಲ. ಜೊತೆಗೆ ರಾಜಕೀಯ ಮಾಡುವುದಿಲ್ಲ. ಅಂಬರೀಶ್ ಅವರು ಅರಮನೆಯ ಕಷ್ಟದ ಸಂದರ್ಭದಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಅವರ ಸಹಾಯವನ್ನು ಮರೆಯುವಂತಿಲ್ಲವೆಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಪರ, ಯಾರ ಜೊತೆಯೂ ಪ್ರಚಾರಕ್ಕೆ ಹೋಗುವುದಿಲ್ಲ. ಅರಮನೆಗೆ ಬರುವವರಿಗೆ ಸ್ವಾಗತವಿದೆ. ಯಾರೂ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೋ ಅವರಿಗೆ ಅರಮನೆಯಿಂದ ಬೆಂಬಲ ಇರಲಿದೆ ಎಂದರು.

ಇದುವರೆಗೂ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಅಧಿಕ ಮತಗಳ ಅಂತರದಿಂದ ಗೆದ್ದವರ ವಿವರಇದುವರೆಗೂ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಅಧಿಕ ಮತಗಳ ಅಂತರದಿಂದ ಗೆದ್ದವರ ವಿವರ

ರಿಯಲ್ ಸ್ಟಾರ್ ಉಪೇಂದ್ರ ಭೇಟಿಯ ಕುರಿತು ಮಾತನಾಡಿದ ಅವರು, ಅದೊಂದು ಸೌಜನ್ಯದ ಭೇಟಿ ಭೇಟಿ ಅಷ್ಟೆ. ಅವರು ಪ್ರಜಾಕೀಯವೆಂದು ಹೊಸ ಪಕ್ಷ ಮಾಡಿದ್ದಾರೆ. ಅದರ ಕುರಿತು ಮಾಹಿತಿ ನೀಡಲು ಬಂದಿದ್ದರು ಎಂದರು.

Mysuru royal family is grateful for Ambarishs family

ನಟ ಅಂಬರೀಶ್ ನಿಮ್ಮ ಕುಟುಂಬಕ್ಕೆ ಹಳೆಯ ಪರಿಚಯ. ಅವರ ಪತ್ನಿ ಸುಮಲತಾ ಮಂಡ್ಯದಲ್ಲಿ ಚುನಾವಣೆಗೆ ನಿಂತಿದ್ದಾರೆ. ನಿಮ್ಮ ಬೆಂಬಲವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂಬರೀಶ್ ತುಂಬಾ ವರ್ಷದಿಂದಲೂ ಪರಿಚಯ. ಆದರೆ ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಯಾರಿಗೆ ಮತ ಹಾಕಬೇಕೆಂಬುದನ್ನು ಮಂಡ್ಯದ ಜನತೆ ತೀರ್ಮಾನ ಮಾಡುತ್ತಾರೆ. ಅವರಿಗೆ ಮೈಸೂರು ರಾಜಮನೆತನ ಎಂದಿಗೂ ಕೃತಜ್ಞವಾಗಿರುತ್ತದೆ ಎಂದು ತಿಳಿಸಿದರು.

 ಬಿಸಿಲಲ್ಲಿ ಸುತ್ತಾಡ್ಲಿ, ಕಷ್ಟ ಗೊತ್ತಾಗುತ್ತೆ: 'ಜೋಡೆತ್ತು'ಗಳಿಗೆ ಎಚ್‌ಡಿಕೆ ವ್ಯಂಗ್ಯ ಬಿಸಿಲಲ್ಲಿ ಸುತ್ತಾಡ್ಲಿ, ಕಷ್ಟ ಗೊತ್ತಾಗುತ್ತೆ: 'ಜೋಡೆತ್ತು'ಗಳಿಗೆ ಎಚ್‌ಡಿಕೆ ವ್ಯಂಗ್ಯ

ಇದಕ್ಕೂ ಮುನ್ನ ರಿಯಲ್ ಸ್ಟಾರ್ ಉಪೇಂದ್ರ ಅವರು ಮೈಸೂರು ಅರಮನೆಗೆ ಭೇಟಿ ನೀಡಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಜೊತೆ ಮಾತುಕತೆ ನಡೆಸಿದರು. ಚುನಾವಣಾ ಪೂರ್ವದಲ್ಲಿ ಉಪೇಂದ್ರ ಅವರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

English summary
Lok Sabha Elections 2019:Yaduveer Krishnadatta Chamaraja Wadiyar said, I'm not going to campaign with anyone for any party. But Mysore royal family is grateful for Ambarish's family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X