ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಸಂತ್ರಸ್ತರಿಗೆ 50 ಮನೆ ಕಟ್ಟಿಕೊಡಲು ರೋಟರಿ ತಂಡ ಸನ್ನದ್ಧ

|
Google Oneindia Kannada News

ಮೈಸೂರು, ನವೆಂಬರ್ 28 : ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ನಿರಾಶ್ರಿತರಿಗೆ ರೋಟರಿ ಸಂಸ್ಥೆ ವತಿಯಿಂದ 50 ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಸಹಾಯಹಸ್ತ ಚಾಚಲಾಗುವುದು ಎಂದು ರೋಟರಿ ಜಿಲ್ಲಾ ಗವರ್ನರ್ ಪಿ.ರೋಹಿನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ನಿರಾಶ್ರಿತರಾದವರಿಗೆ ಪ್ರತಿ ಮನೆಯನ್ನು 5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರೋಟರಿ ಸಂಸ್ಥೆ ಚರ್ಚಿಸಿದೆ.

ಕೊಡಗಿನ ಸಂತ್ರಸ್ತರಿಗೆ 'ಕುರುಕ್ಷೇತ್ರ' ಸಿನಿಮಾ ನೆರವು ಘೋಷಿಸಿದ ಮುನಿರತ್ನಕೊಡಗಿನ ಸಂತ್ರಸ್ತರಿಗೆ 'ಕುರುಕ್ಷೇತ್ರ' ಸಿನಿಮಾ ನೆರವು ಘೋಷಿಸಿದ ಮುನಿರತ್ನ

50 ಮನೆಗಳಲ್ಲಿ 10 ಮನೆಗಳನ್ನು ಅಂತಾರಾಷ್ಟ್ರೀಯ ರೋಟರಿ ನಿರ್ದೇಶಕ ಸಿ.ಭಾಸ್ಕರ್ ಅವರೊಬ್ಬರೇ ನಿರ್ಮಿಸಿ ಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದರು.

Mysuru Rotary planning to reconstruct 50 houses for Kodagu people

ಸದ್ಯಕ್ಕೆ ರೋಟರಿ ಸಂಸ್ಥೆಯೂ ಅಂಗನವಾಡಿಗಳಲ್ಲಿನ ಕುಂದು-ಕೊರತೆಗಳನ್ನು ನಿವಾರಿಸಲು ಯೋಚಿಸುತ್ತಿದೆ. ಜಿಲ್ಲಾರೋಟರಿ ವ್ಯಾಪ್ತಿಯಲ್ಲಿ ಅಂಗನವಾಡಿಗಳ ಸಮೀಕ್ಷೆ ಮಾಡಲಾಗಿದ್ದು, ಅವುಗಳು ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳ ಕಡೆಗೆ ಗಮನಹರಿಸಲಾಗಿದೆ ಎಂದರು.

'ಕೊಡಗಿಗೆ ನಮ್ಮೆಲ್ಲರ ಋಣ ಇದೆ, ಪ್ರಕೃತಿ ಮಾತೆ ಮುನಿಸಿಕೊಂಡಿದ್ದಾಳೆ''ಕೊಡಗಿಗೆ ನಮ್ಮೆಲ್ಲರ ಋಣ ಇದೆ, ಪ್ರಕೃತಿ ಮಾತೆ ಮುನಿಸಿಕೊಂಡಿದ್ದಾಳೆ'

ಅಂತಾರಾಷ್ಟ್ರೀಯ ರೋಟರಿ ನಿರ್ದೇಶಕ ಸಿ.ಭಾಸ್ಕರ್ ಮಾತನಾಡಿ, ರೋಟರಿಸಂಸ್ಥೆಯಲ್ಲಿ 35 ಸಾವಿರಕ್ಕಿಂತಲೂ ಹೆಚ್ಚು ರೋಟರಿ ಕ್ಲಬ್ ಗಳ ಮೂಲಕ 200 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ, ದುರ್ಬಲವರ್ಗದವರ ಏಳಿಗೆಗಾಗಿ ದುಡಿಯುತ್ತಿದೆ. ಇದು12 ಲಕ್ಷ ಸ್ವಯಂ ಸೇವಕರನ್ನು ಹೊಂದಿರುವ ಜಾಗತಿಕ ಸೇವಾ ಸಂಸ್ಥೆಯಾಗಿದೆ ಎಂದು ಹೇಳಿದರು.

ಪ್ರೇಕ್ಷಕರ ಮನಸೂರೆಗೊಂಡ ಕೊಡಗಿಗಾಗಿ ರಂಗಸಪ್ತಾಹ ಕಾರ್ಯಕ್ರಮಪ್ರೇಕ್ಷಕರ ಮನಸೂರೆಗೊಂಡ ಕೊಡಗಿಗಾಗಿ ರಂಗಸಪ್ತಾಹ ಕಾರ್ಯಕ್ರಮ

ರಾಜ್ಯದ ಮೈಸೂರು, ಚಾಮರಾಜನಗರ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 75 ಕ್ಲಬ್ ಗಳಲ್ಲಿ 5 ಸಾವಿರ ರೋಟರಿಯನ್ನರು ಶಕ್ತಿ ಮೀರಿ ಸಾರ್ವಜನಿಕರಿಗೆ ಸ್ವಯಂಪ್ರೇರಿತ ಸೇವೆಗಳನ್ನು ನೀಡುತ್ತಿದ್ದಾರೆ. ನಮ್ಮ ಸಮಾಜಮುಖಿ ಕೆಲಸಗಳಿಗೆ ಮಾಧ್ಯಮಗಳ ಸಹಕಾರವೂ ದೊರಕುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

English summary
Rotary club will construct 50 houses to a flood affected people of Kodagu by June – 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X