ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ 10 ತಿಂಗಳಲ್ಲಿ 515 ರಸ್ತೆ ಅಪಘಾತ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 22; ಹತ್ತು ತಿಂಗಳಲ್ಲಿ 515 ರಸ್ತೆ ಅಪಘಾತ. ಮೈಸೂರು ನಗರದಲ್ಲಿ ಬರೋಬ್ಬರಿ ಒಂದು ಡಜನ್ ಬ್ಲಾಕ್ ಸ್ಪಾಟ್‌ಗಳಿವೆ. ವಾಹನ ಸವಾರರೆ ಎಚ್ಚರ. ಈ ಬ್ಲಾಕ್‌ಗಳ ವ್ಯಾಪ್ತಿಯಲ್ಲಿ ಸಂಚರಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅವಘಡ ಗ್ಯಾರಂಟಿ.

ಮೈಸೂರು ನಗರ ಸಂಚಾರ ಪೊಲೀಸರು ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ, ಅಪಘಾತಗಳನ್ನು ನಿಯಂತ್ರಿಸಲು ನಾಮಲಕಗಳನ್ನು ಅಳವಡಿಸುವ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿ ಯಾವುದೇ ಬ್ಲಾಕ್ ಸ್ಪಾಟ್‌ಗಳಿಲ್ಲದೆ ಇದ್ದರೂ ನಗರ ಸಂಪರ್ಕಿಸುವ ಹೆದ್ದಾರಿಗಳಲ್ಲಿಯೇ ಬ್ಲಾಕ್ ಸ್ಪಾಟ್‌ಗಳಿರುವುದು ಆತಂಕಕಾರಿಯಾಗಿದೆ.

ಚೀನಾಗೆ ತಿರುಗೇಟು ನೀಡಲು ಚಾರ್ ಧಾಮ್ ಪ್ರದೇಶದಲ್ಲಿ ವಿಶಾಲ ರಸ್ತೆ ಚೀನಾಗೆ ತಿರುಗೇಟು ನೀಡಲು ಚಾರ್ ಧಾಮ್ ಪ್ರದೇಶದಲ್ಲಿ ವಿಶಾಲ ರಸ್ತೆ

ಸ್ಥಳೀಯ ವಾಹನ ಸವಾರರೊಂದಿಗೆ ಪ್ರವಾಸಿಗರು ಎಚ್ಚರಿಕೆ ವಹಿಸಬೇಕಾಗಿದೆ. ಸಂಚಾರ ನಿಯಮ ಪಾಲನೆ ಮಾಡುವಂತೆ ಜಾಗೃತಿ ಮೂಡಿಸುವುದರೊಂದಿಗೆ ಅಪಘಾತ ನಿಯಂತ್ರಣಕ್ಕೆ ನಾನಾ ಮುನ್ನೆಚ್ಚರಿಕೆ ಕ್ರಮ ಅನುಸರಿಸುತ್ತಿದ್ದರೂ ರಸ್ತೆ ಅಪಘಾತಗಳ ಪ್ರಮಾಣ ಕಡಿಮೆಯಾಗಿಲ್ಲ. ಅದಕ್ಕೆ ಕಳೆದ 10 ತಿಂಗಳ ಅಪಘಾತದ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ.

ಮೈಸೂರು ಜೈಲಿನಲ್ಲಿ ಕೈದಿಗಳಿಗೆ 'ಅಕ್ಷರ ಪಾಠ’ ಮೈಸೂರು ಜೈಲಿನಲ್ಲಿ ಕೈದಿಗಳಿಗೆ 'ಅಕ್ಷರ ಪಾಠ’

Mysuru Reported 515 Road Accident In 10 Months

ಏನಿದು ಬ್ಲಾಕ್ ಸ್ಪಾಟ್?: ಮೂರು ವರ್ಷಗಳ ಅವಧಿಯಲ್ಲಿ ಒಂದು ನಿರ್ದಿಷ್ಟ ಸ್ಥಳದ 500 ಮೀ. ಅಂತರದಲ್ಲಿ 3ರಿಂದ 5 ಮಂದಿ ಮೃತಪಟ್ಟಿದ್ದರೆ, 5ರಿಂದ 10 ಮಂದಿ ಗಾಯಗೊಂಡಿದ್ದರೆ ಅಂತಹ ಸ್ಥಳಗಳನ್ನು ಬ್ಲಾಕ್ ಸ್ಪಾಟ್‌ಗಳೆಂದು ಗುರುತಿಸಲಾಗುತ್ತದೆ.

 ಮೈಸೂರು ದಸರಾಗೆ ಖರ್ಚಾಗಿದ್ದೆಷ್ಟು? ಉಳಿತಾಯವಾಗಿದ್ದೆಷ್ಟು?; ಅಂಕಿ-ಅಂಶ ಇಲ್ಲಿದೆ ಮೈಸೂರು ದಸರಾಗೆ ಖರ್ಚಾಗಿದ್ದೆಷ್ಟು? ಉಳಿತಾಯವಾಗಿದ್ದೆಷ್ಟು?; ಅಂಕಿ-ಅಂಶ ಇಲ್ಲಿದೆ

"ನಗರದಲ್ಲಿರುವ ಅತಿ ಹೆಚ್ಚು ಅಪಘಾತಗಳು ನಡೆದಿರುವ ಸ್ಥಳಗಳನ್ನು ಬ್ಲಾಕ್ ಸ್ಪಾಟ್‌ಗಳೆಂದು ಗುರುತಿಸಿ, ಅಪಘಾತಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಾಡಲಾಗುತ್ತಿದೆ'' ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದ್ದಾರೆ.

ಸಂಚಾರ ಪೊಲೀಸರು ನಾನಾ ಸುರಕ್ಷತಾ ಕ್ರಮ ಕೈಗೊಂಡಿದ್ದರೂ ನಗರದ ಐದು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿಯಿಂದ ಅಕ್ಟೋಬರ್‌ವರೆಗೆ 515 ಅಪಘಾತಗಳು ಸಂಭವಿಸಿವೆ. 99 ಭೀಕರ ಅಪಘಾತ ಪ್ರಕರಣಗಳಲ್ಲಿ ಬರೋಬ್ಬರಿ 102 ಮಂದಿ ಮೃತಪಟ್ಟಿದ್ದಾರೆ. 416 ಗಂಭೀರವಲ್ಲದ ಪ್ರಕರಣಗಳಲ್ಲಿ 452 ಮಂದಿ ಗಾಯಗೊಂಡಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ವಿಧಿಸುವ ಕಾರ್ಯಾಚರಣೆಯನ್ನು ನಗರ ಸಂಚಾರ ಪೊಲೀಸರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಲಾಕ್‌ಡೌನ್ ಬಳಿಕ ಜನಜೀವನ ಸಹಜಗೊಳ್ಳುತ್ತಿದ್ದಂತೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ನಿರಂತರವಾಗಿ ತಪಾಸಣಾ ಕಾರ್ಯ ನಡೆಸುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದರೂ ವಾಹನ ಸವಾರರ ನಿರ್ಲಕ್ಷ್ಯ ಸಾಕಷ್ಟು ಅಪಘಾತಕ್ಕೆ ಕಾರಣವಾಗಿದೆ.

ನಗರದಲ್ಲಿರುವ ಬ್ಲಾಕ್ ಸ್ಪಾಟ್‌ಗಳು; ನಂಜನಗೂಡು ರಸ್ತೆಯ ಎಂಪಿಎಂಸಿ ಮಾರುಕಟ್ಟೆ ಬಳಿ, ಗಣಪತಿ ಸಚ್ಚಿದಾನಂದ ಆಶ್ರಮದ ಎದುರು, ಎನ್. ಆರ್. ಮೊಹಲ್ಲಾ ಶ್ರೀಯಾ ಕಂರ್ಟ್ ಬಳಿ, ಬನ್ನೂರು ರಸ್ತೆಯ ದೇವೇಗೌಡ ಸರ್ಕಲ್, ನರಸೀಪುರ ರಸ್ತೆಯ ತಿರುಮಲ ಟವರ್‌ನಿಂದ ಸರ್ಧಾರ್ ವಲ್ಲಭಬಾಯಿ ಪಟೇಲ್ ನಗರದ ಗೇಟ್.

ರಿಂಗ್ ರಸ್ತೆ ಜಂಕ್ಷನ್ ತಿರುಮಲ ಫಾರಂ ಬಳಿ. ಹೂಟಗಳ್ಳಿಯ ಸಿಗ್ನಲ್ ಲೈಟ್. ಎಸ್‌ಆರ್‌ಎಸ್ ಕಾಲನಿಯಿಂದ ಯಶಸ್ವಿನಿ ಕಲ್ಯಾಣ ಮಂಟಪದವರೆಗೆ. ಹುಣಸೂರು ರಸ್ತೆಯ ಬಾಲ ಏಸು ಚರ್ಚ್‌ನಿಂದ ರೂಸ್ಟ್ ಹೊಟೇಲ್‌ವರೆಗೆ. ಕೆಆರ್‌ಎಸ್ ರಸ್ತೆಯ ರಾಯಲ್ ಇನ್ ಜಂಕ್ಷನ್. ಹುಣಸೂರು ರಸ್ತೆಯ ಪ್ರೈಂ ರೆಸಿಡೆನ್ಸ್‌ನಿಂದ ದಕ್ಷ ಪಿಯು ಕಾಲೇಜುವರೆಗೆ. ರಿಂಗ್ ರಸ್ತೆಯಿಂದ ತಿರುಮಲ ಟ್ರಸ್ಟ್‌ ತನಕ.

ಜಾಗೃತಿ ಫಲಕ ಅಳವಡಿಕೆ: ಬ್ಲಾಕ್ ಸ್ಪಾಟ್‌ಗಳೆಂದು ಗುರುತಿಸಿರುವ ಸ್ಥಳಗಳಲ್ಲಿ ವಾಹನ ಸವಾರರಿಗೆ ಅರಿವು ಮೂಡಿಸಲು ಜಾಗೃತಿ ಫಲಕಗಳನ್ನು ಅಳವಡಿಸುವ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಕೆಲವೆಡೆ ಬ್ಯಾರಿಕೇಡ್ ಅಳವಡಿಸಿ ವಾಹನ ವೇಗ ನಿಯಂತ್ರಿಸಲಾಗುತ್ತಿದೆ.

English summary
Mysuru city reported 515 road accident in 10 months. Traffic police identified more than 12 block spot in the various place of city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X