ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಷ್ಠಿತ ಮೈಸೂರು ರೈಲ್ವೆ ನಿಲ್ದಾಣಕ್ಕೆ ಐಎಸ್ಓ ಮಾನ್ಯತೆ

|
Google Oneindia Kannada News

ಮೈಸೂರು, ಜೂನ್ 25: ನೈರುತ್ಯ ವಲಯ ರೈಲ್ವೆ ವಿಭಾಗದ ನಿಲ್ದಾಣಗಳಲ್ಲಿ ಮೈಸೂರು ರೈಲ್ವೆ ನಿಲ್ದಾಣ ಉತ್ತಮ ಪರಿಸರಸ್ನೇಹಿ ವಾತಾವರಣ ಹೊಂದಿರುವ ಕಾರಣಕ್ಕೆ ಐಎಸ್ಒ ಪ್ರಮಾಣಪತ್ರ ಪಡೆದುಕೊಂಡಿದೆ. ರೈಲ್ವೆ ಮಂಡಳಿಯು ದೇಶಾದ್ಯಂತ 37 ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಪರಿಸರಸ್ನೇಹಿ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲು ಗುರುತಿಸಿತ್ತು. ಮೈಸೂರು ರೈಲ್ವೆ ನಿಲ್ದಾಣವೂ ಅವುಗಳಲ್ಲಿ ಒಂದಾಗಿದೆ.

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಸಾವಿಗೆ ಕಾರಣ ಇದೂ ಇರಬಹುದು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಸಾವಿಗೆ ಕಾರಣ ಇದೂ ಇರಬಹುದು

ವಿಭಾಗೀಯ ಪರಿಸರ ಅಧಿಕಾರಿ ಬ್ರಿಜ್ ಮೋಹನ್ ನೇತೃತ್ವದಲ್ಲಿ ಪರಿಸರ ಮತ್ತು ಮನೆಗೆಲಸ ನಿರ್ವಹಣಾ ವಿಭಾಗವು ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಿದೆ. ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಗುಣಮಟ್ಟ ನಿರ್ವಹಣಾ ವ್ಯವಸ್ಥೆ, ಪರಿಸರ ನಿರ್ವಹಣಾ ವ್ಯವಸ್ಥೆ ಮತ್ತು ಸುರಕ್ಷತಾ ನಿರ್ವಹಣಾ ವ್ಯವಸ್ಥೆ- ಈ ವಿಷಯಗಳ ಆಧಾರದ ಮೇಲೆ ಐಎಸ್ಒ ಪ್ರಮಾಣ ಪತ್ರ ನೀಡಲಾಗುತ್ತದೆ. 9001 ಗುಣಮಟ್ಟ ನಿರ್ವಹಣಾ ವ್ಯವಸ್ಥೆ, ಐಎಸ್ಒ: 14001 ಪರಿಸರ ನಿರ್ವಹಣಾ ವ್ಯವಸ್ಥೆ ಮತ್ತು ಐಎಸ್ಒ: 45001 ಸುರಕ್ಷತಾ ನಿರ್ವಹಣಾ ವ್ಯವಸ್ಥೆ ಎಂಬ 3 ಐಎಸ್ಒ ಪ್ರಮಾಣಪತ್ರಗಳನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

Mysuru Railway station got ISO Certificate

ಮೈಸೂರು ವಿಭಾಗದ 30 ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯವನ್ನು ಸದ್ಯದಲ್ಲಿ ವಿಸ್ತರಿಸಲಾಗುವುದು. ಸಚಿವಾಲಯ ತನ್ನ ನೂರು ದಿನಗಳ ಕ್ರಿಯಾ ಯೋಜನೆಯಲ್ಲಿ ದೇಶಾದ್ಯಂತ ಹಲವಾರು ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಒದಗಿಸಲು ಪ್ರಸ್ತಾಪಿಸಿದೆ. ಮೈಸೂರು ರೈಲ್ವೆ ವಿಭಾಗದಲ್ಲಿ ಪ್ರಸ್ತುತ 55ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಈಗಾಗಲೇ ವೈಫೈ ಸೌಲಭ್ಯ ಕಲ್ಪಿಸಲಾಗಿದ್ದು, 2ನೇ ಹಂತದಲ್ಲಿ 30 ರೈಲ್ವೆ ನಿಲ್ದಾಣಗಳಿಗೆ ವಿಸ್ತರಿಸಲಾಗುತ್ತಿದೆ. ಸಾಗರಕಟ್ಟೆ, ಹೊಸ ಅಗ್ರಹಾರ, ನರಿಮೊಗರು, ಅಮ್ಮಸಂದ್ರ, ದೇವನೂರು, ಚಿಕ್ಕಮಗಳೂರು, ಸಾಸಲು, ಕರಜಗಿ, ತಳಕು ಮತ್ತು ಮೊಳಕಾಲ್ಮೂರು ರೈಲ್ವೆ ನಿಲ್ದಾಣಗಳು ಹೊಸದಾಗಿ ವೈಫೈ ಸೌಲಭ್ಯ ಹೊಂದಲಿವೆ.

English summary
Mysuru Railway station got ISO Certificate. This has become the first railway station in South Western Railway to receive the ISO certificate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X