ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲಿನಲ್ಲಿ ನಗದು, ಚಿನ್ನ ಎಗರಿಸುತ್ತಿದ್ದ ಖದೀಮ ಅಂತೂ ಸೆರೆ

|
Google Oneindia Kannada News

ಮೈಸೂರು, ಮೇ 8:ಕೆಲವು ದಿನಗಳಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರ ನಗದು ಮತ್ತು ಚಿನ್ನಾಭರಣವನ್ನು ದೋಚುತ್ತಿದ್ದ ದರೋಡೆಕೋರನನ್ನು ಮೈಸೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕಮಲಾನಗರ ನಿವಾಸಿ ಗಂಗಾಧರ ಎಂಬಾತನನ್ನು ಮೈಸೂರು ರೈಲ್ವೆ ಪೊಲೀಸರು ಬಂಧಿಸಿದ್ದು, ಈತನಿಂದ 1.2 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 4,270 ನಗದನ್ನು ವಶಪಡಿಸಿಕೊಂಡಿದ್ದಾರೆ. ಮೇ 5ರಂದು ರತ್ನಮ್ಮ ಅವರು ಮೈಸೂರಿನಿಂದ ಬೆಂಗಳೂರಿಗೆ ಟಿಪ್ಪು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆರೋಪಿ ಗಂಗಾಧರ ವ್ಯಾನಿಟಿ ಬ್ಯಾಗ್‌ನ್ನು ರತ್ನಮ್ಮ ಅವರಿಂದ ಕಿತ್ತುಕೊಂಡು ಪರಾರಿಯಾಗಿದ್ದ. ಈ ಕುರಿತು ಮಹಿಳೆಯು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.

ರೈಲಿನಲ್ಲಿ ಪ್ರಯಾಣಿಕರಂತೆ ಬಂದು ಏನೇನು ಕಳ್ಳತನ ಮಾಡ್ತಾರೆ ಗೊತ್ತಾ?ರೈಲಿನಲ್ಲಿ ಪ್ರಯಾಣಿಕರಂತೆ ಬಂದು ಏನೇನು ಕಳ್ಳತನ ಮಾಡ್ತಾರೆ ಗೊತ್ತಾ?

ಕಳ್ಳನ ಪತ್ತೆಗೆ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಎಸ್.ಗುಳೇದ ವಿಶೇಷ ತಂಡವೊಂದನ್ನು ರಚಿಸಿದ್ದರು. ಮಂಗಳವಾರ ಬೆಳಗ್ಗೆ ಕಾವೇರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಆರೋಪಿಯು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಈ ವೇಳೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ನಡೆಸಿರುವುದು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Mysuru railway police arrested thieves at rail

ಇಬ್ಬರು ಸರಗಳ್ಳರ ಬಂಧನ

ಕಳವು ಮಾಡಿದ್ದ ಚಿನ್ನದ ಸರವನ್ನು ಮಾರಾಟ ಮಾಡಲೆತ್ನಿಸಿದ ಇಬ್ಬರು ಕಳ್ಳರು ವಿ.ವಿ.ಪುರಂ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

 ಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತು ಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತು

ಶ್ರೀರಂಗಪಟ್ಟಣ ನಿವಾಸಿ ಆಸೀಫ್ (21) ಹಾಗೂ ತುಮಕೂರು ಜಿಲ್ಲೆಯ ಗಿಡಗನಹಳ್ಳಿ ಗ್ರಾಮದ ನಿವಾಸಿ ಜಿ.ಡಿ.ಜಗದೀಶ್ (28) ಬಂಧಿತ ಆರೋಪಿಗಳು. ಇವರಿಂದ 75 ಸಾವಿರ ಮೌಲ್ಯದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಜಯನಗರದ ನಿವಾಸಿ ಸುಮಾ ಎಂಬುವವರಿಂದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸರವನ್ನು ಮಂಗಳವಾರ ಕಾಳಿದಾಸ ರಸ್ತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮಫ್ತಿಯಲ್ಲಿದ್ದ ಪೊಲೀಸರ ಬಲೆಗೆ ಬಿದ್ದಿದ್ದಾರೆ.

English summary
Mysuru railway police have been arrested 2 robbers who have stolen the cash and jewelry of a women traveling in train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X