ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರೈಲ್ವೆ ಮ್ಯೂಸಿಯಂ ವೀಕ್ಷಣೆ ಇನ್ನೂ ವಿಳಂಬ

|
Google Oneindia Kannada News

ಮೈಸೂರು, ಜೂನ್ 18: ಹೆರಿಟೇಜ್ ಸಿಟಿಯ ಪ್ರಮುಖ ಆಕರ್ಷಣೆಯಾದ ಮೈಸೂರಿನ ರೈಲ್ವೆ ಮ್ಯೂಸಿಯಂ ಸಾವರ್ಜನಿಕರ ವೀಕ್ಷಣೆಗೆ ಅಲಭ್ಯವಾಗಿದೆ. ನಗರದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಹಾಗೂ ಚಿಣ್ಣರ ಅಚ್ಚುಮೆಚ್ಚಿನ ತಾಣವೆಂದೇ ಹೆಸರಾದ ಈ ಮ್ಯೂಸಿಯಂ ವೀಕ್ಷಣೆಗೆ ಇನ್ನೂ ಕಾಲಕೂಡಿ ಬಂದಿಲ್ಲ.

ಕೆ.ಆರ್‌.ಎಸ್. ರಸ್ತೆಯಲ್ಲಿನ ಸಿಎಫ್ ‌ಟಿಆರ್ ‌ಐ ಎದುರು ಇರುವ ಭಾರತೀಯ ರೈಲ್ವೆ ಮ್ಯೂಸಿಯಂ ಅನ್ನು ಉನ್ನತೀಕರಿಸುವ ಮೂಲಕ ಮತ್ತಷ್ಟು ಆಕರ್ಷಣೀಯಗೊಳಿಸಲು ನೈರುತ್ಯ ರೈಲ್ವೆ ಇಲಾಖೆ 2 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಿತ್ತು. ರೈಲ್ವೆ ವಸ್ತು ಸಂಗ್ರಹಾಲಯವನ್ನು ಉನ್ನತೀಕರಿಸಲು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಮಾರ್ಚ್‌ 7ರಿಂದ ಮೂರು ತಿಂಗಳುಗಳವರೆಗೆ, ಅಂದರೆ ಜೂನ್ 7ರವರೆಗೆ ರಜೆ ಘೋಷಿಸಲಾಗಿತ್ತು. ಆದರೆ ಇನ್ನೂ ಮ್ಯೂಸಿಯಂ ಆರಂಭಗೊಂಡಿಲ್ಲ.

 30 ರೈಲುಗಳ ಸಂಚಾರ ರದ್ದು; ಮೈಸೂರಿನಲ್ಲಿ ಪ್ರಯಾಣಿಕರ ಪರದಾಟ 30 ರೈಲುಗಳ ಸಂಚಾರ ರದ್ದು; ಮೈಸೂರಿನಲ್ಲಿ ಪ್ರಯಾಣಿಕರ ಪರದಾಟ

ಮ್ಯೂಸಿಯಂನಲ್ಲಿ ಮಕ್ಕಳು ಓಡಾಡಲು ವಿಶಾಲ ಪ್ರಾಂಗಣ, ಸುಂದರ ಫುಟ್‌ಪಾತ್, ಆಟವಾಡಲು ಪ್ರತ್ಯೇಕ ಸ್ಥಳ, ಆಟಿಕೆಗಳು, ಕ್ಲಾಕ್‌ ಟವರ್‌ ನಿರ್ಮಿಸಲಾಗುತ್ತಿದೆ. ಪ್ರವೇಶ ದ್ವಾರವನ್ನು ಅತ್ಯಾಕರ್ಷಕವಾಗಿಸುವ ಕಾಮಗಾರಿ ನಡೆಸಲಾಗುತ್ತಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗುತ್ತಿದೆ.

Mysuru railway museum has been closed since 3 months

ಭಾರತೀಯ ರೈಲ್ವೆ 1979ರಲ್ಲಿ ಮ್ಯೂಸಿಯಂ ಸ್ಥಾಪಿಸಿತು. ದೇಶದಲ್ಲಿ ಇರುವುದು ಎರಡೇ ರೈಲ್ವೆ ಮ್ಯೂಸಿಯಂ. ಒಂದು, ದೆಹಲಿಯಲ್ಲಿರುವ ನ್ಯಾಷನಲ್‌ ರೈಲ್ವೆ ಮ್ಯೂಸಿಯಂ, ಮತ್ತೊಂದು ಮೈಸೂರಿನಲ್ಲಿರುವ ಈ ಮ್ಯೂಸಿಯಂ. ವಿಂಟೇಜ್ ಲೋಕೋಮೋಟರ್ ಗಳನ್ನು ಹೊರಗೆ ಪ್ರದರ್ಶನಕ್ಕಿಟ್ಟಿರುವ ಏಕೈಕ ಮ್ಯೂಸಿಯಂ ಎಂದರೆ ಮೈಸೂರಿನ ರೈಲು ವಸ್ತು ಸಂಗ್ರಹಾಲಯ ಮಾತ್ರ. ಸದ್ಯ ಇದು ಪ್ರವಾಸಿಗರಿಗೆ ಇದು ಲಭ್ಯವಾಗಿಲ್ಲ.

English summary
Mysuru railway museum has been closed since 3 months for renovation work. The Southwest Railway Department has started work at a cost of Rs 2 crore. so it announced to close museum from March 7 to June 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X