• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರಗಳ್ಳರ ಹೆಡೆಮುರಿಕಟ್ಟಲು ಮೈಸೂರು ಪೊಲೀಸರಿಂದ ಆಪರೇಷನ್ ಫಾಸ್ಟ್ ಟ್ರ್ಯಾಕ್

|

ಮೈಸೂರು, ಮೇ 4 : ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳರ ಹಾವಳಿಯನ್ನು ತಡೆಗಟ್ಟುವುದು, ಪೊಲೀಸರಿಗೆ ಒಂದು ಸವಾಲಿನ ಕೆಲಸವಾಗಿ ಪರಿಣಮಿಸಿದೆ.

ಈ ನಡುವೆ ಕಳೆದೆರಡು ದಿನಗಳ ಹಿಂದೆ ಒಂದೇ ದಿನ ನಗರದಲ್ಲಿ ಏಳು ಕಡೆ ಸರಗಳವು ಪ್ರಕರಣ ನಡೆದಿತ್ತು. ಇದನ್ನು ತಡೆಗಟ್ಟಲು ಮೈಸೂರು ಖಾಕಿ ಪಡೆ ಆಪರೇಷನ್ ಫಾಸ್ಟ್ ಟ್ರ್ಯಾಕ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಸರಗಳ್ಳರ ಹಾವಳಿ:ಒಂದೇ ದಿನ 5 ಕಡೆ ಕಳ್ಳತನ

ನಿನ್ನೆ ಬೆಳಗ್ಗೆಯಿಂದಲೇ ನಗರದಾದ್ಯಂತ ಕಟ್ಟೆಚ್ಚರ ವಹಿಸಿರುವ ಪೊಲೀಸರು ವಾಹನಗಳ ಮೂಲಕ ತಪಾಸಣೆ ನಡೆಸುತ್ತಿದ್ದಾರೆ. ಸರಗಳ್ಳತನ ನಡೆದ ಸ್ಥಳಗಳಿಗೆ ನಗರ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ಸಹ ನಡೆಸಿದ್ದಾರೆ.

ಜನನಿಬಿಡ ಪ್ರದೇಶದಲ್ಲಿಯೇ ಸರಗಳ್ಳತನ ನಡೆದಿದ್ದು ರಸ್ತೆಯ ಇಕ್ಕೆಲಗಳಲ್ಲಿರುವ ಮಳಿಗೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಗರುಡ ವಾಹನದ ಮೈಕ್ ಮೂಲಕ ಸರಗಳ್ಳರ ಬಗ್ಗೆ ಜಾಗೃತಿ ವಹಿಸುವಂತೆ ನಡೆಸುತ್ತಿದ್ದಾರೆ.

ಕಾರ್ಯಾಚರಣೆಗೆ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸರನ್ನು ಬಳಸಿಕೊಳ್ಳಲಾಗಿದೆ. ನಗರದ ಪ್ರತಿ ರಸ್ತೆಯಲ್ಲೂ ವಾಹನ ಸವಾರರನ್ನು ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ. ವಾಹನ ಸಂಖ್ಯೆ , ಮಾಲೀಕನ ಹೆಸರುಗಳನ್ನು ಪೊಲೀಸರು ನೋಂದಣಿ ಮಾಡುತ್ತಿದ್ದಾರೆ. ರೆಡ್ ಪಲ್ಸರ್ ಆಕ್ಟಿವಾ ಹೋಂಡಾ ಹಾಗೂ ಕರಿಷ್ಮಾ ಬೈಕ್ ಗಳನ್ನು ಗುರಿಯಾಗಿರಿಸಿಕೊಂಡು ತಪಾಸಣೆ ನಡೆಸಲಾಗುತ್ತಿದೆ.

ಬೈಕ್ ಸವಾರರೇ ಎಚ್ಚರ:ಚಾಮರಾಜನಗರದಲ್ಲಿ ಶುರುವಾಗಿದೆ ಕಳ್ಳರ ಹಾವಳಿ

ಇನ್ನು ಸರಗಳ್ಳತನ ನಡೆಸಿದವರು ಮಹಾರಾಷ್ಟ್ರದ ಮೂಲದ ಕಳ್ಳರ ಗ್ಯಾಂಗ್ ಎಂದು ಪತ್ತೆಯಾಗಿದ್ದು, ನಯವಾಗಿ ಹಿಂದಿಯಲ್ಲಿ ಮಾತನಾಡಿ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರಿಂದ ಸರಗಳನ್ನು ಕದ್ದು ಪರಾರಿಯಾಗುತ್ತಾರೆ. ಒಮ್ಮೆ ನಗರದ ಐದಾರು ಕಡೆ ಈ ಈ ರೀತಿ ನಡೆಸಿ ಪರಾರಿಯಾಗುತ್ತಾರೆ.

ಒಮ್ಮೆ ನಗರದಲ್ಲಿ ಐದಾರು ಕಡೆ ಈ ರೀತಿಯ ಕೃತ್ಯ ನಡೆಸಿ ಹೊರ ಹೋಗುವ ಇವರು ಮತ್ತೆ ಈ ಕೃತ್ಯ ಮಾಸುವವರೆಗೂ ಮತ್ತೊಂದು ನಗರದಲ್ಲಿ ತಮ್ಮ ಕೈಚಳಕ ತೋರುತ್ತಾ ಇಲ್ಲಿಯವರೆಗೆ ನಗರದಲ್ಲಿ ನಡೆದ ಸರಗಳ್ಳತನವನ್ನು ಸ್ಥಳೀಯ ಕಳ್ಳರೇ ನಡೆಸಿದ್ದರು ಆದರೆ ಈ ಬಾರಿ ನಡೆದಿರುವ ಸರಣಿ ಕಳ್ಳತನದಲ್ಲಿ ಇವರ ಪಾತ್ರವಿಲ್ಲ ಎಂದು ತಿಳಿಸುತ್ತವೆ ಪೊಲೀಸ್ ಮೂಲಗಳು.

ಸಾವಿನ ಮನೆಯನ್ನೇ ಹುಡುಕಿ ಕೈಚಳಕ ತೋರಿಸುತ್ತಿದ್ದ ಕಳ್ಳ ಅರೆಸ್ಟ್‌

ನಿನ್ನೆ ರಾತ್ರಿ ವಿದ್ಯಾರಣ್ಯಪುರಂ ವ್ಯಾಪ್ತಿಯ ರಾಮಕೃಷ್ಣ ರಸ್ತೆಯಲ್ಲಿರುವ ಬಿಂದು ಬೇಕರಿ ಬಳಿ ನಡೆದು ಹೋಗುತ್ತಿದ್ದ ಎಂಬುವರ ಕತ್ತಿನಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರವನ್ನು ಬೈಕ್ ನಲ್ಲಿ ಬಂದು ಕದ್ದೊಯ್ದಿದ್ದಾರೆ. ಮಹದೇವಪುರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗರತ್ನ ಎಂಬುವರ ಕತ್ತಿನಲ್ಲಿದ್ದ 15 ಗ್ರಾಂ ತೂಕದ ಚಿನ್ನದ ಸರವನ್ನು ಬೈಕ್ ನಲ್ಲಿ ಅಪಹರಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru police started new operation fast track plan for find out chain snatchers. Making quick amends, the Police were on city roads from as early as 5 am today along with Inspectors and higher officers equipped with mikes for public announcements, Interceptors, Garuda and Cheetah vehicles to chase suspicious vehicles and metal barricades to check speeding bikes and other two-wheelers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more