ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಭಯೋತ್ಪಾದನಾ ನಿಗ್ರಹ ದಳ ರಚನೆ

|
Google Oneindia Kannada News

ಮೈಸೂರು, ಮಾರ್ಚ್ 7: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ರಚಿಸಲಾಗಿದ್ದು, ಒಟ್ಟು 66 ಸಿಬ್ಬಂದಿ ಈ ತಂಡದಲ್ಲಿದ್ದಾರೆ.

ನಗರ ಸಶಸ್ತ್ರ ಮೀಸಲು ಪಡೆಯ ಎಸಿಪಿ ಎಂ.ಕೆ.ನಾಗರಾಜು ಮತ್ತು ಕೇಂದ್ರ ಮೀಸಲು ಪಡೆಯ ಇನ್‌ಸ್ಪೆಕ್ಟರ್ ಅಶೋಕ್‌ಕುಮಾರ್ ನೇತೃತ್ವದಲ್ಲಿ 12 ಮಂದಿಯ ಪ್ರಧಾನ ತಂಡವೊಂದನ್ನು ರಚಿಸಲಾಗಿದೆ.

ರಾಜ್ಯದ 5 ಜಿಲ್ಲೆಗಳಲ್ಲಿ ಸದ್ಯದಲ್ಲಿಯೇ ಭಯೋತ್ಪಾದನೆ ನಿಗ್ರಹ ಪಡೆ ರಚನೆರಾಜ್ಯದ 5 ಜಿಲ್ಲೆಗಳಲ್ಲಿ ಸದ್ಯದಲ್ಲಿಯೇ ಭಯೋತ್ಪಾದನೆ ನಿಗ್ರಹ ಪಡೆ ರಚನೆ

ಇದಲ್ಲದೇ, ಪ್ರತಿ ಠಾಣೆಯಲ್ಲೂ ಸಬ್‌ಇನ್‌ಸ್ಪೆಕ್ಟರ್ ಮತ್ತು ಸಹಾಯಕ ಸಬ್‌ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಮುಖ್ಯ ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್ ಗಳನ್ನು ಒಳಗೊಂಡ ಪ್ರತ್ಯೇಕ ತಂಡಗಳು ಇರಲಿವೆ.

Mysuru police started Anti-Terrorist Squad in the city

ಇವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ತರಬೇತಿ ನೀಡಲಾಗುವುದು. ಲೋಕಸಭಾ ಚುನಾವಣೆಯ ನಂತರ ಈ ತಂಡವನ್ನು ಭಯೋತ್ಪಾದನಾ ನಿಗ್ರಹದ ಉದ್ದೇಶಕ್ಕಾಗಿಯೇ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ತಿಳಿಸಿದರು.

ಒಂದು ವೇಳೆ ಭಯೋತ್ಪಾದಕರು ದಾಳಿ ನಡೆಸಿದರೆ ಕೂಡಲೇ ಅದನ್ನು ನಿರ್ವಹಿಸುವ ಮಾರ್ಗೋಪಾಯಗಳನ್ನು ಈ ತಂಡವು ಕಂಡುಕೊಳ್ಳಲಿದೆ. ಇಂತಹ ದಾಳಿ ನಡೆಯದಂತೆ ಎಚ್ಚರಿಕೆ ವಹಿಸಿ ಮಾಹಿತಿ ಕಲೆ ಹಾಕುವುದೂ ತಂಡದ ಕೆಲಸವಾಗಿದೆ.

 ಏರ್ ಸ್ಟ್ರೈಕ್ ಸುಳ್ಳು ಎಂದ ಸಂಸ್ಥೆಗೆ ವಾಯುಸೇನೆಯಿಂದ ಮಂಗಳಾರತಿ ಏರ್ ಸ್ಟ್ರೈಕ್ ಸುಳ್ಳು ಎಂದ ಸಂಸ್ಥೆಗೆ ವಾಯುಸೇನೆಯಿಂದ ಮಂಗಳಾರತಿ

ಪ್ರವೀಣ್ ಸೂದ್ ನಗರ ಪೊಲೀಸ್ ಕಮಿಷನರ್ (2004- 2007) ಆಗಿದ್ದಾಗಲೂ ಭಯೋತ್ಪಾದನಾ ನಿಗ್ರಹ ದಳ ರಚಿಸಲಾಗಿತ್ತು. ಈ ವೇಳೆ ಪಾಕ್ ಮೂಲದ ಭಯೋತ್ಪಾದಕನೊಬ್ಬನನ್ನು ಬಂಧಿಸಲಾಗಿತ್ತು. ನಂತರದ ದಿನಗಳಲ್ಲಿ ಈ ತಂಡ ನಿಷ್ಕ್ರಿಯವಾಗಿತ್ತು. ಸದ್ಯ ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಮತ್ತೆ ಭಯೋತ್ಪಾದನಾ ನಿಗ್ರಹ ದಳ ರಚಿಸಿದ್ದಾರೆ.

 ಬಾಲಕೋಟ್ ದಾಳಿ ಸುಳ್ಳಾ? ಉಪಗ್ರಹ ಚಿತ್ರಗಳು ಹೇಳುವ ಹೊಸಕತೆ ನಿಜಾನಾ? ಬಾಲಕೋಟ್ ದಾಳಿ ಸುಳ್ಳಾ? ಉಪಗ್ರಹ ಚಿತ್ರಗಳು ಹೇಳುವ ಹೊಸಕತೆ ನಿಜಾನಾ?

ಕೆಲದಿನಗಳ ಹಿಂದಷ್ಟೇ ರಾಜ್ಯ ಪೊಲೀಸ್ ಮಹಾನಿರ್ದೇಶಕರರಾದ ನೀಲಮಣಿ ಎನ್.ರಾಜು ಮೈಸೂರು ಸೇರಿದಂತೆ ಇತರ ಕಮಿಷನರೇಟ್ ನಗರಗಳಲ್ಲೂ ಭಯೋತ್ಪಾದನಾ ನಿಗ್ರಹ ದಳ ರಚಿಸುವಂತೆ ಸೂಚಿಸಿದ್ದರು.

English summary
The Anti Terrorism Squad (ATS) was created at the Mysuru city police commissioner's range. There are 66 staff in this team. 12-members main team led by Inspector Ashok Kumar, ACP MK Nagaraju and Urban Armed Reserve Force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X