ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಕಾರಾಗೃಹದ ಮೇಲೆ ದಿಢೀರ್ ಪೊಲೀಸ್ ದಾಳಿ

|
Google Oneindia Kannada News

ಮೈಸೂರು, ಏಪ್ರಿಲ್ 17:ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದೆಂದು ನಿರ್ಧರಿಸಿರುವ ಪೊಲೀಸರು ನಗರದ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡರು.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಇದೇ ವೇಳೆ ಖೈದಿಯೋರ್ವರ ಬಳಿ 1900 ರೂ ಹಣ ದೊರಕಿದೆ. ನಗರ ಪೊಲೀಸ್ ಆಯುಕ್ತ ಕೆ. ಟಿ ಬಾಲಕೃಷ್ಣ ಹಾಗೂ ಡಿಸಿಪಿ ಮುತ್ತುರಾಜ್ ಅವರ ನೇತೃತ್ವದಲ್ಲಿ ಸುಮಾರು 160 ಮಂದಿ ಪೊಲೀಸರು ಕಾರಾಗೃಹದ ಮೇಲೆ ದಾಳಿ ನಡೆಸಿದ್ದು, ದಾಳಿ ಕಾರ್ಯಕ್ಕಾಗಿ ಪೊಲೀಸರು 17 ತಂಡಗಳನ್ನು ರಚಿಸಿಕೊಂಡಿದ್ದರು.

Mysuru police raided on central prison of Mysore

 ಆಂಬ್ಯುಲೆನ್ಸ್‌, ಪೊಲೀಸ್ ವಾಹನಗಳಲ್ಲೂ ಆಯೋಗದಿಂದ ತಪಾಸಣೆ ಆಂಬ್ಯುಲೆನ್ಸ್‌, ಪೊಲೀಸ್ ವಾಹನಗಳಲ್ಲೂ ಆಯೋಗದಿಂದ ತಪಾಸಣೆ

ತಂಡದಲ್ಲಿದ್ದ ಪೊಲೀಸರು ಜೈಲು ಆವರಣದ ಪ್ರತಿ ಬ್ಯಾರಕ್ ಗಳನ್ನು ಕೂಡ ಕುಲಂಕಷವಾಗಿ ಪರಿಶೀಲಿಸಿದರು. ಪರಿಶೀಲನೆ ಬಳಿಕ 1900 ರೂ ಹಣ ದೊರೆತಿದ್ದು, ಈ ಹಣದ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Mysuru police raided on central prison of Mysore

 ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ:ಮತದಾನಕ್ಕೆ ಸಕಲ ಸಿದ್ಧತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ:ಮತದಾನಕ್ಕೆ ಸಕಲ ಸಿದ್ಧತೆ

ಇನ್ನು ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ನಗರ ಪೊಲೀಸರು ಪಥ ಸಂಚಲನ ನಡೆಸಿ ಅರಿವು ಮೂಡಿಸಿದರು.

English summary
Lok Sabha Elections 2019:Mysuru Police Commissioner K.T.Balakrishna, DCP M.Police raided on central prison of Mysore. They got 1900 rs cash on that time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X