ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೇಮಿಗಳ ದಿನ ಹಿಂಗೆಲ್ಲ ಮಾಡಂಗಿಲ್ಲ : ಪೊಲೀಸರ ಎಚ್ಚರಿಕೆ

By Kiran B Hegde
|
Google Oneindia Kannada News

ಮೈಸೂರು, ಫೆ. 12: ಪ್ರೇಮಿಗಳ ದಿನಾಚರಣೆಗೆ ಎಷ್ಟೇ ವಿರೋಧ ಬಂದಿದ್ದರೂ ಪ್ರೇಮಿಗಳು ಸಂಭ್ರಮದಿಂದ ಸಜ್ಜಾಗಿದ್ದಾರೆ. ಮೋಜು ಮಸ್ತಿ ಹೆಸರಿನಲ್ಲಿ ಅನೈತಿಕ ಘಟನೆಗಳು ನಡೆಯುತ್ತವೆ ಎಂದು ಹಲವು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಆದ್ದರಿಂದ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ವಿಶೇಷವಾಗಿ ಯುವಕ, ಯುವತಿಯರು ಮೋಜಿನ ಹೆಸರಲ್ಲಿ ಅನೈತಿಕ ಕಾರ್ಯ ನಡೆಸದಂತೆ ಮೈಸೂರು ನಗರ ಪೊಲೀಸರು ಆದೇಶ ಹೊರಡಿಸಿದ್ದಾರೆ. [ಪ್ರೇಮಿಗಳಿಗೆ ಮುತಾಲಿಕ್ ಎಚ್ಚರಿಕೆ]

lovers

ಏನೇನು ಮಾಡಬಾರದು ನೋಡಿ?

1. ಪ್ರೀತಿಯ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸುವಂತಿಲ್ಲ.
2. ರೇವ್ ಪಾರ್ಟಿ, ನಂಗಾನಾಚ್ ಮುಂತಾದ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಬಾರದು. [ಪ್ರೇಮಿ ಮರೆತು ತಂದೆ, ತಾಯಿ ಪೂಜಿಸಿ]
3. ಅಮಲು ತರುವ ಗಾಂಜಾ, ಅಫೀಮು, ಚರಸ್ ಹಾಗೂ ಇತರೆ ಮಾದಕ ವಸ್ತುಗಳನ್ನು ಉಪಯೋಗಿಸಬಾರದು.
4. ಪ್ರೇಮಿಗಳ ದಿನಾಚರಣೆ ವಿರೋಧಿಸಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಮಾಡುವ ನೆಪದಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಪ್ರತಿಭಟನೆ / ದಾಳಿ/ ಹಲ್ಲೆ ಮಾಡಬಾರದು.
5. ಪ್ರೇಮಿಗಳ ಗ್ರೀಟಿಂಗ್ಸ್ ಹಾಗೂ ಪ್ರೇಮ ಸಂಕೇತವನ್ನು ಸುಡಬಾರದು/ವಿರೂಪಗೊಳಿಸಬಾರದು.
6. ಪ್ರೇಮಿಗಳ ದಿನಾಚರಣೆ ಆಚರಿಸುವಾಗ ಸಾರ್ವಜನಿಕ ಸ್ಥಳದಲ್ಲಿ ಸಭ್ಯತೆಯ ಎಲ್ಲೆ ಮೀರಬಾರದು. [ಸಿಕ್ಕಿಬಿದ್ದರೆ ಮದುವೆ ಗ್ಯಾರಂಟಿ]
7. ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಬಾರದು.

ಈ ನಿಬಂಧನೆಗಳನ್ನು ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ನಿಷೇಧಿತ ಚಟುವಟಿಕೆ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ (ದೂ. 100 ಅಥವಾ 2418139 ಅಥವಾ 2418339) ಮಾಹಿತಿ ನೀಡಬೇಕೆಂದು ಪೊಲೀಸ್ ಆಯುಕ್ತರು ಕೋರಿದ್ದಾರೆ.

English summary
Mysuru police commissioner has issued some restrictions for the celebrations of valentines day on 14th February. If anybody violates the instructions people can call police control room 100 or 2418139 or 2418339.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X